Home> Business
Advertisement

ಇಂದೇ ಈ ಕೆಲಸ ಮಾಡಿ, ₹5 ಲಕ್ಷದವರೆಗೆ ಗೋಲ್ಡ್ ವೋಚರ್ ಗೆಲ್ಲಿರಿ

India Ki Doosri Diwali offer: ಈ ವೋಚರ್ ಜೊತೆಗೆ ನೀವು 2500 ರೂ.ಗಳ ಇಂಧನ ಕೂಪನ್ ಮತ್ತು ಅಶೂರ್ಡ್ ಗಿಫ್ಟ್‌ಗಾಗಿ ಸ್ಕ್ರ್ಯಾಚ್ ಕೂಪನ್ ಅನ್ನು ಸಹ ಗೆಲ್ಲಬಹುದು.

ಇಂದೇ ಈ ಕೆಲಸ ಮಾಡಿ, ₹5 ಲಕ್ಷದವರೆಗೆ ಗೋಲ್ಡ್ ವೋಚರ್ ಗೆಲ್ಲಿರಿ

India Ki Doosri Diwali offer: ನೀವು 5 ಲಕ್ಷ ರೂಪಾಯಿಗಳ ಚಿನ್ನದ ವೋಚರ್ ಪಡೆದರೆ ಹೇಗಿರುತ್ತೆ...! ಅಬ್ಬಾ, ಒಮ್ಮೆ ಹಾಗೇ ಊಹಿಸಿಕೊಂಡರೆ ಎಷ್ಟು ಖುಷಿ ಆಗುತ್ತೆ ಅಲ್ವಾ. ನಿಸ್ಸಂಶಯವಾಗಿ ಹಾಗೇನಾದರೂ ಆದಲ್ಲಿ ಯಾರಿಗಾದರೂ ತುಂಬಾ ಸಂತೋಷವಾಗುತ್ತದೆ. ನೀವೂ ಕೂಡ ಈ ಬಗ್ಗೆ ಕನಸು ಕಾಣುತ್ತಿದ್ದರೆ ನಿಮ್ಮ ಆಸೆ ಖಂಡಿತವಾಗಿಯೂ ಈಡೇರಬಹುದು. ಅಂತಹ ದೊಡ್ಡ ಗೋಲ್ಡ್ ವೋಚರ್ ಗೆಲ್ಲಲು ನಿಮಗೂ ಅವಕಾಶವಿದೆ. 

ಹೌದು, ಟಾಟಾ ಮೋಟಾರ್ಸ್ ನಿಮಗೆ ಈ ಉತ್ತಮ ಅವಕಾಶವನ್ನು ನೀಡುತ್ತಿದೆ. ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ (TATA Motors) 2020 ರ ಡಿಸೆಂಬರ್ 31 ರವರೆಗೆ ವಿಶೇಷ ಕೊಡುಗೆಯನ್ನು ತಂದಿದೆ. ಇದರಲ್ಲಿ ವೋಚರ್ ಜೊತೆಗೆ ನೀವು 2500 ರೂ.ಗಳ ಇಂಧನ ಕೂಪನ್ ಮತ್ತು ಅಶೂರ್ಡ್ ಗಿಫ್ಟ್‌ಗಾಗಿ ಸ್ಕ್ರ್ಯಾಚ್ ಕೂಪನ್ ಅನ್ನು ಸಹ ಗೆಲ್ಲಬಹುದು.

ನಿಮ್ಮ ಬಜೆಟ್‌ನಲ್ಲಿ ಸಿಗುವ 4 ಅಮೋಘ Sports Bikes

ಈ ವಿಶೇಷ ಕೊಡುಗೆ ಏನು (ಟಾಟಾ ಮೋಟಾರ್ಸ್ ಇಂಡಿಯಾ ಕಿ ದೂಸ್ರಿ ದೀಪಾವಳಿ ಕೊಡುಗೆ) :
ಟಾಟಾ ಮೋಟಾರ್ಸ್‌ನ ಈ ಪ್ರಸ್ತಾಪದಲ್ಲಿ ಗ್ರಾಹಕರು ಟಾಟಾ ಎಸ್‌ಸಿವಿ ಅಥವಾ ಪಿಕಪ್ (TATA SCV or PICK-UP) ವ್ಯಾನ್ ಖರೀದಿಸಿದರೆ, ಅವರು 5 ಲಕ್ಷ ರೂ.ವರೆಗೆ ಗೋಲ್ಡ್ ವೋಚರ್ ಗೆಲ್ಲುವ ಅವಕಾಶವನ್ನು ಪಡೆಯಬಹುದು. ಟಾಟಾ ಮೋಟಾರ್ಸ್ ಈ ಪ್ರಸ್ತಾಪವನ್ನು ಭಾರತದ ಎರಡನೇ ದೀಪಾವಳಿ ಕೊಡುಗೆ (ಇಂಡಿಯಾ ಕಿ ದೂಸ್ರಿ ದೀಪಾವಳಿ) ಎಂದು ಹೆಸರಿಸಿದೆ. ಇದರೊಂದಿಗೆ ನೀವು ಮಿಕ್ಸರ್ ಗ್ರೈಂಡರ್, ಎಲ್ಇಡಿ ಟಿವಿ, ವಾಷಿಂಗ್ ಮೆಷಿನ್ ಮತ್ತು ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ಪಡೆಯಬಹುದು.

ಇದನ್ನು ನೆನಪಿನಲ್ಲಿಡಿ!
ಟಾಟಾ ಮೋಟಾರ್ಸ್ ಕೊಡುಗೆ  (TATA Motors offer):
ಈ ಕೊಡುಗೆ ತಮಿಳುನಾಡು ಹೊರತುಪಡಿಸಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲೂ ಲಭ್ಯವಿದೆ. ಆದರೆ ಟಾಟಾ ಮೋಟಾರ್ಸ್ ಉದ್ಯೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ಇದನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಅಲ್ಲದೆ ಈ ಕೊಡುಗೆಗಳು TATA ACE, INTRA ಮತ್ತು YODHA ಮಾದರಿಗಳಲ್ಲಿ ಅನ್ವಯವಾಗುತ್ತವೆ. ಈ ಕೊಡುಗೆ 2020 ಡಿಸೆಂಬರ್ 31 ರವರೆಗೆ ಮಾತ್ರ. ಈ ಪ್ರಸ್ತಾಪದಲ್ಲಿ ಅರ್ಹ ಗ್ರಾಹಕರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ (Aadhaar Card) ಅಥವಾ ಮತದಾರರ ಕಾರ್ಡ್ ಅಥವಾ ಚಾಲನಾ ಪರವಾನಗಿ ಮತ್ತು ಇತರ ದಾಖಲೆಗಳ ಸ್ವಯಂ ದೃಢೀಕೃತ ನಕಲನ್ನು ನೀಡಬೇಕಾಗುತ್ತದೆ.

WhatsApp Earning: ಮೂಲಕ ಹಣ ಸಂಪಾದಿಸಬಹುದೇ? ಇಲ್ಲಿದೆ ಮಾಹಿತಿ

ಟಾಟಾ ಏಸ್ ಗೋಲ್ಡ್ ಬಿಎಸ್ 6  (Tata Ace Gold BS6)
ಈ ಕೊಡುಗೆ ಅಡಿಯಲ್ಲಿ, ನೀವು ಟಾಟಾ ಏಸ್ ಗೋಲ್ಡ್ ಬಿಎಸ್ 6 ಅನ್ನು ಖರೀದಿಸಬಹುದು. ಇದರ ಬೆಲೆ 4.25 ಲಕ್ಷ ರೂ. ಇದು ಬಹಳ ವಿಶೇಷವಾದ ವಾಹನವಾಗಿದೆ. ನಿರ್ವಹಣೆ ವೆಚ್ಚವೂ ಕಡಿಮೆ. 

ಈ ಕೊಡುಗೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, ನೀವು ಟೋಲ್ ಫ್ರೀ ಸಂಖ್ಯೆ 1800 20 97979 ಅನ್ನು ಸಂಪರ್ಕಿಸಬಹುದು.

Read More