Home> Business
Advertisement

Azim Premji: ಚಾರಿಟಿ ವಿಚಾರದಲ್ಲಿ ನಂಬರ್-1 ಆಗಿರುವ ಈ ಉದ್ಯಮಿ, ನಿತ್ಯ ಎಷ್ಟು ಕೋಟಿ ದೇಣಿಗೆ ನೀಡುತ್ತಾರೆ ಗೊತ್ತೇ!

Wipro founder Azim Premji : ಪ್ರಮುಖ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ (Wipro founder Azim Premji)  2020-21ನೇ ಹಣಕಾಸು ವರ್ಷದಲ್ಲಿ ಒಟ್ಟು 9,713 ಕೋಟಿ ಅಥವಾ ನಿತ್ಯ ಸುಮಾರು 27 ಕೋಟಿ ರೂ. ದೇಣಿಗೆ ನೀಡಿದ್ದಾರೆ. 

Azim Premji: ಚಾರಿಟಿ ವಿಚಾರದಲ್ಲಿ ನಂಬರ್-1 ಆಗಿರುವ ಈ ಉದ್ಯಮಿ, ನಿತ್ಯ ಎಷ್ಟು ಕೋಟಿ ದೇಣಿಗೆ ನೀಡುತ್ತಾರೆ ಗೊತ್ತೇ!

Wipro founder Azim Premji : ಭಾರತೀಯ ಪ್ರಮುಖ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಭಾರತದ ಪರೋಪಕಾರಿ ಬಿಲಿಯನೇರ್‌ಗಳಲ್ಲಿ ಎರಡನೇ ಬಾರಿಗೆ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತೀಯ ಪ್ರಮುಖ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ  (Wipro founder Azim Premji)  2020-21ರ ಆರ್ಥಿಕ ವರ್ಷದಲ್ಲಿ ₹ 9,713 ಕೋಟಿ ಮೌಲ್ಯದ ದೇಣಿಗೆಗಳನ್ನು ನೀಡಿದ್ದಾರೆ, ಇದು ದಿನಕ್ಕೆ 27 ಕೋಟಿ ರೂ. ಆಗಿದೆ.

ಗುರುವಾರ ಬಿಡುಗಡೆಯಾದ ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2021 ರ ಪ್ರಕಾರ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ (Wipro founder Azim Premji) ಕಳೆದ ಹಣಕಾಸು ವರ್ಷದಲ್ಲಿ ತಮ್ಮ ದೇಣಿಗೆಯನ್ನು ಶೇಕಡಾ 23 ರಷ್ಟು ಹೆಚ್ಚಿಸಿದ್ದಾರೆ. ಅಜೀಂ ಪ್ರೇಮ್‌ಜಿ ಫೌಂಡೇಶನ್ ಹತ್ತು ರಾಜ್ಯಗಳಾದ್ಯಂತ ವ್ಯಾಕ್ಸಿನೇಷನ್‌ನ ಕೆಲಸವನ್ನು ವಿಸ್ತರಿಸಲು ಸಾಂಕ್ರಾಮಿಕ ರೋಗಕ್ಕೆ ₹ 1,125 ಕೋಟಿಯಿಂದ ₹ 2,125 ಕೋಟಿಗೆ ತನ್ನ ಹಂಚಿಕೆಯನ್ನು ದ್ವಿಗುಣಗೊಳಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Facebook New Name: ಫೇಸ್‌ಬುಕ್‌ನ ಹೆಸರು ಬದಲಾವಣೆ

ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ (Hurun india philanthropy list) 2021 ರ ಪ್ರಕಾರ,  ಅಜೀಂ ಪ್ರೇಮ್‌ಜಿ ಅವರು ಸತತ ಎರಡನೇ ವರ್ಷ ದೇಶದ "ಅತ್ಯಂತ ಉದಾರ" ಲೋಕೋಪಕಾರಿ ಬಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಅವರು ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2021 ರಲ್ಲಿ ಮುಕೇಶ್ ಅಂಬಾನಿ, ಶಿವ ನಾಡರ್, ನಂದನ್ ನಿಲೇಕಣಿ, ಕುಮಾರ್ ಮಂಗಳಂ ಮುಂತಾದವರಿಗಿಂತ ಮುಂದಿದ್ದಾರೆ. 

ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿ 2021 ರ ಪ್ರಕಾರ ಅಜೀಂ ಪ್ರೇಮ್‌ಜಿ ನಂತರದ ಸ್ಥಾನದಲ್ಲಿ ಯಾರಿದ್ದಾರೆ?
1. ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ (₹ 9,713 ಕೋಟಿ)

2.  ಶಿವ ನಾಡರ್, HCL ಟೆಕ್ನಾಲಜೀಸ್ (₹ 1263 ಕೋಟಿ)

3. ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ (₹ 577 ಕೋಟಿ)

4. ಕುಮಾರ್ ಮಂಗಳಂ ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್ (₹ 377 ಕೋಟಿ)

5. ನಂದನ್ ನಿಲೇಕಣಿ, ಇನ್ಫೋಸಿಸ್ (₹ 183 ಕೋಟಿ)

6. ಹಿಂದುಜಾ ಕುಟುಂಬ, ಹಿಂದುಜಾ ಗ್ರೂಪ್ (₹ 166 ಕೋಟಿ)

7. ಬಜಾಜ್ ಕುಟುಂಬ, ಬಜಾಜ್ ಗ್ರೂಪ್ (₹ 136 ಕೋಟಿ)

8. ಗೌತಮ್ ಅದಾನಿ, ಅದಾನಿ ಗ್ರೂಪ್ (₹ 130 ಕೋಟಿ) 

9. ಅನಿಲ್ ಅಗರ್ವಾಲ್, ವೇದಾಂತ (₹ 130 ಕೋಟಿ)

10. ಬರ್ಮನ್ ಕುಟುಂಬ, ಡಾಬರ್ ಇಂಡಿಯಾ (₹ 114 ಕೋಟಿ)

ಇದನ್ನೂ ಓದಿ- FASTag: ನಿಮ್ಮ ಕಾರನ್ನು ಸಹ ಮಾರಾಟ ಮಾಡುತ್ತಿದ್ದೀರಾ? ಅದಕ್ಕೂ ಮುನ್ನ ಫಾಸ್ಟ್‌ಟ್ಯಾಗ್‌ನ್ನು ಏನು ಮಾಡಬೇಕೆಂದು ಗೊತ್ತಿರಲಿ

ಇದಲ್ಲದೆ, ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್‌ನ ರೋಹಿಣಿ ನಿಲೇಕಣಿ ( ₹ 69 ಕೋಟಿ), ಯುಎಸ್‌ವಿಯ ಲೀನಾ ಗಾಂಧಿ ತಿವಾರಿ ( ₹ 24 ಕೋಟಿ) ಮತ್ತು ಥರ್ಮಾಕ್ಸ್‌ನ ಅನು ಅಗಾ ( ₹ 20 ಕೋಟಿ) ಸೇರಿದಂತೆ ಒಂಬತ್ತು ಮಹಿಳೆಯರು ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More