Home> Business
Advertisement

ಉಚಿತ ಗ್ಯಾಸ್ ಸಿಲಿಂಡರ್‌ ಪಡೆಯಲು ಇಲ್ಲಿದೆ ಸುಲಭ ವಿಧಾನ

LPG Cylinder Free On Paytm: ಪೇಟಿಎಂನಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಉಚಿತವಾಗಿ ಖರೀದಿಸುವ ಅವಕಾಶವಿದೆ. ಪೇಟಿಎಂ ತನ್ನ ನೂತನ ಬಳಕೆದಾರರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿದ್ದು ಇದರಿಂದ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ಪಡೆಯುವ ಅವಕಾಶವಿದೆ.

ಉಚಿತ ಗ್ಯಾಸ್ ಸಿಲಿಂಡರ್‌ ಪಡೆಯಲು ಇಲ್ಲಿದೆ ಸುಲಭ ವಿಧಾನ

ಫ್ರೀ ಗ್ಯಾಸ್ ಸಿಲಿಂಡರ್‌:  ಪೇಟಿಎಂನಲ್ಲಿ  ಬಳಕೆದಾರರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ಪಡೆಯುವ ಅವಕಾಶವಿದೆ. ಪೇಟಿಎಂ ತನ್ನ ನೂತನ ಬಳಕೆದಾರರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದ್ದು, ಎಲ್‌ಪಿಜಿ ಸಿಲಿಂಡರ್  ಅನ್ನು ಉಚಿತವಾಗಿ ಖರೀದಿಸಬಹುದಾಗಿದೆ. ನೀವು ಪೇಟಿಎಂನ ಹೊಸ ಗ್ರಾಹಕರಾಗಿದ್ದರೆ, ಡಿಜಿಟಲ್ ಪಾವತಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡುವಾಗ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. 

ವಾಸ್ತವವಾಗಿ, ದೇಶಾದ್ಯಂತ ಲಕ್ಷಾಂತರ ಬಳಕೆದಾರರು ತಮ್ಮ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಪೇಟಿಎಂ ಅನ್ನು ಬಳಸುತ್ತಾರೆ. ಪ್ರಸ್ತುತ, ಭಾರತ್ ಗ್ಯಾಸ್ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್‌ಗಾಗಿ ಬುಕ್ಕಿಂಗ್ ಪೇಟಿಎಂ ಆಪ್‌ನಲ್ಲಿ ಮಾತ್ರ ಲಭ್ಯವಿದೆ. ಹೀಗಿರುವಾಗ, ಪೇಟಿಎಂನಲ್ಲಿ ಬಳಕೆದಾರರು ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ...

ಇದನ್ನೂ ಓದಿ- ಒಮ್ಮೆ ಫುಲ್ ಚಾರ್ಜ್ ಮಾಡಿದರೆ 300 ಕಿಮೀ ವರೆಗೆ ಮೈಲೇಜ್ ನೀಡುತ್ತಂತೆ ಈ ಹೊಸ ಸ್ಕೂಟರ್

ಉಚಿತ ಸಿಲಿಂಡರ್‌ಗಾಗಿ ಈ ಕೆಲಸವನ್ನು ಮಾಡಿ:
ಎಲ್ಲಾ ಪೇಟಿಎಂ ಬಳಕೆದಾರರು, ಅಂದರೆ ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಪೇಟಿಎಂ ಅನ್ನು ಬಳಸಲು ಯೋಚಿಸುತ್ತಿರುವವರು ತಮ್ಮ ಸಿಲಿಂಡರ್ ಅನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ಪಡೆಯಬಹುದು. ಆದರೆ, ಅದಕ್ಕಾಗಿ ಒಂದು ಸಣ್ಣ ಕೆಲಸವನ್ನು ಮಾಡಬೇಕು. ಪೇಟಿಎಂ ಅಪ್ಲಿಕೇಶನ್‌ನಲ್ಲಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು ಅವರು ಕೂಪನ್ ಕೋಡ್ 'FREEGAS' ಅನ್ನು ಬಳಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಹೊಸ ಪೇಟಿಎಂ ಬಳಕೆದಾರರು ಇತ್ತೀಚಿನ ಡೀಲ್‌ಗಳ ಜೊತೆಗೆ ತಮ್ಮ ಮೊದಲ ಬುಕಿಂಗ್‌ನಲ್ಲಿ ಫ್ಲಾಟ್ ರೂ.30 ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು. ಅದಕ್ಕಾಗಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ಪಾವತಿ ಮಾಡುವಾಗ ಅವರು "FIRSTCYLINDER" ಪ್ರೋಮೋ ಕೋಡ್ ಅನ್ನು ಬಳಸಬೇಕಾಗುತ್ತದೆ. ಈ ಮರುಪಾವತಿ ಕೊಡುಗೆಯು ಎಲ್ಲಾ ಮೂರು ಪ್ರಮುಖ ಎಲ್‌ಪಿಜಿ  ಸಿಲಿಂಡರ್ ಕಂಪನಿಗಳ ಮೇಲೆ ಮಾನ್ಯವಾಗಿರುತ್ತದೆ - ಇಂಡೇನ್,  ಎಚ್ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್. ಇಷ್ಟು ಮಾತ್ರವಲ್ಲದೆ, ಪೇಟಿಎಂ ಪೋಸ್ಟ್ ಪೇಡ್  ಎಂದು ಜನಪ್ರಿಯವಾಗಿರುವ "ಪೇಟಿಎಂ ನೌ ಪೇ ಲೇಟರ್" ಸೇವೆಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಮುಂದಿನ ತಿಂಗಳು ಸಿಲಿಂಡರ್ ಬುಕಿಂಗ್‌ಗೆ ಪಾವತಿಸಲು ಸಾಧ್ಯವಾಗುತ್ತದೆ.

ಇತ್ತೀಚೆಗೆ, ಕಂಪನಿಯು ಎಲ್‌ಪಿಜಿ   ಸಿಲಿಂಡರ್ ಬುಕಿಂಗ್ ಅನುಭವವನ್ನು ಸುಧಾರಿಸಿದೆ, ಇದು ಗ್ರಾಹಕರು ತಮ್ಮ ಗ್ಯಾಸ್ ಸಿಲಿಂಡರ್ ವಿವರಗಳನ್ನು ಟ್ರ್ಯಾಕ್ ಮಾಡಲು ಮತ್ತು ರೀಫಿಲ್ ಗಾಗಿ ಸ್ವಯಂಚಾಲಿತ ನೋಟಿಫಿಕೇಶನ್  ಪಡೆಯಲು ಅನುಮತಿಸುತ್ತದೆ. ಪೇಟಿಎಂನ ತ್ವರಿತ ಬುಕಿಂಗ್ ಪ್ರಕ್ರಿಯೆಯಿಂದಾಗಿ ಎಲ್‌ಪಿಜಿ  ಸಿಲಿಂಡರ್ ಬುಕಿಂಗ್ ಸುಲಭವಾಗಿದೆ. ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಗ್ಯಾಸ್ ಸಿಲಿಂಡರ್ ಅನ್ನು ಸುಲಭವಾಗಿ ಬುಕ್ ಮಾಡಬಹುದು.

ಇದನ್ನೂ ಓದಿ- ಖರೀದಿ ಮಾಡಿದ್ದು 90 ಎಲೆಕ್ಟ್ರಿಕ್ ಬಸ್- ಆದ್ರೆ ರಸ್ತೆಗಿಳಿದಿರೋದು ಕೇವಲ 28 ಬಸ್

ಪೇಟಿಎಂನಲ್ಲಿ ಎಲ್‌ಪಿಜಿ   ಸಿಲಿಂಡರ್ ಬುಕ್ ಮಾಡಲು ಹಂತ-ಹಂತದ ಪ್ರಕ್ರಿಯೆ:
ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ ನಿಮ್ಮ ಪೇಟಿಎಂ ಅಪ್ಲಿಕೇಶನ್ ತೆರೆಯಿರಿ.
ಹಂತ 2: ನಂತರ ರೀಚಾರ್ಜ್ ಮತ್ತು ಬಿಲ್ ಪಾವತಿ ವಿಭಾಗದ ಅಡಿಯಲ್ಲಿ 'ಬುಕ್ ಗ್ಯಾಸ್ ಸಿಲಿಂಡರ್' ಟ್ಯಾಬ್‌ಗೆ ಹೋಗಿ.
ಹಂತ 3: ಇದು ನಿಮಗೆ ಗ್ಯಾಸ್ ಪೂರೈಕೆದಾರರನ್ನು ಆಯ್ಕೆ ಮಾಡಿ.
ಹಂತ 4: ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಎಲ್‌ಪಿಜಿ  ಐಡಿ ಅಥವಾ ಗ್ರಾಹಕ ಸಂಖ್ಯೆಯನ್ನು ನಮೂದಿಸಿ.
ಹಂತ 5: ನಂತರ, ಇದು ಪಾವತಿಯ ಸಮಯ. ಪೇಟಿಎಂ ವಾಲೆಟ್, ಪೇಟಿಎಂ ಯುಪಿಐ, ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್‌ನಂತಹ ನಿಮ್ಮ ಆದ್ಯತೆಯ ಮೋಡ್‌ಗಳನ್ನು ಬಳಸಿಕೊಂಡು ಪಾವತಿಸಿ. ಅಲ್ಲದೆ, ಕೂಪನ್ ಕೋಡ್ ವಿಭಾಗದಲ್ಲಿ ಪ್ರೋಮೋ ಕೋಡ್ 'FREEGAS' ಅನ್ನು ಸೇರಿಸಲು ಮರೆಯಬೇಡಿ.
ಹಂತ 6: ಪಾವತಿಯನ್ನು ಪೂರ್ಣಗೊಳಿಸಿ. ಬಳಿಕ ಹತ್ತಿರದ ಗ್ಯಾಸ್ ಏಜೆನ್ಸಿಯಿಂದ ನೋಂದಾಯಿತ ವಿಳಾಸಕ್ಕೆ  ಸಿಲಿಂಡರ್ ಅನ್ನುತಲುಪಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More