Home> Business
Advertisement

Good News: ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಕುಸಿತ..! ಎಷ್ಟು ಗೊತ್ತಾ?

ಫಾರ್ಚೂನ್ ಬ್ರಾಂಡ್ ಅಡಿ ಉತ್ಪನ್ನವನ್ನು ಮಾರಾಟ ಮಾಡುವ ಖಾದ್ಯ ತೈಲ ಕಂಪನಿ ಅದಾನಿ ವಿಲ್ಮಾರ್, ಅಂತಾರಾಷ್ಟ್ರೀಯ ತೈಲ ಬೆಲೆಗಳು ಕಡಿಮೆಯಾದ ಹಿನ್ನೆಲೆ ದರ ಕಡಿಮೆ ಮಾಡುವುದಾಗಿ ಘೋಷಿಸಿದೆ.

Good News: ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಕುಸಿತ..! ಎಷ್ಟು ಗೊತ್ತಾ?

ನವದೆಹಲಿ: ಕೇಂದ್ರ ಸರ್ಕಾರದ ಪ್ರಯತ್ನದ ನಂತರ ಖಾದ್ಯತೈಲ ಬೆಲೆ ಇಳಿಕೆಯಾಗುತ್ತಿದೆ. ಈ ಹಿಂದೆ ತೈಲ ಕಂಪನಿಗಳು ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದವು. ಅದರಂತೆ ಅಂತಾರಾಷ್ಟ್ರೀಯ ತೈಲಬೆಲೆ ಕಡಿಮೆಯಾದ ಬಳಿಕ ಇದೀಗ ಫಾರ್ಚೂನ್ ಬ್ರಾಂಡ್‌ನಡಿ ಉತ್ಪನ್ನಗಳನ್ನು ಮಾರಾಟ ಮಾಡುವ ಖಾದ್ಯ ತೈಲ ಕಂಪನಿ ಅದಾನಿ ವಿಲ್ಮಾರ್ ದರ ಇಳಿಕೆ ಮಾಡುವುದಾಗಿ ಹೇಳಿದೆ. ಪ್ರತಿ  ಲೀಟರ್‌ಗೆ 30 ರೂ.ವರೆಗೆ ಕಡಿತಗೊಳಿಸುವುದಾಗಿ ಕಂಪನಿಯು ಘೋಷಿಸಿದೆ.

ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಗರಿಷ್ಠ ಇಳಿಕೆ

ಸೋಯಾಬೀನ್ ಎಣ್ಣೆಯ ಬೆಲೆಯಲ್ಲಿ ಗರಿಷ್ಠ ಇಳಿಕೆ ಮಾಡಲಾಗಿದೆ. ಹೊಸ ಬೆಲೆಗಳೊಂದಿಗೆ ಸರಕು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಹಿಂದೆ ಧಾರಾ ಬ್ರಾಂಡ್‌ನಲ್ಲಿ ಖಾದ್ಯ ತೈಲ ಮಾರಾಟ ಮಾಡುವ ಮದರ್ ಡೈರಿ, ಸೋಯಾಬೀನ್ ಮತ್ತು ರೈಸ್ ಬ್ರಾನ್ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 14 ರೂ. ಇಳಿಕೆ ಮಾಡಿತ್ತು. ಖಾದ್ಯತೈಲದ ಬೆಲೆಗಳ ಬಗ್ಗೆ ಚರ್ಚಿಸಲು ಆಹಾರ ಸಚಿವಾಲಯವು ಜುಲೈ 6ರಂದು ಸಭೆ ಕರೆದಿತ್ತು. ಈ ವೇಳೆ ಜಾಗತಿಕ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ನೀಡುವಂತೆ ಎಲ್ಲಾ ಖಾದ್ಯತೈಲ ಕಂಪನಿಗಳಿಗೆ ಸೂಚಿಸಲಾಗಿತ್ತು.

ಇದನ್ನೂ ಓದಿ: Petrol-Diesel Price: ದೇಶದಲ್ಲಿ ಮತ್ತಷ್ಟು ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್! ಇಂದಿನ ಅಪ್‌ಡೇಟ್ ತಿಳಿಯಿರಿ

ಹೀಗಾಗಿ ಅದಾನಿ ಕಂಪನಿ ಖಾದ್ಯತೈಲ ಬೆಲೆ ಇಳಿಕೆ ಘೋಷಿಸಿದೆ. ‘ಖಾದ್ಯತೈಲ ಬೆಲೆಗಳಲ್ಲಿನ ಇಳಿಕೆ ಲಾಭವನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನವನ್ನು ಗಮನದಲ್ಲಿಟ್ಟುಕೊಂಡು, ಅದಾನಿ ವಿಲ್ಮರ್ ಬೆಲೆಗಳನ್ನು ಕಡಿತಗೊಳಿಸಿದೆ’ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  

ಸೋಯಾಬೀನ್ ಎಣ್ಣೆ ಬೆಲೆ ಎಷ್ಟಿದೆ..?

ಫಾರ್ಚೂನ್ ಸೋಯಾಬೀನ್ ತೈಲಬೆಲೆ ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್‌ಗೆ 210 ರೂ.ನಿಂದ 199 ರೂ.ಗೆ ಇಳಿಕೆಯಾಗಿದೆ. ಸಾಸಿವೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ ಲೀಟರ್‌ಗೆ 195 ರೂ.ನಿಂದ 190 ರೂ.ಗೆ ಇಳಿಕೆಯಾಗಿದೆ.

ಇದನ್ನೂ ಓದಿ: Gold-Sliver Price: ಚಿನ್ನ ಪ್ರಿಯರೇ ಸಿಹಿ ಸುದ್ದಿ: ಹಳದಿ ಲೋಹದ ಬೆಲೆಯಲ್ಲಿ ಭಾರೀ ಇಳಿಕೆ

ಫಾರ್ಚೂನ್ ರೈಸ್ ಬ್ರಾನ್ ತೈಲ ಬೆಲೆ ಲೀಟರ್‌ಗೆ 225 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ‘ನಾವು ಜಾಗತಿಕವಾಗಿ ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭವನ್ನು ರವಾನಿಸಿದ್ದೇವೆ. ಹೊಸ ಸರಕುಗಳು ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿವೆ’ ಎಂದು ಅದಾನಿ ವಿಲ್ಮಾರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಂಗ್ಶು ಮಲಿಕ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More