Home> Business
Advertisement

Indian Railways: ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

Indian Railways: ಪ್ರಧಾನಿ ಮೋದಿಯ ವರು ರೈಲ್ವೆ ಉದ್ಯೋಗಕ್ಕೆ ಅರ್ಹತೆ ಪಡೆದವರಿಗೆ ಒಂದೇ ಸ್ಥಳದಲ್ಲಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದು, ಉಳಿದ ಕೇಂದ್ರ ಸಚಿವರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಪತ್ರಗಳನ್ನು ವಿತರಿಸಲಿದ್ದಾರೆ.

Indian Railways: ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಮುಂದಿನ ತಿಂಗಳು ನಡೆಯಲಿರುವ ರೋಜಗಾರ್ ಮೇಳದಲ್ಲಿ ಹೊಸದಾಗಿ ನೇಮಕಗೊಂಡಿರುವ 50 ಸಾವಿರ ಮಂದಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಿದೆ.

ಭಾರತೀಯ ರೈಲ್ವೆ ಇಲಾಖೆ ದೇಶದಾದ್ಯಂತ 50 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜಿಸಲಿದೆ. ಈ ವೇಳೆ ಟ್ರ್ಯಾಕ್ ಮೆಂಟೇನರ್, ಹೆಲ್ಪರ್, ಪಾಯಿಂಟ್‌ಮನ್, ವೆಲ್ಡರ್ ಮತ್ತು ಕಮರ್ಷಿಯಲ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ಲೆವೆಲ್ -1 ವರ್ಗ ಸೇರಿದಂತೆ ಗ್ರೂಪ್ ಸಿ ಹುದ್ದೆಗಳಿಗೆ ಆಯ್ಕೆಯಾದವರಿಗೆ ಹಸ್ತಾಂತರಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

ಪ್ರಧಾನಿ ಮೋದಿಯ ವರು ರೈಲ್ವೆ ಉದ್ಯೋಗಕ್ಕೆ ಅರ್ಹತೆ ಪಡೆದವರಿಗೆ ಒಂದೇ ಸ್ಥಳದಲ್ಲಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದು, ಉಳಿದ ಕೇಂದ್ರ ಸಚಿವರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಪತ್ರಗಳನ್ನು ವಿತರಿಸಲಿದ್ದಾರೆ.

ಇದನ್ನೂ ಓದಿ: Viral Video: ಪ್ರೀತಿ ಬೇಕಾ! ಹಣ ಬೇಕಾ..! ಹುಡುಗಿಯ ಆಯ್ಕೆಗೆ ಶಾಕ್ ಆದ ಹುಡುಗ; ಅಂತಹದ್ದೇನಂದ್ಳು ನೀವೇ ಕೇಳಿ

ಈ ವರ್ಷದ ಫೆಬ್ರವರಿ ವೇಳೆಗೆ ರಾಷ್ಟ್ರೀಯ ಸಾರಿಗೆಯಲ್ಲಿ ಒಟ್ಟು 2,885 ಗೆಜೆಟೆಡ್ ಹುದ್ದೆಗಳು ಮತ್ತು 3,12,895 ನಾನ್‌ ಗೆಜೆಟೆಡ್ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಲೆವೆಲ್ -1ರಲ್ಲಿ 1,03,769 ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ, ಇದಕ್ಕಾಗಿ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. 50 ಸಾವಿರ ನೇಮಕಾತಿ ಪತ್ರಗಳು ಕೆಲವೇ ದಿನಗಳಲ್ಲಿ ಸಿದ್ಧವಾಗುತ್ತವೆ. ರೋಜಗಾರ್‌ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇದನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರೈಲ್ವೆ 1,03,769 ಹುದ್ದೆಗಳನ್ನು ಭರ್ತಿ ಮಾಡಲು ಉದ್ಯೋಗ ಪ್ರಕಟಣೆ ಹೊರಡಿಸಿದಾಗ, 7,19,556 ಸ್ನಾತಕೋತ್ತರ ಪದವೀಧರರು, 39,25,822 ಬಿ-ಟೆಕ್ ಸೇರಿದಂತೆ 39,25,822 ಪದವೀಧರರು, 59,10,255 ಮೆಟ್ರಿಕ್ಯುಲೇಟ್‌ ಮತ್ತು 5,98,855 ಐಟಿಐ ಡಿಪ್ಲೊಮಾ ಹೊಂದಿರುವವರು ಸೇರಿದಂತೆ 1 ಕೋಟಿಗೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ದೇಶದಾದ್ಯಂತ 5 ಹಂತಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಯಿತು.

ಲೆವೆಲ್-1 ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪೂರ್ಣಗೊಳಿಸುವುದು ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಮೊದಲ ಹಂತವಾಗಿದ್ದು, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಅಂತಿಮ ಆಯ್ಕೆಯ ಮೊದಲು ಮಾತ್ರ ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗುತ್ತಾರೆ.

ಇದನ್ನೂ ಓದಿ: ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ, ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More