Home> Business
Advertisement

ನಿವೃತ್ತಿ ನಂತರ ಪ್ರತಿ ತಿಂಗಳು ಸಿಗಲಿದೆ 2 ಲಕ್ಷ ರೂಪಾಯಿ ಪಿಂಚಣಿ..!

NPS pension Calculator: ಕೆಲಸ ಪ್ರಾರಂಭಿಸುವ ದಿನದಂದೇ ನಿವೃತ್ತಿಯ ನಂತರದ ಜೀವನಕ್ಕಾಗಿ ಎಷ್ಟು ಹಣವನ್ನು ಉಳಿಸಬೇಕು ಎನ್ನುವುದನ್ನು ಕೂಡಾ ಲೆಕ್ಕ ಹಾಕಿಕೊಳ್ಳಬೇಕು. ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ, ನಿವೃತ್ತಿಯ ತನಕ ಅಷ್ಟು ಹೆಚ್ಚಿನ ಮೊತ್ತ ನಮ್ಮ ಕೈ ಸೇರುತ್ತದೆ. 

ನಿವೃತ್ತಿ ನಂತರ ಪ್ರತಿ ತಿಂಗಳು ಸಿಗಲಿದೆ 2 ಲಕ್ಷ ರೂಪಾಯಿ ಪಿಂಚಣಿ..!

ಬೆಂಗಳೂರು : NPS pension Calculator : ವೃದ್ಧಾಪ್ಯದಲ್ಲಿ ಜೀವನ ಉತ್ತಮವಾಗಿ ಸಾಗಬೇಕು ಎಂಬ ಬಯಕೆ ಎಲ್ಲರದ್ದೂ ಆಗಿರುತ್ತದೆ. ಹೌದು, ವೃದ್ಧಾಪ್ಯ ಸುರಕ್ಷಿತವಾಗಿರಬೇಕು. ವೃದ್ಧಾಪ್ಯದಲ್ಲಿ ಯಾವುದೇ ರೀತಿಯಲ್ಲಿಯೂ ಆರ್ಥಿಕ ಸಮಸ್ಯೆ ಕಾಡಬಾರದು ಎಂದಾದರೆ ಮುಂಚಿತವಾಗಿಯೇ ಎಚ್ಚರ ವಹಿಸಿಕೊಳ್ಳಬೇಕು. ನೀವು ಕೆಲಸ ಪ್ರಾರಂಭಿಸುವ ದಿನದಂದೇ ನಿವೃತ್ತಿಯ ನಂತರದ ಜೀವನಕ್ಕಾಗಿ ಎಷ್ಟು ಹಣವನ್ನು ಉಳಿಸಬೇಕು ಎನ್ನುವುದನ್ನು ಕೂಡಾ ಲೆಕ್ಕ ಹಾಕಿಕೊಳ್ಳಬೇಕು. ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ, ನಿವೃತ್ತಿಯ ತನಕ ಅಷ್ಟು ಹೆಚ್ಚಿನ ಮೊತ್ತ ನಮ್ಮ ಕೈ ಸೇರುತ್ತದೆ. ಇಪಿಎಫ್, ಎನ್‌ಪಿಎಸ್, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು, ರಿಯಲ್ ಎಸ್ಟೇಟ್ ಮುಂತಾದ ನಿವೃತ್ತಿ ನಿಧಿಗಳನ್ನು ಸಂಗ್ರಹಿಸಲು ಹಲವು ಹೂಡಿಕೆ ಆಯ್ಕೆಗಳು ಲಭ್ಯವಿವೆ.

ಸರ್ಕಾರ ನಡೆಸುತ್ತಿದೆ ಅನೇಕ ಯೋಜನೆ : 

ನಿವೃತ್ತಿ ಜೀವನವನ್ನು ಸುರಕ್ಷಿತವಾಗಿರಿಸಲು, ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಿವೃತ್ತರಾದಾಗ, ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ದೊಡ್ಡ ಮೊತ್ತಡ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Vegetable Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆ ಹೀಗಿದೆ

NPS ಯೋಜನೆ ಎಂದರೇನು ? :
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇದೊಂದು ಸರ್ಕಾರಿ ಪಿಂಚಣಿ ಯೋಜನೆಯಾಗಿದ್ದು, ಈಕ್ವಿಟಿ ಮತ್ತು ಸಾಲ ಸಾಧನಗಳನ್ನು ಒಳಗೊಂಡಿರುತ್ತದೆ. NPS ಸರ್ಕಾರದಿಂದ ಗ್ಯಾರಂಟಿ ಪಡೆಯುವ ಯೋಜನೆಯಾಗಿದೆ. ನಿವೃತ್ತಿಯ ನಂತರ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯಲು NPS ಯೋಜನೆಯಲ್ಲಿ ಹೂಡಿಕೆ ಮಾಡಬೇಕು. 

ಆದಾಯ ತೆರಿಗೆ ರಿಯಾಯಿತಿ :
NPS ಪಿಂಚಣಿ ಯೋಜನೆಯು ಸಾರ್ವಜನಿಕ ಭವಿಷ್ಯ ನಿಧಿ, ಉದ್ಯೋಗಿಗಳ ಭವಿಷ್ಯ ನಿಧಿ , ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳಂತಹ ಸರ್ಕಾರಿ ಯೋಜನೆಯಾಗಿದೆ. ಇದರಲ್ಲಿ, ಯಾವುದೇ ಹೂಡಿಕೆದಾರರು ಮೆಚ್ಯೂರಿಟಿ ಮೊತ್ತವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಮಾಸಿಕ ಪಿಂಚಣಿ ಮೊತ್ತವನ್ನು ಹೆಚ್ಚಿಸಬಹುದು. NPS ಮೂಲಕ, ವಾರ್ಷಿಕವಾಗಿ 2 ಲಕ್ಷದವರೆಗೆ ತೆರಿಗೆ ಉಳಿಸಬಹುದು. ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ, ಗರಿಷ್ಠ 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು. NPS ನಲ್ಲಿ ಹೂಡಿಕೆ ಮಾಡಿದರೆ,  50,000 ರೂ.ವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Gold-Sliver Price: ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ: ಇಲ್ಲಿದೆ ಹಳದಿಲೋಹದ ಬೆಲೆ ವಿವರ

 2 ಲಕ್ಷ ರೂ. ವರೆಗೆ ಮಾಸಿಕ ಪಿಂಚಣಿ :
ಎನ್‌ಪಿಸಿಯಲ್ಲಿ 40 ವರ್ಷಗಳವರೆಗೆ ಪ್ರತಿ ತಿಂಗಳು 5000 ಠೇವಣಿ ಮಾಡಿದರೆ, 1.91 ಕೋಟಿ ರೂ ಪಡೆಯಬಹುದು. ನಂತರ ಮೆಚ್ಯೂರಿಟಿ ಮೊತ್ತದ ಹೂಡಿಕೆಯ ಮೇಲೆ 2 ಲಕ್ಷ ಮಾಸಿಕ ಪಿಂಚಣಿ ಸಿಗುತ್ತದೆ. ಇದರ ಅಡಿಯಲ್ಲಿ, Systematic Withdrawal Plan ಮೂಲಕ 1.43 ಲಕ್ಷ  ರೂ. ಮತ್ತು ಮಾಸಿಕ ಆದಾಯವಾಗಿ  63,768  ರೂ. ಯನ್ನು ಪಡೆಯಬಹುದು. 

20 ವರ್ಷಗಳಲ್ಲಿ 63,768 ರೂ ಮಾಸಿಕ ಪಿಂಚಣಿ : 
20 ವರ್ಷಗಳಿಂದ ನಿವೃತ್ತಿಯವರೆಗೆ ಪ್ರತಿ ತಿಂಗಳು 5000 ರೂ ಹೂಡಿಕೆ ಮಾಡಿದರೆ, 1.91 ಕೋಟಿವರೆಗೆ ಮೆಚ್ಯುರಿಟಿ ಮೊತ್ತ ಸಿಗುತ್ತದೆ. ಇದರ ನಂತರ,  6% ಆದಾಯದೊಂದಿಗೆ  ತಿಂಗಳಿಗೆ 63,768 ರೂಪಾಯಿಗಳ ಮಾಸಿಕ ಪಿಂಚಣಿ ಸಿಗುತ್ತದೆ. 

ಇದನ್ನೂ ಓದಿ : Free Ration: ದೇಶದ ಬಡ ನಾಗರಿಕರಿಗೆ ಮೋದಿ ಸರ್ಕಾರ ನೀಡಿದ ಭರ್ಜರಿ ಉಡುಗೊರೆ ಇದು, ಈ ತಿಂಗಳವರೆಗೆ ಉಚಿತ ಪಡಿತರ ಪಡೆಯಿರಿ

ಎನ್‌ಪಿಎಸ್‌ನಲ್ಲಿ ಎರಡು ವಿಧ : 
ಎನ್‌ಪಿಎಸ್‌ನಲ್ಲಿ ಎರಡು ವಿಧಗಳಿವೆ. ಎನ್‌ಪಿಎಸ್ ಶ್ರೇಣಿ 1 ಮತ್ತು ಎನ್‌ಪಿಎಸ್ ಶ್ರೇಣಿ-2.  1ರಲ್ಲಿ ಕನಿಷ್ಠ ಹೂಡಿಕೆ 500 ರೂ.ಗಳಾಗಿದ್ದರೆ   ಎರಡನೆಯದ್ದರಲ್ಲಿ 1000 ರೂ.  ಇಲ್ಲಿ ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ. NPSನಲ್ಲಿ ಮೂರು ಹೂಡಿಕೆ ಆಯ್ಕೆಗಳು ಲಭ್ಯವಿವೆ. ಇದರಲ್ಲಿ ಹೂಡಿಕೆದಾರನು ತನ್ನ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ನಿರ್ಧಾರ ಮಾಡಬೇಕಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More