Home> Business
Advertisement

FD ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಈ ಬ್ಯಾಂಕ್ ! ಗ್ರಾಹಕರಿಗೆ ಸಂತಸದ ಸುದ್ದಿ

ಇತ್ತೀಚೆಗಷ್ಟೇ  ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ಇದಾದ ನಂತರ ಈಗ ICICI ಬ್ಯಾಂಕ್ FDಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.
 

FD ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಈ ಬ್ಯಾಂಕ್ ! ಗ್ರಾಹಕರಿಗೆ ಸಂತಸದ ಸುದ್ದಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಒಂದೊಂದೇ ಬ್ಯಾಂಕ್‌ಗಳು ಎಫ್‌ಡಿಗಳ ಮೇಲೇ ನೀಡುವ ಬಡ್ಡಿದರಗಳನ್ನು ಹೆಚ್ಚಿಸುತ್ತಿದೆ. ಇದೀಗ ಮತ್ತೊಂದು ಬ್ಯಾಂಕ್ ತನ್ನ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ  ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ಇದಾದ ನಂತರ ಈಗ ICICI ಬ್ಯಾಂಕ್ FDಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ.

ICICI ಬ್ಯಾಂಕ್  : 

ಈಗ ICICI ಬ್ಯಾಂಕ್ 4.75% ರಿಂದ 7.15% ವರೆಗಿನ ಬಡ್ಡಿಯನ್ನು ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಬಡ್ಡಿಯನ್ನು ನೀಡುತ್ತದ್ದು, ಗ್ರಾಹಕರು ಈಗ ಈ ಹೆಚ್ಚಿದ ಬಡ್ಡಿದರದ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ : Electricity Bill: ಈ 700 ರೂ. ಸಾಧನ ಅಳವಡಿಸಿದ್ರೆ ನಿಮ್ಮ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ!
 
ಎಷ್ಟು ಹೆಚ್ಚಾಗಿದೆ ಬಡ್ಡಿದರ :  

ICICI ಬ್ಯಾಂಕ್ ಈಗ ನೀಡುತ್ತಿರುವ ಬಡ್ಡಿ ದರ ಈ ಕೆಳಗಿನಂತಿದೆ. ಈ ಬಡ್ಡಿ ದರವು ಸಾಮಾನ್ಯ ಜನರಿಗೆ ಕನಿಷ್ಠ 2 ಕೋಟಿ ರೂ ಮತ್ತು ಗರಿಷ್ಠ  5 ಕೋಟಿಗಳ  ಸಿಂಗಲ್ ಡೆಪಾಸಿಟ್ ಎಫ್‌ಡಿ ಮೇಲೆ ನೀಡುವ ದರವಾಗಿದೆ. ಈ ಬಡ್ಡಿ ದರಗಳು 23 ಫೆಬ್ರವರಿ 2023 ರಿಂದ ಅನ್ವಯಿಸುತ್ತವೆ.

ಹೊಸ ಬಡ್ಡಿದರಗಳು ಹೀಗಿವೆ :  
7 ದಿನಗಳಿಂದ 14 ದಿನಗಳು - 4.75%
15 ದಿನಗಳಿಂದ 29 ದಿನಗಳು - 4.75%
30 ದಿನಗಳಿಂದ 45 ದಿನಗಳು - 5.50% 
46 ದಿನಗಳಿಂದ 60 ದಿನಗಳು - 5.75% 
61 ದಿನಗಳಿಂದ 90 ದಿನಗಳು - 6.00% 
91 ದಿನಗಳಿಂದ 120 ದಿನಗಳು - 6.50 
% 150 ದಿನಗಳಿಂದ 150 ದಿನಗಳು - 6.50% 
151 ದಿನಗಳಿಂದ 184 ದಿನಗಳು - 6.50% 
185 ದಿನಗಳಿಂದ 210 ದಿನಗಳು - 6.65% 
211 ದಿನಗಳಿಂದ 270 ದಿನಗಳು - 6.65% 
271 ದಿನಗಳಿಂದ 289 ದಿನಗಳು - 6.75% 
290 ದಿನಗಳಿಂದ ಒಂದು ವರ್ಷದವರೆಗೆ - 6.75% 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುಸಿತ!

ಒಂದು ವರ್ಷದಿಂದ  389 ದಿನಗಳವರೆಗೆ - 7.15% 
390 ದಿನಗಳಿಂದ < 15 ತಿಂಗಳುಗಳು - 7.15% 
15 ತಿಂಗಳಿಂದ < 18 ತಿಂಗಳುಗಳು - 7.15% 
18 ತಿಂಗಳುಗಳಿಂದ 2 ವರ್ಷಗಳು - 7.15% 
2 ವರ್ಷಗಳು 1 ದಿನದಿಂದ 3 ವರ್ಷಗಳು - 7.00% 
3 ವರ್ಷಗಳು 1 ದಿನದಿಂದ 5 ರವರೆಗೆ ವರ್ಷದವರೆಗೆ - 6.75% 
5 ವರ್ಷಗಳು 1 ದಿನದಿಂದ 10 ವರ್ಷಗಳು - 6.75%

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More