ನವದೆಹಲಿ: ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ(5 State Election 2022)ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಯುಪಿಯಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಕೇವಲ 1 ವಾರ ಮಾತ್ರ ಬಾಕಿ ಉಳಿದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಕೇವಲ 1 ವರ್ಷ ಮಾತ್ರ ಬಾಕಿ ಇದೆ. ಹೀಗಾಗಿ ಈ ಸುದ್ದಿ ನಿಮಗೆ ಉಪಯೋಗವಾಗಬಹುದು. ನೀವು ಮತದಾನಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಒಮ್ಮೆ ಪರಿಶೀಲಿಸಿ. ಮತದಾರರ ಪಟ್ಟಿ(Voter List)ಯಲ್ಲಿ ಹೆಸರು ಪರಿಶೀಲಿಸಲು ಕಂಪ್ಯೂಟರ್ ಅಥವಾ ಮೊಬೈಲ್ ಬೇಕು. ಚುನಾವಣಾ ಆಯೋಗದ ವೆಬ್ಸೈಟ್ನಿಂದ ಇಂಟರ್ನೆಟ್ನಲ್ಲಿ ನಿಮ್ಮ ಹೆಸರನ್ನು ನೋಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ?(Name In Voter List) ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು?
ಇದನ್ನೂ ಓದಿ: Central Government Jobs: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆ ಖಾಲಿ
ಮತದಾರರ ಪಟ್ಟಿಯಲ್ಲಿ ಹೆಸರು ತಿಳಿಯುವ ಮತ್ತೊಂದು ಮಾರ್ಗ
ಮೊದಲನೆಯದಾಗಿ ನೀವು ಮತದಾರರ ಪಟ್ಟಿಯನ್ನು ಪರಿಶೀಲಿಸಲು https://Electoralsearch.in ವೆಬ್ಸೈಟ್ಗೆ ಹೋಗಿ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು 2 ಮಾರ್ಗಗಳಿವೆ. ನಿಮ್ಮ ಹೆಸರು, ವಿಳಾಸ ಇತ್ಯಾದಿ ವಿವರಗಳಿಂದ (Search Details) ಅಥವಾ ಗುರುತಿನ ಚೀಟಿಯ ವಿವರಗಳಿಂದ (Search By EPIC No.)ನೀವು ಹುಡುಕಬಹುದು.
1. ಹೆಸರು, ವಿಳಾಸ ಈ ರೀತಿಯ ಪ್ರಮುಖ ವಿವರಗಳ ಮೂಲಕ ಹುಡುಕಿ
ಇದನ್ನೂ ಓದಿ: NEET PG Exam Postpone: ನೀಟ್ ಸ್ನಾತಕೋತ್ತರ 2022 ಮುಂದೂಡಿಕೆ, ಆರೋಗ್ಯ ಸಚಿವಾಲಯ ನೀಡಿದ ಕಾರಣ ಇಲ್ಲಿದೆ
2. ID ಸಂಖ್ಯೆ / EPIC ಸಂಖ್ಯೆ ಮೂಲಕ ಪರಿಶೀಲಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.