Home> Business
Advertisement

IRCTC News Update: Ticket Book ಮಾಡುವಾಗ ಈ ಹೊಸ ನಿಯಮ ನಿಮಗೆ ತಿಳಿದಿರಲಿ

IRCTC News Update: ಟ್ರೈನ್ ಟಿಕೆಟ್ ಕಾಯ್ದಿರಿಸಬೇಕೆ? ಒಂದು ವೇಳೆ ಟಿಕೆಟ್ ಬುಕ್ ಮಾಡುವ ವೇಳೆ ವೈಟಿಂಗ್ ಲಿಸ್ಟ್ ತುಂಬಾ ದೊಡ್ಡದಾಗಿದ್ದರೆ, ಟಿಕೆಟ್ ಬುಕ್ ಮಾಡುವಾಗ ಕೆಲ ಸಂಗತಿಗಳನ್ನು ಗಮನಿಸುವುದು ತುಂಬಾ ಆವಶ್ಯಕ.

IRCTC News Update: Ticket Book ಮಾಡುವಾಗ ಈ ಹೊಸ ನಿಯಮ ನಿಮಗೆ ತಿಳಿದಿರಲಿ

IRCTC News Update: ನವದೆಹಲಿ- ಟ್ರೈನ್ ಟಿಕೆಟ್ ಕಾಯ್ದಿರಿಸಬೇಕೆ? ಒಂದು ವೇಳೆ ಟಿಕೆಟ್ ಬುಕ್ ಮಾಡುವ ವೇಳೆ ವೈಟಿಂಗ್ ಲಿಸ್ಟ್ ತುಂಬಾ ದೊಡ್ಡದಾಗಿದ್ದರೆ, ಟಿಕೆಟ್ ಬುಕ್ ಮಾಡುವಾಗ ಕೆಲ ಸಂಗತಿಗಳನ್ನು ಗಮನಿಸುವುದು ತುಂಬಾ ಆವಶ್ಯಕ. ಭಾರತೀಯ ರೈಲು ಇಲಾಖೆಯ ಹೊಸ ನಿಯಮದ ಅಡಿ ಪ್ರತಿಯೊಂದು ಟ್ರೈನ್ ನಲ್ಲಿ ವೇಟಿಂಗ್ ಟಿಕೆಟ್ ಬುಕ್ ಮಾಡಲು Maximum Waiting List Limit ನಿರ್ಧರಿಸಲಾಗಿದೆ. ಈ ಲಿಮಿಟ್ ಮುಕ್ತಾಯವಾದ ಬಳಿಕ ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡಿದರೆ, ನಿಮ್ಮ ಖಾತೆಯಿಂದ ಹಣ ವಜಾಗೊಳ್ಳುತ್ತದೆ. ಆದರೆ, ನಿಮಗೆ ಟಿಕೆಟ್ ಸಿಗುವುದಿಲ್ಲ.

ಖಾತೆಗೆ ವಾಪಸ್ ಬರಲಿದೆ ಹಣ

ಟಿಕೆಟ್ ಬುಕ್ ಮಾಡುವಾಗ ಒಂದು ವೇಳೆ ನಿಮ್ಮ ಖಾತೆಯಿಂದ ಹಣ ವಜಾಗೊಂಡಿದ್ದು ಮತ್ತು ನಿಮಗೆ ಟಿಕೆಟ್ ದೊರೆತಿಲ್ಲ ಎಂದಾದಲ್ಲಿ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಮುಂದಿನ 3-4 working daysಗಳಲ್ಲಿ ನಿಮ್ಮ ಹಣ ನಿಮ್ಮ ಖಾತೆಗೆ ಮರಳಲಿದೆ. ಇದಕ್ಕಾಗಿ ನೀವು ಯಾವುದೇ ರೀತಿಯ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕಾದ ಅವಶ್ಯಕತೆ ಇಲ್ಲ. ಸ್ವಯಂಚಾಲಿತ ಸಿಸ್ಟಂ ಮೂಲಕ ಈ ಹಣ ನಿಮ್ಮ ಖಾತೆಗೆ ಮರಳಲಿದೆ.

ಇದನ್ನು ಓದಿ-Good News: ಟಿಕೆಟ್ ರದ್ದತಿ Refund ನಿಯಮದಲ್ಲಿ ಬದಲಾವಣೆ

ಕೇವಲ ಕನ್ಫರ್ಮ್ ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
ಕೊರೊನಾ ಮಹಾಮಾರಿಯ ಹಿನ್ನೆಲೆ ಭಾರತೀಯ ರೈಲ್ವೆ (Indian Railways) ಅತಿ ಕಡಿಮೆ ರೈಲುಗಳನ್ನು ಹಳಿಗಳಿಗೆ ಇಳಿಸಿದೆ. ಹೀಗಾಗಿ ಟ್ರೈನ್ ನಲ್ಲಿ ಕನ್ಫರ್ಮ್ ಟಿಕೆಟ್ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕಡಿಮೆ ಟ್ರೈನ್ ಗಳಲ್ಲಿ ಉದ್ದನೆಯ ವೇಟಿಂಗ್ ಲಿಸ್ಟ್ ಕಂಡುಬರುತ್ತಿದೆ. ಇಂತಹುದರಲ್ಲಿ ಒಂದು ವೇಳೆ ಟಿಕೆಟ್ ಬುಕ್ ಮಾಡುವಾಗ ನಿಮಗೆ ಟಿಕೆಟ್ ದೊರೆತಿಲ್ಲ ಹಾಗೂ ಹಣ ಖಾತೆಯಿಂದ ವಜಾಗೊಂಡಿದ್ದಲ್ಲಿ ನೀವು ಚಿಂತಿಸಬೇಕಾದ ಆವಶ್ಯಕತೆ ಇಲ್ಲ.

ಇದನ್ನು ಓದಿ- Indian Railways: ತನ್ನ ಯಾತ್ರಿಗಳಿಗೆ ಮತ್ತೊಂದು ಉಡುಗೊರೆ ನೀಡಿದ ಭಾರತೀಯ ರೇಲ್ವೆ

ರೀಫಂಡ್ ಕುರಿತು ರೈಲು ಇಲಾಖೆ ನೀಡಿದ ಮಾಹಿತಿ
Train tickets cancellation refund: ಕೊರೊನಾ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಕೇಂದ್ರ ರೇಲ್ವೆ ಸಚಿವಾಲಯ ತನ್ನ ಎಲ್ಲ ಯಾತ್ರಿ ರೈಲುಗಳ ಪ್ರಯಾಣಕ್ಕೆ ತಡೆ ನೀಡಿತ್ತು. ಆದರೆ, ಕೆಲ ಸಮಯದ ನಂತರ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಈ ಕಾಲಾವಧಿಯಲ್ಲಿ ಜನರು ತಮ್ಮ ಗಮ್ಯಸ್ಥಾನ ತಲುಪಲು ಟಿಕೆಟ್ ಕಾಯ್ದಿರಿಸಿದ್ದರು. ಇವರಲ್ಲಿ ಕೆಲ ಜನರು ತಮ್ಮ ಟಿಕೆಟ್ ಕ್ಯಾನ್ಸಲ್ ಕೂಡ ಮಾಡಿದ್ದರು. ಕ್ಯಾನ್ಸಲ್ ಮಾಡಿದವರಿಗೆ ರೈಲ್ವೆ ಇಲಾಖೆ ಅವರ ಹಣ ರೀಫಂಡ್ ಮಾಡಿತ್ತು. ಆದರೆ, ಇನ್ನೂ ಹಲವು ಜನರಿಗೆ ಅವರ ಹಣ ಮರುಪಾವತಿಯಾಗಿಲ್ಲ. ಹೀಗಾಗಿ ರೇಲ್ವೆ ಸಚಿವಾಲಯ ರೇಲ್ವೆ ಟಿಕೆಟ್ ಕ್ಯಾನ್ಸಲ್ ಮಾಡುವ ನಿಯಮಗಳಲ್ಲಿ ಸಡಿಲಿಕೆ ನೀಡಿದೆ.

ಇದನ್ನು ಓದಿ- IRCTC/Indian Railways:ಟ್ರೈನ್ ನಲ್ಲಿ ಸೀಟ್ ಸಿಗಲಿಲ್ಲವೇ? ಸಿಗಲಿದೆ ಬಸ್ ಸೇವೆ

ಟೈಮ್ ಲಿಮಿಟ್ ನಲ್ಲಿ ಹೆಚ್ಚಳ
ಈ ಕುರಿತು ಹೇಳಿಕೆ ನೀಡಿರುವ ರೇಲ್ವೆ ಸಚಿವಾಲಯ ಹಲವು ಯಾತ್ರಿಗಳ ಕ್ಯಾನ್ಸಲ್ ಮಾಡಲಾಗಿರುವ ಟಿಕೆಟ್ ಗಳ ಹಣ ಮರುಪಾವತಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಜೋನಲ್ ಟಿಕೆಟ್ ಕ್ಯಾನ್ಸಲ್ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಗಳು ಕೇಳಿಬಂದಿದ್ದವು. ಹೀಗಾಗಿ ಸಚಿವಾಲಯ ಈ ಅವಧಿಯನ್ನು 6 ತಿಂಗಳಿನಿಂದ 9 ತಿಂಗಳುಗಳವರೆಗೆ ಹೆಚ್ಚಿಸಿದೆ. ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಒಂದು ವೇಳೆ ಯಾವುದೇ ಯಾತ್ರಿ ಮಾರ್ಚ್ 21, 2020 ರಂದ ಜುಲೈ 31,2020ರ ನಡುವೆ ಯಾತ್ರೆಗಾಗಿ ಟಿಕೆಟ್ ಕಾಯ್ದಿರಿಸಿದ್ದು, ಮತ್ತು ನಂತರದ ಪರಿಸ್ಥಿತಿಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದ ಕಾರಣ ಅವರ ಹಣ ಮರುಪಾವತಿಯಾಗದೆ ಇದ್ದರೆ, 9 ತಿಂಗಳವರೆಗೆ ಅವರು ತಮ್ಮ ಹಣವನ್ನು ಹಿಂಪಡೆಯಬಹುದು ಎಂದು ಹೇಳಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More