Home> Business
Advertisement

ATM Withdrawal money: ಎಟಿಎಂನಲ್ಲಿ ಹಣ ಡ್ರಾ ಮಾಡುವವರು ತಪ್ಪದೇ ಈ ಸುದ್ದಿ ಓದಿ

ಎಟಿಎಂನಿಂದ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಆದರೆ ಎಟಿಎಂನಿಂದ ಹಣ ಪಡೆಯುವಾಗ ನೀವು ಕೆಲವು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ನೀವು ವಂಚನೆಗೆ ಬಲಿಯಾಗಬಹುದು.

ATM Withdrawal money: ಎಟಿಎಂನಲ್ಲಿ ಹಣ ಡ್ರಾ ಮಾಡುವವರು ತಪ್ಪದೇ ಈ ಸುದ್ದಿ ಓದಿ

ನವದೆಹಲಿ: ಎಟಿಎಂ(Automated Teller Machine)ಅನ್ನು ಭಾರತ ಸೇರಿ ಪ್ರಪಂಚದಾದ್ಯಂತ ಬಳಸಲಾಗುತ್ತಿದೆ. ಇದರ ಸಹಾಯದಿಂದ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕೆಲವೇ ನಿಮಿಷಗಳಲ್ಲಿ ಜನರು ಹಣವನ್ನು ಹಿಂಪಡೆಯಬಹುದು. ಇದು ಒಂದೆಡೆ ತುಂಬಾ ಅನುಕೂಲವಾಗಿದ್ದರೂ, ಇನ್ನೊಂದೆಡೆ ಸರಿಯಾಗಿ ಬಳಸದಿದ್ದರೆ ಗ್ರಾಹಕರು ತಮ್ಮ ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಎಟಿಎಂ ಬಳಸುವಾಗ ಯಾವ ರೀತಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಅನ್ನೋದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಾರ್ಡ್ ಸ್ಲಾಟ್ ಪರಿಶೀಲಿಸುವುದು ಅವಶ್ಯಕ

ಇಂದು ಎಟಿಎಂ ವಂಚನೆಗಳು ಹೆಚ್ಚಾಗಿವೆ. ವಂಚಕರು ನಿಮಗೆ ಯಾಮಾರಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಗುಳುಂ ಮಾಡುತ್ತಾರೆ. ಹಣ ತೆಗೆದುಕೊಳ್ಳುವಾಗ ನೀವು ಕಾರ್ಡ್ ಹಾಕುವ ಎಟಿಎಂನ ಸ್ಲಾಟ್ ಪರಿಶೀಲಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಸ್ಕ್ಯಾಮರ್‌ಗಳು ಈ ಸ್ಲಾಟ್ ಬದಲಾಯಿಸುತ್ತಾರೆ. ನಿಮ್ಮ ಕಾರ್ಡ್ ಸ್ಕ್ಯಾನ್ ಮಾಡುವ ಮತ್ತು ಅದನ್ನು ಕ್ಲೋನ್ ಮಾಡಬಹುದಾದ ಮತ್ತೊಂದು ಸಾಧನದೊಂದಿಗೆ ಬದಲಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಖಾತೆಯಿಂದ ಹಣವನ್ನು ಎಗರಿಸಿ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ನೀವು ಎಟಿಎಂ ವಹಿವಾಟು ನಡೆಸುವ ಮೊದಲು ಈ ಸ್ಲಾಟ್ ಪರಿಶೀಲಿಸಿ.

ಇದನ್ನೂ ಓದಿ: PM Kisan : ಪಿಎಂ ಕಿಸಾನ್‌ ಯೋಜನೆಯ 12ನೇ ಕಂತು ಏಕೆ ವಿಳಂಬ? ಕಾರಣ ತಿಳಿಸಿದ ಸರ್ಕಾರ

ಯಾರೊಂದಿಗೂ ಪಿನ್ ಹಂಚಿಕೊಳ್ಳಬೇಡಿ

ಅನೇಕ ಬಾರಿ ನಿಮಗೆ ನಗದು ಹಿಂಪಡೆಯಲು ಸಮಸ್ಯೆಯಾದಾಗ, ನೀವು ಎಟಿಎಂನಿಂದ ಹಣ ಪಡೆಯಲು ಬೇರೆಯವರ ಸಹಾಯ ಕೇಳುತ್ತೀರಿ. ಹೀಗೆ ಮಾಡುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಈ ಸಮಯದಲ್ಲಿ ನೀವು ಪಿನ್ ಹಂಚಿಕೊಳ್ಳಬಾರದು. ಒಂದು ವೇಳೆ ಆ ವ್ಯಕ್ತಿ ವಂಚಕನಾಗಿದ್ದರೆ ನಿಮ್ಮ ಕಾರ್ಡ್‌ನ ವಿವರಗಳ ಮೂಲಕ ಆತ ನಿಮ್ಮ ಖಾತೆಯಲ್ಲಿರುವ ಹಣವನ್ನು ಲಪಾಟಾಯಿಸಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಬಹುಮುಖ್ಯ.     

ಕ್ಯಾಮೆರಾ ಪರಿಶೀಲಿಸಬೇಕು

ಎಟಿಎಂನಲ್ಲಿ ಪ್ರತ್ಯೇಕ ಕ್ಯಾಮೆರಾ ಅಳವಡಿಸಿ ನಿಮ್ಮ ಪಿನ್‍ಕೋಡ್ ಖದೀಯುವ ಕತರ್ನಾಕ್ ಖದೀಮರು ಇದ್ದಾರೆ. ಪಿನ್‍ಕೋಡ್ ಮೂಲಕ ವಂಚನೆ ನಡೆಸುವ ಹಲವು ಪ್ರಕರಣಗಳು ನಡೆದಿವೆ. ಹೀಗಾಗಿ ಇದರ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನೀವು ಇಂತಹ ಕ್ಯಾಮೆರಾದ ಬಗ್ಗೆ ಸಂದೇಶವಿದ್ದರೆ ಸಂಬಂಧಿತ ಬ್ಯಾಂಕ್‌ಗೆ ತಕ್ಷಣವೇ ವರದಿ ಮಾಡಬೇಕು. ಇಂತಹ ಕ್ಯಾಮೆರಾಗಳ ಮೂಲಕ ನಿಮ್ಮ ಕಾರ್ಡ್ ಸೇರಿದಂತೆ ನಿಮ್ಮ ಪಿನ್ ವಿವರಗಳು ಸ್ಕ್ಯಾಮರ್‌ಗಳ ಪಾಲಾಗಬಹುದು. ಇದು ತುಂಬಾ ಅಪಾಯಕಾರಿ. ಹೀಗಾಗಿ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವ ಮುನ್ನ ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.

ಇದನ್ನೂ ಓದಿ: ಈ ಬ್ಯಾಂಕ್ ರೈತರಿಗೆ ನೀಡುತ್ತಿದೆ 2 ಲಕ್ಷ ರೂಪಾಯಿ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More