Home> Business
Advertisement

Aadhaar Card Update: ಆಧಾರ್ ಗೆ ಸಬಂಧಿಸಿದ ಬಿಗ್ ಅಪ್ಡೇಟ್ : ಮೂರು ತಿಂಗಳವರೆಗೆ ಈ ಸೇವೆ ಉಚಿತ !

Aadhaar Card lastest update : ಜೂನ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದು. ಮೊದಲು ಈ ಗಡುವು ಮಾರ್ಚ್ 14ರವರೆಗೆ ನಿಗದಿಯಾಗಿತ್ತು.

Aadhaar Card Update:  ಆಧಾರ್ ಗೆ ಸಬಂಧಿಸಿದ ಬಿಗ್ ಅಪ್ಡೇಟ್ : ಮೂರು ತಿಂಗಳವರೆಗೆ ಈ ಸೇವೆ ಉಚಿತ !

Aadhaar Card Update: ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ಅಪ್ ಡೇಟ್ ಮಾಡುವ ಕಾಲಮಿತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜೂನ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದು. ಮೊದಲು ಈ ಗಡುವು ಮಾರ್ಚ್ 14ರವರೆಗೆ ನಿಗದಿಯಾಗಿತ್ತು.ಈಗ ಸರ್ಕಾರ ಈ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ. ಈ ಮೂಲಕ ಈ ಸೇವೆಯು ಜೂನ್ 14 ರವರೆಗೆ myadhaar ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು UIDAI ತಿಳಿಸಿದೆ.

ಆಧಾರ್ ಕಾರ್ಡ್ ಅನ್ನು ಹೇಗೆ ನವೀಕರಿಸುವುದು ?:

> ಮೊದಲನೆಯದಾಗಿ UIDAI ನ ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಹೋಗಿ .
> ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾವನ್ನು ಇಲ್ಲಿ ನಮೂದಿಸಿ.
> ಇದರ ನಂತರ ಸೆಂಡ್ ಒಟಿಪಿ ಕ್ಲಿಕ್ ಮಾಡಿ.
> ಈಗ 'Update Demographics Data' ಆಯ್ಕೆಯನ್ನು ಆರಿಸಿ.
> ಸಂಬಂಧಿತ ಆಯ್ಕೆಯನ್ನು ಆರಿಸಿದ ನಂತರ, ' Proceed' ಕ್ಲಿಕ್ ಮಾಡಿ.
> ನೀವು ನವೀಕರಿಸಲು ಬಯಸುವ ಯಾವುದೇ ಮಾಹಿತಿಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
> Submit  ಬಟನ್ ಕ್ಲಿಕ್ ಮಾಡುವ ಮೊದಲು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ.
ಬದಲಾವಣೆಗಳನ್ನು ಟ್ರ್ಯಾಕ್ ಮಾಡಲು ನೀವು 'ಅಪ್‌ಡೇಟ್  ರಿಕ್ವೆಸ್ಟ್ ನಂಬರ್ (URN)' ಅನ್ನು ಬಳಸಬಹುದು.

ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚಳ!

 myadhaar ಪೋರ್ಟಲ್‌ನಲ್ಲಿ ಜೂನ್ 14 ರವರೆಗೆ ಮಾತ್ರ ಆಧಾರ್ ಕಾರ್ಡ್ ದಾಖಲೆಗಳನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು. ಆಧಾರ್ ಸೇವಾ ಕೇಂದ್ರಕ್ಕೆ ಹೋದರೆ 50 ರೂ.ಪಾವತಿಸಬೇಕಾಗುತ್ತದೆ. ಯಾವುದೇ ಆಧಾರ್ ಸೇವಾ ಪೂರೈಕೆದಾರರು ಹೆಚ್ಚು ಶುಲ್ಕ ವಿಧಿಸಬಾರದು ಎಂದು ಕಳೆದ ವರ್ಷವೇ ಸರ್ಕಾರ ಎಚ್ಚರಿಸಿತ್ತು. 

ಆಧಾರ್ ಮಾಹಿತಿಯನ್ನು ನವೀಕರಿಸಲು ಹೆಚ್ಚಿನ ಶುಲ್ಕವನ್ನು ವಿಧಿಸದಂತೆ ಯುಐಡಿಎಐ ಎಲ್ಲಾ ಆಧಾರ್ ಆಪರೇಟರ್‌ಗಳಿಗೆ ಸೂಚನೆ ನೀಡಿದೆ ಎಂದು ರಾಜ್ಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಇದರ ಹೊರತಾಗಿಯೂ ಹೆಚ್ಚುವರಿ ಹಣ ಪಡೆದಿರುವ ದೂರು ಬಂದರೆ ತನಿಖೆ ನಡೆಸಿ ಸಂಬಂಧಪಟ್ಟ ಆಧಾರ್ ನೋಂದಣಿ ನೋಂದಣಾಧಿಕಾರಿಗೆ 50,000 ರೂ.ದಂಡ ವಿಧಿಸಲಾಗುವುದು. ಈ ಬಗ್ಗೆ ಯುಐಡಿಎಐಗೆ ಇ-ಮೇಲ್ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 1947ಕ್ಕೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು. 

ಇದನ್ನೂ ಓದಿ : ಜಾರಿಗೆ ಬರುತ್ತಿದೆ Golden Hour Treatment : ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಿಗುವುದು ಉಚಿತ ಚಿಕಿತ್ಸೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More