Home> Business
Advertisement

BIG Update: ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಇಲಾಖೆ!

Indian Railway Update: ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದೆ. ನೀವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಇನ್ಮುಂದೆ ರೈಲ್ವೇ ನಿಮಗಾಗಿ ಈ ವಿಶೇಷ ಸೌಲಭ್ಯವನ್ನು ಆರಂಭಿಸಿದೆ.
 

BIG Update: ದೇಶದ ಕೋಟ್ಯಾಂತರ ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಇಲಾಖೆ!

Indian Railway Update: ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದೆ. ನೀವೂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಇನ್ಮುಂದೆ ರೈಲ್ವೇ ನಿಮಗಾಗಿ ಈ ವಿಶೇಷ ಸೌಲಭ್ಯವನ್ನು ಆರಂಭಿಸಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದೆಹಲಿ, ಮುಂಬೈ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಇಡೀ ದೇಶದಲ್ಲಿ ಭಾರತೀಯ ರೈಲ್ವೆ ಹೊಸ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಇದರ ಅಡಿಯಲ್ಲಿ, ರೈಲ್ವೆ ಯಾತ್ರಿಗಳಿಗಾಗಿ ಇಲಾಖೆ ಸೇವಾ ಅನುಬಂಧ ಆರಂಭಿಸುತ್ತಿದೆ.

ಪ್ರಯಾಣಿಕರ ಸಂಕಷ್ಟ ದೂರಾಗಲಿದೆ

ರೈಲುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು, ರೈಲ್ವೆಯು ಪ್ರಯಾಣಿಕರ ಸೇವಾ ಒಪ್ಪಂದ ಯೋಜನೆಯನ್ನು ಪ್ರಾರಂಭಿಸುತ್ತದೆ. ಇದರ ಅಡಿಯಲ್ಲಿ, ರೈಲುಗಳಲ್ಲಿ ಎದುರಾಗುವ ಸ್ವಚ್ಛತೆಯ ಕೊರತೆ, ಕೊಳಕು ಹೊದಿಕೆಗಳು ಮತ್ತು ಕೆಟ್ಟ ಆಹಾರದಂತಹ ಪ್ರಯಾಣಿಕರ ದೂರುಗಳನ್ನು ಪರಿಹಾರಿಸಲಾಗುವುದು ಎನ್ನಲಾಗಿದೆ.

ದೆಹಲಿಯಿಂದ ಓಡುವ ರೈಲುಗಳಲ್ಲಿ ಈ ಸೌಲಭ್ಯ ಪ್ರಾರಂಭವಾಗಲಿದೆ
ಮೊದಲ ಹಂತದಲ್ಲಿ ದೆಹಲಿಯಿಂದ ಓಡುವ 245 ರೈಲುಗಳಲ್ಲಿ ಇದನ್ನು ಆರಂಭಿಸಲಾಗುವುದು ಎನ್ನಲಾಗಿದೆ. ದೆಹಲಿಯಿಂದ ಪ್ರಾರಂಭವಾದ ನಂತರ, ಎಲ್ಲಾ ರೈಲ್ವೆ ವಲಯಗಳಲ್ಲಿ ಇದನ್ನು ಜಾರಿಗೆ ತರಲಾಗುವುದು ಮತ್ತು ಇದರಿಂದ ರೈಲು ಪ್ರಯಾಣಿಕರು ಉತ್ತಮ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಪ್ರಸ್ತುತ, ರೈಲ್ವೇ ಕೇಟರಿಂಗ್ ಪ್ರವಾಸಿಗರಿಗೆ ಸಂಬಂಧಿಸಿದ ಕೆಲಸಗಳನ್ನು IRCTC ನೋಡಿಕೊಳ್ಳುತ್ತಿದೆ. ಇದೀಗ ರೈಲ್ವೆ ಮಂಡಳಿಯು ಅಡುಗೆ ಮತ್ತು ಇತರ ಸೇವೆಗಳಿಗೆ ಗುತ್ತಿಗೆದಾರರನ್ನು ನೇಮಿಸಲಿದೆ.

ಇದನ್ನೂ ಓದಿ-7th Pay Commission: ಯುಗಾದಿ ದಿನ ಮೋದಿ ಸರ್ಕಾರದ ವತಿಯಿಂದ ಸರ್ಕಾರಿ ನೌಕರರಿಗೆ 27,000 ರೂ.ಗಳ ಭಾರಿ ಉಡುಗೊರೆ!

ಮಾಹಿತಿ ನೀಡಿದ ರೈಲ್ವೆ ಅಧಿಕಾರಿಗಳು
ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲ್ವೆಯ ರೈಲ್ ಮದದ್ ಆ್ಯಪ್‌ನಲ್ಲಿ ಸ್ವಚ್ಛತೆ ಮತ್ತು ಅಡುಗೆಗೆ ಸಂಬಂಧಿಸಿದ ಸಾಕಷ್ಟು ದೂರುಗಳು ಬರಲು ಪ್ರಾರಂಭಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಏಪ್ರಿಲ್ 2022 ರಿಂದ ಅಕ್ಟೋಬರ್ 2022 ರವರೆಗೆ, ಈ ಅಪ್ಲಿಕೇಶನ್‌ನಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಒಟ್ಟು 1,21,754 ಲಕ್ಷ ದೂರುಗಳನ್ನು ರೈಲ್ವೆ ಸ್ವೀಕರಿಸಿದೆ. ಕೇವಲ ಪಶ್ಚಿಮ ರೈಲ್ವೆ ಒಂದೇ ವಿಭಾಗದಿಂದ 19 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಉತ್ತರ ರೈಲ್ವೆ ವಲಯದಲ್ಲಿ 14 ಸಾವಿರ ದೂರುಗಳು ಬಂದಿವೆ.

ಇದನ್ನೂ ಓದಿ-Big News: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ!

245 ರೈಲುಗಳಲ್ಲಿ ಈ ಸೌಲಭ್ಯ ಆರಂಭವಾಗಲಿದೆ
ಮಾಹಿತಿಯ ಪ್ರಕಾರ, ಮೊದಲ ಹಂತದಲ್ಲಿ ದೆಹಲಿಯಿಂದ ಓಡುವ 245 ರೈಲುಗಳಲ್ಲಿ ಈ ಸೇವಯನ್ನು ಆರಂಭಿಸಲಾಗುತ್ತಿದೆ. ಇದಾದ ಬಳಿಕ, ಇದು ಇತರ ವಲಯಗಳು ಒಂದರ ಮೇಲೊಂದರಂತೆ ಆರಂಭಗೊಳ್ಳಲಿದೆ. ಇದನ್ನು ಪ್ರಾರಂಭಿಸಲು, ಈ ಹಿಂದೆ ಆಯ್ಕೆ ಮಾಡಿದ ಏಜೆನ್ಸಿಯ ಕೆಲಸದ ಅವಧಿ ಮುಗಿಯಲು ರೈಲ್ವೇಸ್ ಕಾಯುತ್ತಿದೆ. ಈ ರೈಲುಗಳು ದೆಹಲಿಯಿಂದ ಚಲಿಸುವ ಎಲ್ಲಾ ತೇಜಸ್ ರಾಜಧಾನಿ, ದುರಂತೋ ಮತ್ತು ಗರೀಬ್ ರಥ್ ರೈಲುಗಳ ಹೆಸರನ್ನು ಒಳಗೊಂಡಿವೆ. ಈ ಎಲ್ಲಾ ರೈಲುಗಳಲ್ಲಿ ಲಿನಿನ್ ತೊಳೆಯುವ ಒಪ್ಪಂದಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More