Home> Business
Advertisement

ನಿಮ್ಮ ಹೆಸರಿನಲ್ಲಿ LPG ಕನೆಕ್ಷನ್ ಇದೆಯಾ? ಹಾಗಿದ್ದರೆ ನಿಮಗೂ ಸಿಗಲಿದೆ ಈ ಸೌಲಭ್ಯ


LPG Gas Connection: ನಿಮ್ಮ ಕುಟುಂಬದಲ್ಲಿ ಯಾರಾದರೂ LPG ಸಂಪರ್ಕ ಹೊಂದಿದ್ದರೆ, ನೀವು ಸುಲಭವಾಗಿ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. 

ನಿಮ್ಮ ಹೆಸರಿನಲ್ಲಿ LPG ಕನೆಕ್ಷನ್ ಇದೆಯಾ? ಹಾಗಿದ್ದರೆ ನಿಮಗೂ ಸಿಗಲಿದೆ ಈ ಸೌಲಭ್ಯ

ನವದೆಹಲಿ : LPG Gas Connection: ನೀವು ಎಲ್‌ಪಿಜಿಯ ಹೊಸ ಸಂಪರ್ಕ ತೆಗೆದುಕೊಳ್ಳಬೇಕೆಂದಿದ್ದರೆ, ನೀವು ಕೂಡಾ ಇದರ ಲಾಭ ಪಡೆಯಬಹುದು. ಹೊಸ LPG ಸಂಪರ್ಕವನ್ನು ಪಡೆಯುವುದು ಈಗ ತುಂಬಾ ಸುಲಭ. ಮೊದಲು ಗ್ಯಾಸ್ ಸಂಪರ್ಕ ಪಡೆಯಬೇಕಾದರೆ, ಅಡ್ರೆಸ್ ಪ್ರೂಫ್ (Address proof) ನೀಡಬೇಕಾಗಿತ್ತು. ಅಡ್ರೆಸ್ ಪ್ರೂಫ್  ಇದ್ದರೆ, ಮಾತ್ರ ಗ್ಯಾಸ್ ಸಿಲಿಂಡರ್ ಸಿಗುತ್ತಿತ್ತು. ಆದರೆ, ಈಗ ಹೊಸ ನಿಯಮದ ಪ್ರಕಾರ, ಗ್ಯಾಸ್ ಕನೆಕ್ಷನ್ (Gas connection) ಪಡೆಯಲು ಅಡ್ರೆಸ್ಸ್ ಪ್ರೂಫ್ ನೀಡುವ  ಅಗತ್ಯವಿಲ್ಲ. 

ಅಡ್ರೆಸ್ ಪ್ರೂಫ್ ಇಲ್ಲದೆ ಗ್ಯಾಸ್ ಸಂಪರ್ಕ : 

ನಿಮ್ಮ ಕುಟುಂಬದಲ್ಲಿ ಯಾರಾದರೂ LPG ಸಂಪರ್ಕ ಹೊಂದಿದ್ದರೆ, ನೀವು ಸುಲಭವಾಗಿ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಇದಕ್ಕಾಗಿ ಅಡ್ರೆಸ್ ಪ್ರೂಫ್  ಒದಗಿಸುವ ಅಗತ್ಯವಿಲ್ಲ. ತೈಲ ಕಂಪನಿಗಳು ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಿವೆ. ಇದನ್ನು ಪ್ರಧಾನ ಮಂತ್ರಿ ಉಜ್ವಲ (Pradhanmantri ujwal yojna) ಯೋಜನೆಯಲ್ಲಿಯೂ ಪಡೆಯಬಹುದು.

ಇದನ್ನೂ ಓದಿ : Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್

ಹಳೆಯ ಕನೆಕ್ಷನ್ ಮೇಲೆ ಸಿಗಲಿದೆ ಹೊಸ LPG ಸಂಪರ್ಕ  : 
ಈ ಸೌಲಭ್ಯದ ಅಡಿಯಲ್ಲಿ, ಈಗಾಗಲೇ ಪೋಷಕರು, ಒಡಹುಟ್ಟಿದವರು ಅಥವಾ ಕುಟುಂಬದ ಯಾವುದೇ ಸದಸ್ಯನ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ, ಇತರ ಕುಟುಂಬದ ಸದಸ್ಯರು ಕೂಡ ಈ ವಿಳಾಸದ ಲಾಭವನ್ನು ಪಡೆಯಬಹುದು. ಈ ವಿಳಾಸವನ್ನು ವೆರಿಫೈ ಮಾಡಬೇಕಾಗುತ್ತದೆ ಅಷ್ಟೇ. ಯಾವ ತೈಲಕಂಪನಿಯ ಗ್ಯಾಸ್ ಮನೆಗೆ ಬರುತ್ತಿದೆಯೋ ಅದೇ ಏಜೆನ್ಸಿಗೆ ಹೋಗಿ, ಮೂಲ ಸಿಲಿಂಡರ್ ನ ದಾಖಲೆ ಪತ್ರಗಳನ್ನು ಒದಗಿಸಬೇಕು.  ಪರಿಶೀಲನೆಯ ನಂತರ, ಹೊಸ ಗ್ಯಾಸ್ ಸಂಪರ್ಕ (Gas connection) ಸಿಗುತ್ತದೆ. 

ಹೊಸ ಸಂಪರ್ಕದ ಮೇಲೆಯೂ ಸಿಗಲಿದೆ ಸಬ್ಸಿಡಿ : 
ಇನ್ನು LPGಮೇಲೆ ಸಿಗುವ ಸಬ್ಸಿಡಿ ಎಲ್ಲಾ ಸಿಲಿಂಡರ್ ಗಳ ಮೇಲೆಯೂ ಸಿಗುತ್ತದೆ. ಇಂತಹ ಗ್ಯಾಸ್ ಸಂಪರ್ಕಗಳನ್ನು ಉಜ್ವಲ ಯೋಜನೆಯಡಿ (Ujwala yojane) ಕೂಡ ಬುಕ್ ಮಾಡಬಹುದು. ಕೇವಲ ನಿಮ್ಮ ಆಧಾರ್ ಕಾರ್ಡ್ ಮತ್ತು ಹಳೆಯ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಗ್ಯಾಸ್ ಏಜೆನ್ಸಿಗೆ ನೀಡಿ ಹೊಸ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬೇಕು. ಒಂದೇ ವಿಳಾಸದಲ್ಲಿ ಅನೇಕ ಅನಿಲ ಸಂಪರ್ಕಗಳನ್ನು ತೆಗೆದುಕೊಳ್ಳಬಹುದು. ಎಲ್ಲಾ ಗ್ಯಾಸ್ ಸಂಪರ್ಕಗಳು ಆಧಾರ್ ಗೆ ಲಿಂಕ್ ಆಗಿರುವುದರಿಂದ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿರುವುದಿಲ್ಲ. 

ಇದನ್ನೂ ಓದಿ : Offline NEFT-RTGS: ನೀವು ಮೊಬೈಲ್ ಅಥವಾ ಇಂಟರ್ನೆಟ್ ಇಲ್ಲದೆಯೂ ಕೂಡ ಹಣ ವರ್ಗಾವಣೆ ಮಾಡಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More