Home> Business
Advertisement

EPFO ಬಡ್ಡಿ ದರ ಇಳಿಕೆಗೆ ಸರ್ಕಾರದ ಅನುಮೋದನೆ. ಇನ್ಮುಂದೆ ನೌಕರರಿಗೆ ಎಷ್ಟು ಬಡ್ಡಿ ಸಿಗಲಿದೆ?

EPFO Interest Rate Cut: ಹಣದುಬ್ಬರದ ನಡುವೆಯೇ ಕೇಂದ್ರ ಸರ್ಕಾರ ವೇತನ ಪಡೆಯುವವರ ಭವಿಷ್ಯ ನಿಧಿ ಬಡ್ಡಿದರಕ್ಕೆ ಕತ್ತರಿ ಹಾಕಿದೆ. 2021-22ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ  ಶೇ.8.1 ರಷ್ಟು ಬಡ್ಡಿ ದರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಇದು ಐದು ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಮೇಲೆ ನೇರ ಪ್ರಭಾವ ಬೀರಲಿದೆ. 
 

EPFO ಬಡ್ಡಿ ದರ ಇಳಿಕೆಗೆ ಸರ್ಕಾರದ ಅನುಮೋದನೆ. ಇನ್ಮುಂದೆ ನೌಕರರಿಗೆ ಎಷ್ಟು ಬಡ್ಡಿ ಸಿಗಲಿದೆ?

EPFO Interest Rate Cut: 2021-22 ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಶೇಕಡಾ 8.1 ರ ಬಡ್ಡಿ ದರವನ್ನು ನಿಗದಿಪಡಿಸಿ ಸರ್ಕಾರ ಅನುಮೋದನೆ ನೀಡಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. ಇದು ಐದು ಕೋಟಿಗೂ ಹೆಚ್ಚು  ಇಪಿಎಫ್‌ಒ ಚಂದಾದಾರರ ಮೇಲೆ ನೇರ ಪ್ರಭಾವ ಬೀರಲಿದೆ. ಮಾರ್ಚ್‌ನಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2021-22ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ರಿಂದ 8.1 ಕ್ಕೆ ಇಳಿಸಲು ನಿರ್ಧರಿಸಿತ್ತು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಮಾಹಿತಿ

ಶುಕ್ರವಾರ ಇಪಿಎಫ್‌ಒ ಕಚೇರಿ ಹೊರಡಿಸಿರುವ ಆದೇಶದ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿಯೊಬ್ಬ ಸದಸ್ಯರಿಗೆ 2021-22ಕ್ಕೆ ಶೇ.8.1 ಪ್ರತಿಶತ ಬಡ್ಡಿದರವನ್ನು ಪಾವತಿಸಲು ಕೇಂದ್ರ ಸರ್ಕಾರದ ಅನುಮೋದನೆ ನೀಡಿರುವ ಕುರಿತು ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಕಾರ್ಮಿಕ ಸಚಿವಾಲಯ ಇದರ ಒಪ್ಪಿಗೆಗಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸರ್ಕಾರದ ಅನುಮೋದನೆಯ ನಂತರ, ಇಪಿಎಫ್‌ಒ ಆರ್ಥಿಕ ವರ್ಷಕ್ಕೆ ನಿಗದಿತ ಬಡ್ಡಿ ದರವನ್ನು ಉದ್ಯೋಗಿಗಳ ಖಾತೆಗಳಲ್ಲಿ ಠೇವಣಿ ಮಾಡಲು ಪ್ರಾರಂಭಿಸಲಿದೆ.

ಇದನ್ನೂ ಓದಿ-Honda ಕಾರು ಖರೀದಿಸುವವರಿಗೆ ಗುಡ್ ನ್ಯೂಸ್ , ಎಲ್ಲಾ ಮಾದರಿಗಳ ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್

1977-78 ರ ಬಳಿಕ ಅತ್ಯಂತ ಕಡಿಮೆ ಬಡ್ಡಿ ದರ ಇದಾಗಿದೆ
1977-78ರ ಬಳಿಕ ಇದೆ ಮೊದಲ ಬಾರಿಗೆ ಇಪಿಎಫ್ ಬಡ್ಡಿದರ ಶೇ.8.1 ಕ್ಕೆ ಇಳಿಕೆಯಾಗಿದೆ. ಆಗ ಶೇ.8ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿತ್ತು. ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (CBT) ಮಾರ್ಚ್ 2021 ರಲ್ಲಿ 2020-21 ಕ್ಕೆ EPF ಠೇವಣಿಗಳ ಮೇಲೆ ಶೇ.8.5 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿದ್ದರು. ಇದಕ್ಕೆ ಅಕ್ಟೋಬರ್ 2021 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಿತ್ತು. ಇದಾದ ಬಳಿಕ, 2020-21 ರಲ್ಲಿ  ಗ್ರಾಹಕರ ಖಾತೆಗೆ ಶೇಕಡಾ 8.5 ರಷ್ಟು ಬಡ್ಡಿ ದರವನ್ನು ಪಾವತಿಸಲು ಇಪಿಎಫ್‌ಒ ಕ್ಷೇತ್ರ ಕಚೇರಿಗಳಿಗೆ ಸೂಚನೆಗಳನ್ನು ನೀಡಿತ್ತು.

ಇದನ್ನೂ ಓದಿ-ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ

ಉದ್ಯೋಗಿಗಳಿಗೆ ಹಣದ ಅವಶ್ಯಕತೆ ಇತ್ತು
ಈ ಕುರಿತು ಮಾಹಿತಿ ನೀಡಿರುವ ಉದ್ಯೋಗಿಗಳನ್ನು ಪ್ರತಿನಿಧಿಸುವ ಇಪಿಎಫ್‌ಒ ಸಂಸ್ಥೆಯ  ಟ್ರಸ್ಟಿ ಆಗಿರುವ  ಕೆ ಇ ರಘುನಾಥನ್, ಕಾರ್ಮಿಕ ಮತ್ತು ಹಣಕಾಸು ಸಚಿವಾಲಯ ಬಡ್ಡಿ ದರವನ್ನು ಅನುಮೋದಿಸಿದ ವೇಗವು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ. ಪ್ರಸ್ತುತ ಉದ್ಯೋಗಿಗಳಿಗೆ ಹಣಕಾಸಿನ ಅವಶ್ಯಕತೆ ಇತ್ತು ಮತ್ತು ಇದು ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳಂತಹ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡಲಿದೆ ಎಂದಿದ್ದಾರೆ. ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19 ರಲ್ಲಿ ಶೇ. 8.65 ರಿಂದ 2019-20 ರಲ್ಲಿ ಶೇ. 8.5 ಕ್ಕೆ ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಮಾಡಿತ್ತು. 2019-20ರ ಇಪಿಎಫ್ ಬಡ್ಡಿ ದರವು 2012-13ರ ನಂತರ ಅತ್ಯಂತ ಕಡಿಮೆಯಾಗಿದ್ದು, ಅದನ್ನು ಶೇ.8.5ಕ್ಕೆ ಇಳಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More