Home> Business
Advertisement

Yamaha RX 100 ಪ್ರಿಯರಿಗೊಂದು ಸಂತಸದ ಸುದ್ದಿ, ಎದೆಬಡಿತ ಹೆಚ್ಚಿಸುವ ಸುದ್ದಿ ಪ್ರಕಟ

Yamaha RX100: ಯಮಾಹಾ ಆರ್.ಎಕ್ಸ್ 100 ಒಂದು ಲೆಜೆಂಡ್ ಬೈಕ್ ಆಗಿರುವುದರಿಂದ ಯಾವುದೇ ಬೈಕ್ ಗೆ RX100 ಬ್ಯಾಡ್ಜ್ ನೀಡುವುದು ಯಮಹಾ ಮುಂದಿರುವ ಒಂದು ದೊಡ್ಡ ಸವಾಲಾಗಿದೆ. ಹೊಸ RX100 ಗಾಗಿ ಕಂಪನಿಯು ಹೊಸ ರೀತಿಯ ಬೈಕ್ ಅನ್ನು ಅಭಿವೃದ್ಧಿಪಡಿಸಬೇಕಾಗಿದ್ದು, ಅದಕ್ಕೆ RX100 ಬ್ಯಾಡ್ಜ್ ನಿಭಾಯಿಸುವ ಸಾಮರ್ಥ್ಯ ಇರಬೇಕು.
 

Yamaha RX 100 ಪ್ರಿಯರಿಗೊಂದು ಸಂತಸದ ಸುದ್ದಿ, ಎದೆಬಡಿತ ಹೆಚ್ಚಿಸುವ ಸುದ್ದಿ ಪ್ರಕಟ

Yamaha RX100 To Launch Soon..!: ಭಾರತದಲ್ಲಿ ಯಮಾಹಾ ಕಂಪನಿಯ ಒಂದು ಬೈಕ್ ಇದುವರೆಗೂ ಜನರ ಹೃದಯದ ಮೇಲೆ ರಾರಾಜಿಸುತ್ತದೆ ಎಂದರೆ ಅದುವೇ ಯಮಹಾ ಆರ್ಎಕ್ಸ್ 100. ಜನರೇಶನ್ ಹೊರಗೆ ಎಲ್ಲಾ ವಯಸ್ಸಿನ ಜನರು ಈ ಬೈಕ್ ಗೆ ಅಭಿಮಾನಿಯಾಗಿದ್ದರು. ಇದಕ್ಕೆ ಕಾರಣ ಎಂದರೆ ಇದಕ್ಕಿಂತ ಹೆಚ್ಚು ಜನಪ್ರೀಯ ಯಮಹಾ ಬೈಕ್ ಭಾರತ ಇದುವರೆಗೂ ಕಂಡಿಲ್ಲ. ಒಂದು ಕಾಲದಲ್ಲಿ ಈ ಬೈಕ್ ಜನರ ಹೃದಯದ ಮೇಲೆ ತನ್ನ ಅಧಿಪತ್ಯ ಸಾಧಿಸಿತ್ತು. ಇಂದಿಗೂ ಕೂಡ ಈ ಬೈಕ್ ಅನ್ನು ಇಷ್ಟ ಪಡುವ ಸಾಕಷ್ಟು ಜನರನ್ನು ನೀವು ನೋಡಿರಬಹುದು. 1985 ರಲ್ಲಿ ಈ ಬೈಕ್ ನ ಉತ್ಪಾದನೆ ಆರಂಭಗೊಂಡಿತ್ತು ಮತ್ತು 1996ರವರೆಗೆ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿ ನೇಪಥ್ಯಕ್ಕೆ ಜಾರಿತು. ಆದರೆ, ಇದೀಗ ಮತ್ತೊಮ್ಮೆ ಯಮಹಾ ಕಂಪನಿ ಈ ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಈ ಕುರಿತು ಬ್ಯುಸಿನೆಸ್‌ಲೈನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ, ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನಾ ಭವಿಷ್ಯದ ಒಂದು ಯೋಜನೆಯ ಹಿನ್ನೆಲೆ ಯಮಹಾ ತನ್ನ ಯಾವುದೇ ಉತ್ಪನ್ನದಲ್ಲಿ RX100 ಮಾನಿಕರ್ ಅನ್ನು ಬಳಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯು RX100 ಮತ್ತೆ ಮಾರುಕಟ್ಟೆಗಿಳಿಯಲಿದೆ ಎಂಬ ಸಂಕೇತ ನೀಡಿದೆ. ಆದರೆ, ಇದಕ್ಕೂ ಮಹತ್ವದ ವಿಷಯವೆಂದರೆ, ಹಳೆಯ ಯಮಹಾ RX100 ಅನ್ನು ಮರಳಿ ತರಲು ಸಾಧ್ಯವಿಲ್ಲ ಏಕೆಂದರೆ ಇದು ಟೂ-ಸ್ಟ್ರೋಕ್ ಎಂಜಿನ್ ಅನ್ನು ಆಧರಿಸಿತ್ತು, ಅದು ಎಂದಿಗೂ BS6 ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಸಾಧ್ಯವಿಲ್ಲ. ಹೀಗಿರುವಾಗ ಅದರ ಎಂಜಿನ್ ಅನ್ನು ಬದಲಾಯಿಸಿ, ವಿನ್ಯಾಸದಲ್ಲಿಯೂ ಕೂಡ ನಾವಿನ್ಯತೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. 

ಇದನ್ನೂ ಓದಿ-New Wage Code Update: ಹೊಸ ವೇತನ ಸಂಹಿತೆ ಯಾವಾಗ ಜಾರಿಗೆ ಬರಲಿದೆ, ಲೋಕಸಭೆಗೆ ಕಾರ್ಮಿಕ ಸಚಿವರು ನೀಡಿದ ಮಾಹಿತಿ ಏನು?

ಯಮಾಹಾ ಆರ್.ಎಕ್ಸ್ 100 ಒಂದು ಲೆಜೆಂಡ್ ಬೈಕ್ ಆಗಿರುವುದರಿಂದ ಯಾವುದೇ ಬೈಕ್ ಗೆ RX100 ಬ್ಯಾಡ್ಜ್ ನೀಡುವುದು ಯಮಹಾ ಇಂಡಿಯಾ ಮುಂದಿರುವ ಒಂದು ದೊಡ್ಡ ಸವಾಲಾಗಿದೆ. ಹೊಸ RX100 ಗಾಗಿ ಕಂಪನಿಯು ಹೊಸ ರೀತಿಯ ಬೈಕ್ ಅನ್ನು ಅಭಿವೃದ್ಧಿಪಡಿಸಬೇಕಾಗಿದ್ದು, ಅದಕ್ಕೆ RX100 ಬ್ಯಾಡ್ಜ್ ನಿಭಾಯಿಸುವ ಸಾಮರ್ಥ್ಯವಿರಬೇಕು. ಇದಕ್ಕಾಗಿ ಕಂಪನಿ ಹಳೆಯ ಮಾಡೆಲ್ ಗೆ ಶ್ರದ್ಧಾಂಜಲಿಯನ್ನು ನೀಡಿ ರೆಟ್ರೋ ಡಿಸೈನ್ ಸಂಯೋಜನೆ ಹೊಂದಿರುವ ವಿನ್ಯಾಸವನ್ನು ಬಿಡುಗಡೆ ಮಾಡಬಹುದು. ಅದೇನೇ ಇದ್ದರು ಯಮಹಾ ಇಂಡಿಯಾ ಪಾಲಿಗೆ ಇದೊಂದು ಬಹುದೊಡ್ಡ ಸವಾಲಾಗಿರಲಿದೆ.

ಇದನ್ನೂ ಓದಿ-New Traffic Rules: ಇನ್ಮುಂದೆ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೂ ಕೂಡ ದಂಡ ಬೀಳಲಿದೆ, ಏನಿದು ಹೊಸ ನಿಯಮ?

ಆದರೆ, ಇದರರ್ಥ RX100 ಮರುಬಿಡುಗಡೆಗಾಗಿ ಕಾಯುತ್ತಿರುವವರ ನಿರೀಕ್ಷೆ ಬೇಗ ಈಡೇರಲಿದೆ ಎಂದಲ್ಲ. ವರದಿಗಳ ಪ್ರಕಾರ ಒಂದು ವೇಳೆ ಯಮಾಹಾ ಕಂಪನಿ ಆರ್ಎಕ್ಸ್ 100 ಬೈಕ್ ಬಿಡುಗಡೆ ಮಾಡಿದರೂ ಕೂಡ ಅದು 2025 ರ ಮೊದಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ, 2026 ರಲ್ಲಿ ಕಂಪನಿ ಈ ಬೈಕ್ ಬಿಡುಗಡೆಯ ಯೋಜನೆ ರೂಪಿಸಬಹುದಾಗಿದೆ. ಪ್ರಸ್ತುತ ಯಮಹಾ ಪೋರ್ಟ್ ಫೋಲಿಯೋ ನಲ್ಲಿ 125 ಸಿಸಿ, 150 ಸಿಸಿ ಸ್ಟ್ರೀಟ್ ಹಾಗೂ ಸ್ಪೋರ್ಟ್ಸ್ ಮೋಟರ್ ಸೈಕಲ್ ಹಾಗೂ 250ಸಿಸಿ ಸ್ಟ್ರೀಟ್ ಬೈಕ್ ಶಾಮೀಲಾಗಿವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More