Home> Business
Advertisement

Changes From November 1st: LPG ಬೆಲೆಗಳಿಂದ ರೈಲ್ವೆ ವೇಳಾಪಟ್ಟಿಯವರೆಗೆ ಇಂದಿನಿಂದ ಬದಲಾಗಲಿವೆ ಈ ನಿಯಮಗಳು

Changes From November 1st: ಇಂದಿನಿಂದ ಅಂದರೆ ನವೆಂಬರ್ 1ರಿಂದ ಯಾವ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ..

Changes From November 1st: LPG ಬೆಲೆಗಳಿಂದ ರೈಲ್ವೆ ವೇಳಾಪಟ್ಟಿಯವರೆಗೆ ಇಂದಿನಿಂದ ಬದಲಾಗಲಿವೆ ಈ ನಿಯಮಗಳು

Changes From November 1st:  ಎಲ್‌ಪಿಜಿ ಸಿಲಿಂಡರ್ ವಿತರಣೆಯಿಂದ ಹಿಡಿದು ಹೊಸ ರೈಲ್ವೇ ವೇಳಾಪಟ್ಟಿಯವರೆಗಿನ ಹಲವಾರು ನಿಯಮಗಳು ನವೆಂಬರ್ 1, 2021 ರಿಂದ ಬದಲಾಗುತ್ತಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು ಎಲ್ಲವನ್ನೂ ವಿವರವಾಗಿ ತಿಳಿದಿರುವುದು ಬಹಳ ಮುಖ್ಯ. 

ಇಂದಿನಿಂದ ಅಂದರೆ ನವೆಂಬರ್ 1ರಿಂದ ಯಾವ ನಿಯಮಗಳು ಬದಲಾಗಲಿವೆ ಎಂದು ತಿಳಿಯೋಣ..

LPG ವಿತರಣಾ ವ್ಯವಸ್ಥೆ (LPG delivery system): 
ಎಲ್ಲಾ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ಗ್ರಾಹಕರಿಗೆ ನವೆಂಬರ್ 1, 2021 ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ತಿಳಿದಿರಬೇಕು. ಇಂದಿನಿಂದ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ ಅನ್ನು ಮನೆಗೆ ತಲುಪಿಸುತ್ತಿರುವವರು ಹೊಸ ನಿಯಮವನ್ನು ಅನುಸರಿಸಬೇಕು.  ಗ್ರಾಹಕರು ತಮ್ಮ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲು ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಅನ್ನು ಒದಗಿಸಬೇಕಾಗುತ್ತದೆ. ಹೊಸ ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಭಾಗವಾಗಿ ಬದಲಾವಣೆ ಬರುತ್ತದೆ.

ಇದನ್ನೂ ಓದಿ- Aadhaar Card Update: ನಿಮ್ಮ ಆಧಾರ್‌ಗೆ eSign ಅಥವಾ ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಠೇವಣಿ ಮತ್ತು ಹಿಂಪಡೆಯುವಿಕೆಗಳ ಮೇಲಿನ ಶುಲ್ಕಗಳನ್ನು ಬ್ಯಾಂಕುಗಳು ಪರಿಷ್ಕರಿಸಲಿವೆ (Banks to revise charges on deposits and withdrawals): 
ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಹೊಸ ನಿಗದಿತ ಮಿತಿಯನ್ನು ಮೀರಿ ಠೇವಣಿ ಮತ್ತು ಹಣವನ್ನು ಹಿಂಪಡೆಯಲು ಅದರ ಶುಲ್ಕಗಳನ್ನು ಪರಿಷ್ಕರಿಸುತ್ತದೆ. ಹೊಸ ಶುಲ್ಕಗಳು ಉಳಿತಾಯ ಮತ್ತು ಸಂಬಳದ ಖಾತೆದಾರರಿಗೆ ಅನ್ವಯಿಸುತ್ತವೆ. ಬ್ಯಾಂಕ್ ಆಫ್ ಇಂಡಿಯಾ, ಪಿಎನ್‌ಬಿ, ಆಕ್ಸಿಸ್ ಮತ್ತು ಸೆಂಟ್ರಲ್ ಬ್ಯಾಂಕ್ ಕೂಡ ಈ ವಿಷಯದಲ್ಲಿ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಎಲ್‌ಪಿಜಿ ಬೆಲೆಗಳು (LPG prices): 
ಜಾಗತಿಕ ಮಾರುಕಟ್ಟೆಗಳಲ್ಲಿನ ಕಚ್ಚಾ ದರಗಳ ಆಧಾರದ ಮೇಲೆ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು LPG ಬೆಲೆಗಳನ್ನು (LPG prices) ಪರಿಷ್ಕರಿಸುತ್ತವೆ. ಹೀಗಾಗಿ, ಈ ತಿಂಗಳಿನಿಂದ ಗ್ರಾಹಕರು ತಮ್ಮ ಅಡುಗೆ ಅನಿಲ ಸಿಲಿಂಡರ್‌ಗಳಲ್ಲಿ ಮತ್ತೊಂದು ಏರಿಕೆಯನ್ನು ನಿರೀಕ್ಷಿಸಬಹುದು. ವಾಸ್ತವವಾಗಿ, ಅಡುಗೆ ಅನಿಲ ಸಿಲಿಂಡರ್ ಬೆಲೆಗಳು 100 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 

ಇದನ್ನೂ ಓದಿ- Strom R3: ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರನ್ನು ಕೇವಲ 10 ಸಾವಿರಕ್ಕೆ ಬುಕ್ ಮಾಡಬಹುದು

ರೈಲ್ವೆ ವೇಳಾಪಟ್ಟಿ (Railway Time Table): 
ಭಾರತೀಯ ರೈಲ್ವೆ (Indian Railways) ದೇಶಾದ್ಯಂತ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಿದೆ. ಹೊಸ ಸಮಯಗಳು ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಬದಲಾವಣೆಯಲ್ಲಿ 13 ಸಾವಿರ ಪ್ಯಾಸೆಂಜರ್ ರೈಲುಗಳು ಮತ್ತು 7 ಸಾವಿರ ಗೂಡ್ಸ್ ರೈಲುಗಳನ್ನು ಸೇರಿಸಲಾಗಿದೆ. ಇದಲ್ಲದೇ ದೇಶದಲ್ಲಿ ಸಂಚರಿಸುವ ಸುಮಾರು 30 ರಾಜಧಾನಿ ರೈಲುಗಳ ಸಮಯವೂ ಬದಲಾಗಲಿದೆ.

ಕೆಲವು ಬಳಕೆದಾರರಿಗೆ WhatsApp ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ:
ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಕೆಲವು iPhone ಮತ್ತು Android ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಸೋಮವಾರದಿಂದ ಪ್ರಾರಂಭವಾಗುವ Android 4.0.3 Ice Cream Sandwich, iOS 9 ಮತ್ತು KaiOS 2.5.0 ಅನ್ನು WhatsApp ಬೆಂಬಲಿಸುವುದಿಲ್ಲ. ನಿಮ್ಮ ಫೋನ್ ಈ ಯಾವುದೇ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗಿದ್ದರೆ,  ನೀವು WhatsApp ಬಳಸಲು ಸಾಧ್ಯವಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More