Home> Business
Advertisement

ಕೇವಲ 210 ರೂ. ಠೇವಣಿ ಮಾಡಿದರೆ ಪ್ರತಿ ತಿಂಗಳು ಸಿಗುವುದು 5,000 ರೂ. ಪಿಂಚಣಿ!

 ಇಂದು ಹಲವಾರು ರೀತಿಯ ನಿವೃತ್ತಿ ಯೋಜನೆಗಳು ಲಭ್ಯವಿದೆ. ಆದರೆ ಇವುಗಳಲ್ಲಿ ಸರ್ಕಾರದ ಎಪಿವೈ ಅಂದರೆ ಅಟಲ್ ಪಿಂಚಣಿ ಯೋಜನೆ ಹೆಚ್ಚು ಜನಪ್ರಿಯವಾಗಿದೆ.

ಕೇವಲ 210 ರೂ. ಠೇವಣಿ ಮಾಡಿದರೆ  ಪ್ರತಿ ತಿಂಗಳು ಸಿಗುವುದು 5,000 ರೂ. ಪಿಂಚಣಿ!

ಬೆಂಗಳೂರು : ತಾವು ಮಾಡುವ ಸಂಪಾದನೆಯಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆ. ಸರಿಯಾದ ಸಮಯದಲ್ಲಿ ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವೃದ್ಧಾಪ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿಲ್ಲ. ಇಂದು ಹಲವಾರು ರೀತಿಯ ನಿವೃತ್ತಿ ಯೋಜನೆಗಳು ಲಭ್ಯವಿದೆ. ಆದರೆ ಇವುಗಳಲ್ಲಿ ಸರ್ಕಾರದ ಎಪಿವೈ ಅಂದರೆ ಅಟಲ್ ಪಿಂಚಣಿ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಈ ಯೋಜನೆಯು 60 ವಯಸ್ಸಿನ ನಂತರ ಐಷಾರಾಮಿ ಬದುಕು ನಡೆಸಲು ಈ ಯೋಜನೆ ಸೂಕ್ತ ಅವಕಾಶ ಕಲ್ಪಿಸಿಕೊಡುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಮಾಡಿದರೆ, ಖಾತರಿಯ ಪಿಂಚಣಿ ಸಿಗುತ್ತದೆ.

5 ಕೋಟಿಗೂ ಹೆಚ್ಚು ಜನರಿಂದ ಹೂಡಿಕೆ :  

ಜನಪ್ರಿಯ ಅಟಲ್ ಪಿಂಚಣಿ ಯೋಜನೆ (APY) ಅನ್ನು 2015-16 ರಲ್ಲಿ ಪಿಂಚಣಿ ಯೋಜನೆಯಾಗಿ ಪ್ರಾರಂಭಿಸಲಾಯಿತು. ವೇತನದಾರರಿಗೆ ನಿವೃತ್ತಿಯ ನಂತರ ನಿಯಮಿತ ಆದಾಯವನ್ನು ಒದಗಿಸುವ ಉದ್ದೇಶದಿಂದ  ಈ ಯೋಜನೆಯನ್ನು ಪ್ರಾರಂಭಿಸಲಾಯಿತು.    ಸರ್ಕಾರಿ ಪಿಂಚಣಿ ಪಡೆಯಲು ಸಾಧ್ಯವಾಗದವರು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಯಮಿತ ಆದಾಯವನ್ನು ಖಚಿತಪಡಿಸಿಕೊಳ್ಳಬಹುದು.  ಹೆಚ್ಚು ಹೆಚ್ಚು ಜಾರು ಇದರಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದುವರೆಗೆ 5 ಕೋಟಿಗೂ ಹೆಚ್ಚು ಮಂದಿ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. 

ಇದನ್ನೂ ಓದಿ : ಇನ್ನು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎಂದು ಬ್ಯಾಂಕ್ ವಿಧಿಸುವಂತಿಲ್ಲ ಈ ಶುಲ್ಕ

ನಿವೃತ್ತಿಯ ನಂತರ ಒತ್ತಡವಿಲ್ಲದ ಬದುಕು : 
ವೃದ್ಧಾಪ್ಯದಲ್ಲಿ ಪಿಂಚಣಿ ದೊಡ್ಡ ಸಹಾಯವಾಗಿದೆ. ಇದಕ್ಕಾಗಿ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 1000 ರಿಂದ 5000 ರೂ.ವರೆಗೆ ಮಾಸಿಕ ಪಿಂಚಣಿ ಪಡೆಯಬಹುದು. ಇದಕ್ಕಾಗಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಇದರಲ್ಲಿ ಠೇವಣಿ ಮಾಡಬಹುದು. 18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.  ಪ್ರತಿ ತಿಂಗಳು 5,000 ರೂಪಾಯಿಗಳ ಪಿಂಚಣಿ ಪಡೆಯಲು, APY ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ವಯಸ್ಸಿನ ಮಿತಿ 18 ರಿಂದ 40 ವರ್ಷ : 
ಈ ಯೋಜನೆಯಡಿ ಖಾತೆಯನ್ನು ತೆರೆಯಬೇಕಾದರೆ ಭಾರತದ ಪ್ರಜೆಯಾಗಿರಬೇಕು. ಅರ್ಜಿದಾರರ ವಯಸ್ಸು 18-40 ರ ನಡುವೆ ಇರಬೇಕು. ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದಲ್ಲದೆ, ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಈಗಾಗಲೇ ಅಟಲ್ ಪಿಂಚಣಿಯ ಫಲಾನುಭವಿಯಾಗಿರಬಾರದು. ಇದರಲ್ಲಿ, ಕನಿಷ್ಠ ಕೊಡುಗೆ ಅವಧಿಯನ್ನು 20 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ : Family Pension Rules: ಬದಲಾಗಿದೆ ಪಿಂಚಣಿ ನಿಯಮ ! ಮಹಿಳೆಯರೇ ಈಗ ಇವರಾಗಬೇಕು ನಿಮ್ಮ ನಾಮಿನಿ !

ಸರ್ಕಾರ ಮಾಡಿದ ಬದಲಾವಣೆಗಳು : 
ಸರ್ಕಾರ ಕಳೆದ ತಿಂಗಳು ಯೋಜನೆಯ ನಿಯಮಗಳನ್ನು ಬದಲಾಯಿಸಿದೆ. ಸರ್ಕಾರದ ಹೊಸ ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿದಾರರು  ಈ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ. ಬದಲಾವಣೆಯನ್ನು ಅಕ್ಟೋಬರ್ 1, 2022 ರಿಂದ ಜಾರಿಗೆ ತರಲಾಗಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆದಾರರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More