Home> Business
Advertisement

Driving License ಕಳೆದು ಹೋಗಿದೆಯೇ? ಗಾಬರಿಯಾಗಬೇಡಿ, ಹೊಸ ಡಿಎಲ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ

Driving License: ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡಿದ್ದರೆ ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಅದನ್ನು ಮನೆಯಲ್ಲಿ ಕುಳಿತು ಪಡೆಯಬಹುದು.

Driving License ಕಳೆದು ಹೋಗಿದೆಯೇ? ಗಾಬರಿಯಾಗಬೇಡಿ, ಹೊಸ ಡಿಎಲ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ

Driving License: ಪ್ರತಿಯೊಬ್ಬ ವಾಹನ ಚಾಲಕರಿಗೆ ಚಾಲನಾ ಪರವಾನಗಿ (Driving License) ಬಹಳ ಮುಖ್ಯವಾದ ದಾಖಲೆಯಾಗಿದೆ. ಡಿಎಲ್ ಇಲ್ಲದೇ ವಾಹನ ಓಡಿಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಚಾಲನಾ ಪರವಾನಗಿ ಕಳೆದುಹೋದರೆ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಅಥವಾ ಪದೇ ಪದೇ ಆರ್‌ಟಿಒ ಕಚೇರಿಗೆ ಸುತ್ತುವ ಅಗತ್ಯವಿಲ್ಲ. ನೀವು ಮನೆಯಲ್ಲಿ ಕುಳಿತು ನಕಲಿ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇಂದಿನ ಡಿಜಿಟಲ್ ಯುಗದಲ್ಲಿ, ಲ್ಯಾಪ್‌ಟಾಪ್/ಕಂಪ್ಯೂಟರ್ ಸಹಾಯದಿಂದ ಆನ್‌ಲೈನ್‌ನಲ್ಲಿ ಪ್ರತಿಯೊಂದು ಕೆಲಸವನ್ನೂ ಸುಲಭವಾಗಿ ಮಾಡಬಹುದು, ಅದೇ ರೀತಿ ನೀವು ನಿಮ್ಮ ನಕಲಿ ಚಾಲನಾ ಪರವಾನಗಿಯನ್ನು ಸಹ ಪಡೆಯಬಹುದು.

ಡಿಎಲ್ ಕಳೆದು ಹೋದರೆ ಪೊಲೀಸರಿಗೆ ಮಾಹಿತಿ ನೀಡಿ :

ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಕಳೆದು ಹೋದರೆ, ಮೊದಲು ಪೊಲೀಸರಿಗೆ ದೂರು ನೀಡುವುದು ಬಹಳ ಮುಖ್ಯ. ಇದರ ಹೊರತಾಗಿ, ನಿಮ್ಮ ಪರವಾನಗಿಯಲ್ಲಿ ಹೆಸರು ಅಥವಾ ಯಾವುದೇ ಇತರ ಮಾಹಿತಿಯನ್ನು ಅಳಿಸಿದ್ದರೆ, ನೀವು ಮೊದಲು ಹಳೆಯ ಪರವಾನಗಿಯನ್ನು ಸಲ್ಲಿಸಬೇಕಾಗುತ್ತದೆ, ಅದರ ನಂತರವೇ ನೀವು ಹೊಸ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ- SBI: ನೀವು ಕುಳಿತಲ್ಲಿಯೇ ಎಸ್‌ಬಿಐ ಡೆಬಿಟ್ ಕಾರ್ಡ್ ಪಿನ್ ಅನ್ನು ರಚಿಸಬಹುದು; ಇಲ್ಲಿದೆ ಸುಲಭ ಮಾರ್ಗ

ಈ ರೀತಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ :
ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಕಲಿ ಚಾಲನಾ ಪರವಾನಗಿಗಾಗಿ  (How to apply Driving License) ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ನೀವು ಮೊದಲು ರಾಜ್ಯ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.

ಈ ಹಂತಗಳನ್ನು ಅನುಸರಿಸಿ :
1. ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://morth.gov.in/ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
2. ಇದರ ನಂತರ, LAD ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದರ ಪ್ರಿಂಟ್ ಔಟ್ ಪಡೆಯಿರಿ.
3. ಈಗ ನೀವು ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
4. ಈಗ ನೀವು ಈ ಎಲ್ಲಾ ಫಾರ್ಮ್‌ಗಳು ಮತ್ತು ದಾಖಲೆಗಳನ್ನು ಆರ್‌ಟಿಒ ಕಚೇರಿಯಲ್ಲಿ ಮಾತ್ರ ಸಲ್ಲಿಸಬೇಕು.
5. ನೀವು ಅದನ್ನು ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು.
6. ಈ ಪ್ರಕ್ರಿಯೆಯು ಪೂರ್ಣಗೊಂಡ 30 ದಿನಗಳ ನಂತರ, ನಿಮ್ಮ ಪರವಾನಗಿಯನ್ನು ರಚಿಸಲಾಗುತ್ತದೆ ಮತ್ತು ನೀವು ನೀಡಿದ ವಿಳಾಸಕ್ಕೆ ಬರುತ್ತದೆ.

ಇದನ್ನೂ ಓದಿ- ಒಂದೇ ನಂಬರ್ ಮೂಲಕ ಮಾಡಿಸಬಹುದು ಇಡೀ ಕುಟುಂಬದ PVC ಆಧಾರ್ ಕಾರ್ಡ್

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ನಿಮಗೆ ಮೂಲ ಡ್ರೈವಿಂಗ್ ಲೈಸೆನ್ಸ್ ನೀಡಿದ RTO ಗೆ ಹೋಗುವ ಮೂಲಕ, ನೀವು LLD ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಬೇಕು. ಇದರೊಂದಿಗೆ, ನೀವು ಕೆಲವು ನಿಗದಿತ ಶುಲ್ಕವನ್ನು ಸಹ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯ 30 ದಿನಗಳ ನಂತರ ನೀವು ನಿಮ್ಮ ಡಿಎಲ್ (DL) ಅನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More