Home> Business
Advertisement

ಆಗಸ್ಟ್ ಎರಡನೇ ವಾರದಿಂದ ಓಡಾಡಲಿದೆ ವಂದೇ ಭಾರತ ರೈಲು ..!

ಪ್ರಧಾನಿ ಮೋದಿಯವರು ಘೋಷಿಸಿದಂತೆ 2023 ರ ಆಗಸ್ಟ್ 15 ರ ವೇಳೆಗೆ 75 ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಓಡಾಟ ಆರಂಭಿಸಲಿವೆ. ಆಗಸ್ಟ್ 15, 2021 ರಂದು ಪ್ರಧಾನಿ ಮೋದಿಯವರು ದೇಶವಾಸಿಗಳಿಗಾಗಿ 75 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.  

ಆಗಸ್ಟ್  ಎರಡನೇ ವಾರದಿಂದ ಓಡಾಡಲಿದೆ ವಂದೇ ಭಾರತ ರೈಲು ..!

ನವದೆಹಲಿ : ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈಲ್ವೆ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ 75 ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಕಳೆದ ವರ್ಷ ಆಗಸ್ಟ್ 15 ರಂದು ಘೋಷಿಸಿದ್ದರು. ಆ ಘೋಷಣೆಯಂತೆ ವಂದೇ ಭಾರತ್ ರೈಲಿನ ಹೊಸ ಆವೃತ್ತಿ ಹಳಿಯ ಮೇಲೆ ಓಡಲು ಸಿದ್ದತೆ ನಡೆದಿದೆ. ಆಗಸ್ಟ್ 12 ರಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ಟೆಸ್ಟಿಂಗ್ ಗಾಗಿ ಕಳುಹಿಸಲಾಗುವುದು. 

ಹಸಿರು ನಿಶಾನೆ ತೋರಿಸಲಿರುವ ಪ್ರಧಾನಿ ಮೋದಿ :
ಪ್ರಧಾನಿ ಮೋದಿಯವರು ಘೋಷಿಸಿದಂತೆ 2023 ರ ಆಗಸ್ಟ್ 15 ರ ವೇಳೆಗೆ 75 ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಓಡಾಟ ಆರಂಭಿಸಲಿವೆ. ಆಗಸ್ಟ್ 15, 2021 ರಂದು ಪ್ರಧಾನಿ ಮೋದಿಯವರು ದೇಶವಾಸಿಗಳಿಗಾಗಿ 75 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.  

ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ , ಬೆಳ್ಳಿ ಕೂಡಾ ಭಾರೀ ಅಗ್ಗ

ಪ್ರತಿ ಗಂಟೆಗೆ 200 ಕಿ,ಮೀ ವೇಗದಲ್ಲಿ ಓಡಲಿದೆ ರೈಲು : 
ಮೂಲಗಳ ಪ್ರಕಾರ, ಹೊಸ ವಂದೇ ಭಾರತ್ ರೈಲು ನವೆಂಬರ್ ನಿಂದ ದಕ್ಷಿಣ ಭಾರತದಲ್ಲಿ ವಿಶೇಷ ಮಾರ್ಗದಲ್ಲಿ ಓಡುವ ಸಾಧ್ಯತೆಯಿದೆ. ರೈಲ್ವೇ ಮೂಲಗಳ ಪ್ರಕಾರ,  ಸೆಮಿ ಹೈ ಸ್ಪೀಡ್ ವಂದೇ ಭಾರತ್ ಪ್ರಯೋಗವನ್ನು ಆಗಸ್ಟ್ 15 ರ ಮೊದಲು ಪ್ರಾರಂಭಿಸಲಾಗುವುದು. ಪ್ರಧಾನಿ ಮೋದಿ ಅವರು ಚೆನ್ನೈನಿಂದ ಈ ರೈಲಿಗೆ ಫ್ಲ್ಯಾಗ್ ಆಫ್ ಮಾಡಬಹುದು ಎಂದು ಮೂಲಗಳು  ತಿಳಿಸಿವೆ. 

ಪ್ರತಿ ತಿಂಗಳು 10 ರೈಲುಗಳನ್ನು ಉತ್ಪಾದಿಸುವ ಗುರಿ : 
ವಂದೇ ಭಾರತ್ ರೈಲಿನ ಹೊಸ ಆವೃತ್ತಿಯನ್ನು ರಾಜಸ್ಥಾನದ ಕೋಟಾದಿಂದ ಮಧ್ಯಪ್ರದೇಶದ ನಗ್ಡಾ ಭಾಗದವರೆಗೆ ಪರೀಕ್ಷಿಸಲಾಗುವುದು. 100 ರಿಂದ 180 ಕಿ.ಮೀ ವೇಗದಲ್ಲಿ ಈ ರೈಲನ್ನು ಓಡಿಸುವ ಮೂಲಕ ತಪಾಸಣೆ ನಡೆಸಲಾಗುವುದು. ಎರಡರಿಂದ ಮೂರು ಟೆಸ್ಟಿಂಗ್ ನಂತರ   ಇದರಲ್ಲಿ ಪ್ರಯಾಣಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗುವುದು.   ಐಸಿಎಫ್, ಚೆನ್ನೈ ಪ್ರತಿ ತಿಂಗಳು ಆರರಿಂದ ಏಳು ವಂದೇ ಭಾರತ್ ರೇಕ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ  ಎನ್ನಲಾಗಿದೆ. 

ಇದನ್ನೂ ಓದಿ : LPG ಬಳಕೆದಾರರಿಗೆ ಸಿಹಿ ಸುದ್ದಿ : ನಿಮ್ಮ ಸಬ್ಸಿಡಿ ಬಗ್ಗೆ ಸರ್ಕಾರದಿಂದ ಭರ್ಜರಿ ಪ್ಲಾನ್! 

ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ವಂದೇ ಭಾರತ್‌ನಲ್ಲಿ  ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಪ್ರಸ್ತುತ ದೆಹಲಿಯಿಂದ ಕತ್ರಾ ಮತ್ತು ದೆಹಲಿಯಿಂದ ವಾರಣಾಸಿ ನಡುವೆ ವಂದೇ ಭಾರತ್ ಓಡಾಟ ನಡೆಸುತ್ತಿದೆ.  ಆಗಸ್ಟ್ 2023 ರೊಳಗೆ 75 ವಂದೇ ಭಾರತ್ ರೈಲುಗಳ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More