Home> Business
Advertisement

Gold Price Today: ರೆಪೋ ದರ ಏರಿಸಿದ RBI, ಚಿನ್ನ-ಬೆಳ್ಳಿ ದರದ ಮೇಲೂ ಪರಿಣಾಮ!

Gold Price Today: ಇಂದು ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನ-ಬೆಳ್ಳಿಯ ದರ ಏರಿಕೆ ಕಂಡಿದೆ. MCXನಲ್ಲಿ 24-ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 108 ರೂ.ಗಳಷ್ಟು (ಶೇ. 0.20) ಏರಿಕೆಯಾಗಿ, 10 ಗ್ರಾಂಗೆ 53,868 ರೂ.ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 226 (ಶೇ. 0.35) ರೂ.ನಷ್ಟು ಏರಿಕೆಯಾಗಿದೆ.  

Gold Price Today: ರೆಪೋ ದರ ಏರಿಸಿದ RBI, ಚಿನ್ನ-ಬೆಳ್ಳಿ ದರದ ಮೇಲೂ ಪರಿಣಾಮ!

ನವದೆಹಲಿ: ಆರ್‌ಬಿಐನ ಹಣಕಾಸು ನೀತಿ ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್ ದೊಡ್ಡ ಘೋಷಣೆ ಮಾಡಿದೆ. ಆರ್‌ಬಿಐ ಈ ವರ್ಷ 5ನೇ ಬಾರಿಗೆ ರೆಪೋ ದರವನ್ನು ಹೆಚ್ಚಿಸಿದೆ. ಆರ್‌ಬಿಐ 35 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೂ ಇದರ ಪರಿಣಾಮ ಉಂಟಾಗಿದೆ. ಆರ್‌ಬಿಐ ರೆಪೋ ದರ ಏರಿಕೆ ಘೋಷಿಸಿದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬದಲಾವಣೆಯಾಗಿದೆ.  

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು?

ಬುಧವಾರ ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆ ತೋರಿಸಿವೆ. ಇಂದು ಬೆಳಗ್ಗೆ 9.10 ಗಂಟೆಗೆ ಎಂಸಿಎಕ್ಸ್‌ನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 108 ರೂ.ಗಳಷ್ಟು (ಶೇ.0.20) ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂಗೆ 53,868 ರೂ.ನಂತೆ ವಹಿವಾಟು ನಡೆಸುತ್ತಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 226 ರೂ. (ಶೇ.0.35) ನಷ್ಟು ಏರಿಕೆ ಕಂಡಿದ್ದ, 65,617 ರೂ.ನಂತೆ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯ ಮೂಲಕ ವಿವಾಹಿತರ ಖಾತೆಗೆ ಬರುವುದು 59,400 ರೂಪಾಯಿ.!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ & ಬೆಳ್ಳಿ ದರ

ಇನ್ನು ಜಾಗತಿಕ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು $0.40 (ಶೇ.0.02)ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $1771.60 ತಲುಪಿದೆ, ಅದೇ ರೀತಿ ಬೆಳ್ಳಿ $0.05 ಏರಿಕೆಯೊಂದಿಗೆ $22.23 ಔನ್ಸ್‌ಗೆ ವಹಿವಾಟು ನಡೆಸುತ್ತಿದೆ.

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ & ಬೆಳ್ಳಿ ಬೆಲೆ

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನ 473 ರೂ.ಗಳಷ್ಟು ಅಗ್ಗವಾಗಿದ್ದು, 53,898 ರೂ.ನಂತೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 1241 ರೂ. ಇಳಿಕೆಯಾಗಿದ್ದು, 65,878 ರೂ.ಗೆ ತಲುಪಿತು.

ಇದನ್ನೂ ಓದಿ: ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ-ಟಾಟಾದ ಅಗ್ಗದ ಕಾರುಗಳಿವು.!

ಆರ್‌ಬಿಐನ ಎಂಪಿಸಿ ಸಭೆಯಲ್ಲಿ ರೆಪೊ ದರವನ್ನು ಹೆಚ್ಚಿಸಿದ ನಂತರ ಮಾರುಕಟ್ಟೆಯ ಟ್ರೆಂಡ್ ಬದಲಾಗಿದೆ. ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಎರಡೂ ಗ್ರೀನ್ ಮಾರ್ಕ್‌ನಲ್ಲಿ ವಹಿವಾಟು ನಡೆಸುತ್ತಿವೆ. ಗಮನಿಸಬೇಕಾದ ಅಂಶವೆಂದರೆ ಚಿನ್ನದ ಬೆಲೆಯು ದಾಖಲೆಯ ಗರಿಷ್ಠ ಮಟ್ಟವನ್ನು ಸಮೀಪಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More