Home> Business
Advertisement

LPG Subsidy: ಎಲ್‌ಪಿಜಿ ಸಬ್ಸಿಡಿ ಬಗ್ಗೆ ಸರ್ಕಾರ ಹೊಸ ಯೋಜನೆ? ಯಾರಿಗೆ ಸಿಗಲಿದೆ ಇದರ ಲಾಭ

LPG Cylinder Latest News: ಇತ್ತೀಚಿನ ತಿಂಗಳುಗಳಲ್ಲಿ, ದೇಶದ 15 ಪ್ರಾಂತ್ಯಗಳ ಆಯ್ದ ಜಿಲ್ಲೆಗಳಲ್ಲಿ LPG ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯ ಪ್ರಯೋಜನವನ್ನು ನೀಡಲಾಗುತ್ತಿದೆ. ಆದರೆ ಈಗ ಈ ಸಂಖ್ಯೆ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 8 ರಾಜ್ಯಗಳಿಗೆ ಇಳಿದಿದೆ.

LPG Subsidy: ಎಲ್‌ಪಿಜಿ ಸಬ್ಸಿಡಿ ಬಗ್ಗೆ ಸರ್ಕಾರ ಹೊಸ ಯೋಜನೆ? ಯಾರಿಗೆ ಸಿಗಲಿದೆ ಇದರ ಲಾಭ

LPG Cylinder Latest News: ಹಣದುಬ್ಬರ ಏರಿಕೆಯ ನಡುವೆಯೇ ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿ ಬಗ್ಗೆ ಸಾಮಾನ್ಯ ಜನರಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಶೀಘ್ರದಲ್ಲೇ ಎಲ್‌ಪಿಜಿ ಸಬ್ಸಿಡಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಗುಡ್ ನ್ಯೂಸ್ ದೊರೆಯುವ ಸಾಧ್ಯತೆ ಇದೆ. ಎಲ್‌ಪಿಜಿ ಸಿಲಿಂಡರ್ ಬೆಲೆ 1000 ರೂಪಾಯಿಗಳನ್ನು ಮುಟ್ಟಬಹುದು ಎಂಬುದು ನಿರಂತರ ಚರ್ಚೆಯಾಗುತ್ತಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಯಾವುದೇ ಹೇಳಿಕೆ ಮುನ್ನೆಲೆಗೆ ಬಂದಿಲ್ಲ.

ಈ ತಿಂಗಳಲ್ಲೂ ವಾಣಿಜ್ಯ ಅನಿಲ ಬೆಲೆ ಏರಿಕೆಯಾಗಿದೆ. ಆದರೆ ಸರ್ಕಾರದ ಆಂತರಿಕ ಮೌಲ್ಯಮಾಪನವು ಗ್ರಾಹಕರು ಸಿಲಿಂಡರ್‌ಗೆ 1000 ರೂ.ವರೆಗೆ ಪಾವತಿಸಲು ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ. ಮೂಲಗಳ ಪ್ರಕಾರ, ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬಗ್ಗೆ ಸರ್ಕಾರ ಎರಡು ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು. ಮೊದಲು ಸರಕಾರ ಸಬ್ಸಿಡಿ ರಹಿತ ಸಿಲಿಂಡರ್ ಪೂರೈಸಬೇಕು. ಎರಡನೆಯದಾಗಿ, ಕೆಲವು ಆಯ್ದ ಗ್ರಾಹಕರು ಸಬ್ಸಿಡಿಯ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ- Small Business Idea:ಮನೆಯಲ್ಲಿಯೇ ಕುಳಿತು ತಿಂಗಳಿಗೆ ರೂ.90 ಸಾವಿರ ಹಣ ಗಳಿಕೆಗೆ ಅವಕಾಶ ನೀಡುತ್ತಿದೆ, ಮಿಸ್ ಮಾಡ್ಬೇಡಿ

ಸಬ್ಸಿಡಿಯಲ್ಲಿ ಸರ್ಕಾರದ ಯೋಜನೆ ಏನು?
ಸಬ್ಸಿಡಿ ನೀಡುವ ಬಗ್ಗೆ ಸರಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಹೇಳಿಕೆ ಹೊರಬಿದ್ದಿಲ್ಲ. ಆದರೆ ಇದುವರೆಗೆ ಬಂದಿರುವ ಮಾಹಿತಿ ಪ್ರಕಾರ 10 ಲಕ್ಷ ಆದಾಯದ ನಿಯಮ ಜಾರಿಯಲ್ಲಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯ ಲಾಭ ದೊರೆಯಲಿದೆ. ಉಳಿದ ಜನರಿಗೆ ಸಬ್ಸಿಡಿ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಈಗ ಯಾರಿಗೆ ಸಬ್ಸಿಡಿ ಸಿಗುತ್ತದೆ?
ಕಳೆದ ಹಲವಾರು ತಿಂಗಳುಗಳಿಂದ ಕೆಲವು ಸ್ಥಳಗಳಲ್ಲಿ ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು (LPG Subsidy) ನಿಲ್ಲಿಸಲಾಗಿದೆ ಮತ್ತು ಈ ನಿಯಮವು ಮೇ 2020 ರಿಂದ ಚಾಲನೆಯಲ್ಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ನಿರಂತರವಾಗಿ ಕುಸಿದ ನಂತರವೇ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇದುವರೆಗೂ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. 

ಇದನ್ನೂ ಓದಿ- Business Idea: ಸರ್ಕಾರದ ಜೊತೆಗೂಡಿ ಆರಂಭಿಸಿ ಈ ಬಿಸಿನೆಸ್, ಕೈತುಂಬಾ ಸಂಪಾದನೆಯ ಜೊತೆಗೆ, ಹಾನಿಯ ಚಾನ್ಸೇ ಇಲ್ಲ

ಸಬ್ಸಿಡಿಗೆ ಸರ್ಕಾರ ತುಂಬಾ ಖರ್ಚು ಮಾಡುತ್ತದೆ:
2021 ರ ಆರ್ಥಿಕ ವರ್ಷದಲ್ಲಿ ಸಬ್ಸಿಡಿಗಳ ಮೇಲಿನ ಸರ್ಕಾರದ ವೆಚ್ಚವು 3,559 ಕೋಟಿ ರೂ. 2020ರ ಹಣಕಾಸು ವರ್ಷದಲ್ಲಿ ಈ ವೆಚ್ಚ 24,468 ಕೋಟಿ ರೂ. ವಾಸ್ತವವಾಗಿ ಇದು ಜನವರಿ 2015 ರಲ್ಲಿ ಪ್ರಾರಂಭವಾದ DBT ಯೋಜನೆಯ ಅಡಿಯಲ್ಲಿದೆ, ಇದರ ಅಡಿಯಲ್ಲಿ ಗ್ರಾಹಕರು ಸಬ್ಸಿಡಿ ರಹಿತ LPG ಸಿಲಿಂಡರ್‌ಗೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಸಬ್ಸಿಡಿ ಹಣವನ್ನು ಸರ್ಕಾರದ ಪರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತದೆ. ಈ ಮರುಪಾವತಿ ನೇರವಾಗಿರುವುದರಿಂದ, ಯೋಜನೆಗೆ DBTL ಎಂದು ಹೆಸರಿಸಲಾಗಿದೆ.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಏರಿಕೆ:
ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ 15 ರೂ. ಏರಿಕೆಯಾಗಿದೆ. ಇದರೊಂದಿಗೆ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 884.50 ರೂ.ನಿಂದ 899.50 ರೂ.ಗೆ ಏರಿಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More