Home> Business
Advertisement

ನಾಳೆಯೊಳಗೆ Fastag ಹಾಕಿಸಲೇ ಬೇಕು, ಇಲ್ಲಾಂದ್ರೆ ಬೀಳುತ್ತೆ ಡಬಲ್ ಟೋಲ್ ಟ್ಯಾಕ್ಸ್

ವಾಹನಗಳಲ್ಲಿ ಫಾಸ್ಟ್ಯಾಗ್  ಅಳವಡಿಸಲು ನಾಳೆಯೇ ಕೊನೆಯ ದಿನ.   ಅಂದರೆ ನಾಳೆಯೊಳಗೆ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಲ್ಲ ಎಂದಾದರೆ ಟೋಲ್ ಪ್ಲಾಜಾ ದಾಟುವುದು ಸಾಧ್ಯವಾಗುವುದಿಲ್ಲ.

ನಾಳೆಯೊಳಗೆ Fastag ಹಾಕಿಸಲೇ ಬೇಕು, ಇಲ್ಲಾಂದ್ರೆ ಬೀಳುತ್ತೆ ಡಬಲ್ ಟೋಲ್ ಟ್ಯಾಕ್ಸ್

ದೆಹಲಿ: ನಾಳೆಯಿಂದ ದೇಶಾದ್ಯಂತ ಫಾಸ್ಟ್ಯಾಗ್ (Fastag) ಅಳವಡಿಕೆ ಕಡ್ಡಾಯ. ನಿಮ್ಮ ವಾಹನದಲ್ಲಿ ಇನ್ನೂ ಫಾಸ್ಟ್ಯಾಗ್ ಹಾಕಿಸಿಲ್ವಾ? ವಾಹನಗಳಲ್ಲಿ ಫಾಸ್ಟ್ಯಾಗ್  ಅಳವಡಿಸಲು ನಾಳೆಯೇ ಕೊನೆಯ ದಿನ.   ಅಂದರೆ ನಾಳೆಯೊಳಗೆ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಲ್ಲ ಎಂದಾದರೆ ಟೋಲ್ ಪ್ಲಾಜಾ ದಾಟುವುದು ಸಾಧ್ಯವಾಗುವುದಿಲ್ಲ. 

ಈಗ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲ :

ಫಾಸ್ಟ್‌ಟ್ಯಾಗ್ (Fastag)ಖಾತೆಯಲ್ಲಿ ಕನಿಷ್ಟ ಬಾಲೆನ್ಸ್ (Minimum Balance) ಉಳಿಸಿಕೊಳ್ಳುವುದು ಅನಿವಾರ್ಯವಲ್ಲ ಎಂದು, ಎನ್‌ಎಚ್‌ಎಐ (NHAI) ಹೇಳಿದೆ. ಫಾಸ್ಟಾಗ್‌ನ ವ್ಯಾಪ್ತಿಯನ್ನು ತ್ವರಿತಗತಿಯಲ್ಲಿ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಎಚ್‌ಎಐ ಹೇಳಿದೆ. ಫಾಸ್ಟಾಗ್ ನೀಡುವ ಬ್ಯಾಂಕುಗಳು (Bank) ಭದ್ರತಾ ಠೇವಣಿ ಹೊರತುಪಡಿಸಿ ಯಾವುದೇ ಕನಿಷ್ಠ ಮೊತ್ತವನ್ನು  ಉಳಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)  ಹೇಳಿದೆ.  ಈ ಹಿಂದೆ  FASTag ನಲ್ಲಿನ ಭದ್ರತಾ ಠೇವಣಿಯ ಜೊತೆಗೆ, ಕನಿಷ್ಠ ಮೊತ್ತವನ್ನು ಬಾಕಿ ಉಳಿಸಿಕೊಳ್ಳುವ ಷರತ್ತು ಕೂಡ ವಿಧಿಸಲಾಗಿತ್ತು. 

ಇದನ್ನೂ ಓದಿ : Motor Insurance ಬಗ್ಗೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ

ಫಾಸ್ಟ್‌ಟ್ಯಾಗ್ ಅನ್ನು ಪಿಎನ್‌ಬಿಯಿಂದಲೂ ಪಡೆಯಬಹುದು:
ಫಾಸ್ಟ್ಯಾಗ್ ತೆಗೆದುಕೊಳ್ಳಲು ಹಲವು ಮಾರ್ಗಗಳಿವೆ. ಈಗ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ (PNB) ಫಾಸ್ಟ್ಯಾಗ್ ತೆಗೆದುಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್ ಪ್ರತ್ಯೇಕ ಸಹಾಯವಾಣಿ (Helpline) ಸಂಖ್ಯೆಯನ್ನು ನೀಡಿದೆ.  ಫಾಸ್ಟ್ಯಾಗ್ ಪಡೆಯಲು ಇರುವ ಹೊಸ ಸಹಾಯವಾಣಿ ಸಂಖ್ಯೆ- 18004196610.  

ಆನ್ ಲೈನ್ ನಲ್ಲಿಯೂ (Online) ಫಾಸ್ಟ್ಯಾಗ್ ಪಡೆಯಬಹುದಾಗಿದೆ. ಇದಕ್ಕಾಗಿ, ಪಿಎನ್‌ಬಿ ವೆಬ್‌ಸೈಟ್‌ಗೆ (website) ಹೋಗಿ ಫಾಸ್ಟಾಗ್‌ಗೆ ಸಂಬಂಧಿಸಿದ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಹಣ ಪಾವತಿ ಮಾಡಿದ ನಂತರ ಬ್ಯಾಂಕ್ ಅದನ್ನು ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ. ಈ ವೇಳೆ KYC ಗಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಂತಹ ಕೆಲವು ದಾಖಲೆಗಳನ್ನು ಒದಗಿಸಬೇಕು. ಕಾರು, ಜೀಪ್, ವ್ಯಾನ್ ಮತ್ತು ಟಾಟಾ ಏಸ್‌ಗೆ 400 ರೂ. ಪಾವತಿಸಬೇಕು. 

ಇದನ್ನೂ ಓದಿ :  Indian Railway: ರೈಲು ಏಪ್ರಿಲ್ ಒಂದರಿಂದ ಎಲ್ಲಾ ರೈಲುಗಳ ಸಂಚಾರ ಆರಂಭ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More