Home> Business
Advertisement

ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ Jeep Compact Electric SUV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಜೀಪ್‌ನ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಅದೇ ಸಮಯದಲ್ಲಿ, ಅದರ ಎಲೆಕ್ಟ್ರಿಕ್ ವೆರಿಯೇಂಟ್ 2024-25ರಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ Jeep Compact Electric SUV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ನವದೆಹಲಿ : ದೇಶದಲ್ಲಿ New sub-4 meter SUVಗೆ ಭಾರೀ ಬೇಡಿಕೆ ಇದೆ. ಈ ನಡುವೆಯೇ, ಜನಪ್ರಿಯ ಕಾರು ಕಂಪನಿ ಜೀಪ್ ಕೂಡ ಶೀಘ್ರವೇ ಹೊಸ ಕಾಂಪ್ಯಾಕ್ಟ್ ಎಸ್ ಯುವಿಯನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಇನ್ನು ಜೀಪ್ ನ ಮುಂಬರುವ ಎಸ್ ಯುವಿ ಎಲೆಕ್ಟ್ರಿಕ್ ಆಗಿರಲಿದೆ ಎನ್ನುವುದು ಇನ್ನೂ ಸಂತೋಷದ ವಿಷಯವಾಗಿದೆ. ಇದರರ್ಥ ಮುಂಬರುವ ದಿನಗಳಲ್ಲಿ, Tata Nexon EV ಗೆ ಪೈಪೋಟಿ ನೀಡಲು, Jeep Compact Electric SUV ಜೊತೆಗೆ ಮಹೀಂದ್ರ eXUV300 ಸೇರಿದಂತೆ ಇತರ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬರಲಿವೆ. ಮುಂದಿನ ದಿನಗಳಲ್ಲಿ, ಜನರು ಎಲೆಕ್ಟ್ರಿಕ್ ಕಾರುಗಳಿಗೆ ಎಸ್ಯುವಿ ಆಯ್ಕೆಗಳನ್ನು ಸಹ ಹೊಂದಿರುತ್ತಾರೆ.

ಸ್ಪೋರ್ಟ್ಸ್ ಲುಕ್ ನೊಂದಿಗೆ ಬರಲಿದೆ Jeep Compact Electric SUV :

ಹಿಂದೆ, ಜೀಪ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯ (Electric SUV) ರೆಂಡರ್ ಅನ್ನು ಬಹಿರಂಗ ಪಡಿಸಲಾಗಿತ್ತು. ಇದು ಸ್ಪೋರ್ಟ್ಸ್ ಲುಕ್‌ನೊಂದಿಗೆ ಬರಲಿದೆ. ನೋಡಲು ಸಾಕಷ್ಟು ಅದ್ಭುತವಾಗಿರುತ್ತದೆ.  ಕ್ಲೆಬರ್ ಸಿಲ್ವಾ ಎಂಬ ಡಿಜಿಟಲ್ ಕಲಾವಿದ ಜೀಪ್‌ನ ಮುಂಬರುವ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯ ರೆಂಡರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರ ರಿಯರ್ ಮತ್ತು ಮುಂಭಾಗ ಸಾಕಷ್ಟು ಸ್ಪೋರ್ಟಿ ಮತ್ತು ವಿಶೇಷವಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು (Compact Electric SUV) ಜೀಪ್ ಗ್ರೂಪ್ ಪಿಎಸ್‌ಎಯ ಕಾಮನ್  ಮಾಡ್ಯುಲರ್ ಪ್ಲಾಟ್‌ಫಾರ್ಮ್ (CMP) ನಲ್ಲಿ ಡೆವೆಲೊಪ್ ಮಾಡಲಾಗುವುದು. ಪಿಎಸ್‌ಎ ಗ್ರೂಪ್‌ನ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿ ಸಿಟ್ರೊಯೆನ್ ಸಿ 3 ನಂತಹ 1.2 ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 130 bhpವರೆಗೆ ಪವರ್ ಪಡೆಯುತ್ತದೆ.

ಇದನ್ನೂ ಓದಿ: Pension Scheme : ಸರ್ಕಾರಿ ಪಿಂಚಣಿ ಯೋಜನೆ : ವಿಧವೆ, ವಿಚ್ಛೇದಿತ ಮಗಳಿಗೂ ಕುಟುಂಬ ಪಿಂಚಣಿ ನಿಯಮಗಳು!

ಕಾಂಪ್ಯಾಕ್ಟ್ ಎಸ್‌ಯುವಿ 2023 ರಲ್ಲಿ ಬಿಡುಗಡೆ  : 
ಜೀಪ್‌ನ (Jeep) ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಅದೇ ಸಮಯದಲ್ಲಿ, ಅದರ ಎಲೆಕ್ಟ್ರಿಕ್ ವೆರಿಯೇಂಟ್ 2024-25ರಲ್ಲಿ ಬಿಡುಗಡೆಯಾಗಲಿದೆ. ಮುಂಬರುವ ದಿನಗಳಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಅದು ಹ್ಯಾಚ್ ಬ್ಯಾಕ್, ಸೆಡಾನ್ ಮತ್ತು ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿರುತ್ತದೆ. ಟಾಟಾ ಟಿಗೋರ್ ಇವಿ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಮುಂದಿನ ವರ್ಷದ ವೇಳೆಗೆ ಮಹೀಂದ್ರ ಎಕ್ಸ್ ಯುವಿ (Mahindra XUV) 300 ಎಲೆಕ್ಟ್ರಿಕ್ ಬಿಡುಗಡೆಯಾಗಲಿದೆ.

ಇದನ್ನೂ ಓದಿ: NPS ಅಡಿಯ ನೌಕರರ ಪಿಂಚಣಿಯ PSB ಕೊಡುಗೆಯನ್ನು ಶೇ.14 ರಷ್ಟು ಏರಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More