Home> Business
Advertisement

EPFO: PF ಖಾತೆದಾರರಿಗೊಂದು ಸಂತಸದ ಸುದ್ದಿ, ಇಂದೇ ನಿಮ್ಮ ಖಾತೆ ಬ್ಯಾಲೆನ್ಸ್ ಪರಿಶೀಲಿಸಿ

EPFO: ಈ ಕುರಿತು ಟ್ವೀಟ್ ಮಾಡಿರುವ ಭವಿಷ್ಯ ನಿಧಿ ಸಂಘಟನೆ, '2020-21ರ ಹಣಕಾಸು ವರ್ಷಕ್ಕೆ 22.55 ಕೋಟಿ ಖಾತೆಗಳಲ್ಲಿ ಶೇ.8.50 ಬಡ್ಡಿಯನ್ನು ಪಾವತಿಸಲಾಗಿದೆ' ಎಂದು ತಿಳಿಸಿದೆ. ನೀವು ಸಹ ಪಿಎಫ್ ಖಾತೆದಾರರಾಗಿದ್ದರೆ, ಈ ಕೆಳಗೆ ಸೂಚಿಸಿರುವ ಯಾವುದೇ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.

EPFO: PF ಖಾತೆದಾರರಿಗೊಂದು ಸಂತಸದ ಸುದ್ದಿ, ಇಂದೇ ನಿಮ್ಮ ಖಾತೆ ಬ್ಯಾಲೆನ್ಸ್ ಪರಿಶೀಲಿಸಿ

ನವದೆಹಲಿ: EPFO - ಒಂದು ವೇಳೆ ನೀವೂ ಕೂಡ ನೌಕರ ವರ್ಗಕ್ಕೆ ಸೇರಿದ್ದು ಮತ್ತು ಪಿಎಫ್ ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಪಿಎಫ್ ಅನ್ನು ಕಡಿತಗೊಳಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಉದ್ಯೋಗಿಗಳ ಖಾತೆಗೆ ಬಡ್ಡಿ ಹಣವನ್ನು ವರ್ಗಾವಣೆ ಮಾಡಿದೆ. ಇದರಿಂದ 6 ಕೋಟಿಗೂ ಅಧಿಕ ಉದ್ಯೋಗಿಗಳಿಗೆ ಇದರಿಂದ ಲಾಭ ಸಿಗಲಿದೆ.

ಖಾತೆಯಲ್ಲಿ ಬಡ್ಡಿ ಹಣ

2021-22ರ ಹಣಕಾಸು ವರ್ಷಕ್ಕೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 22.55 ಕೋಟಿ PF ಖಾತೆದಾರರ ಖಾತೆಗೆ ಶೇ.8.50ರಷ್ಟು ಬಡ್ಡಿಯನ್ನು ವರ್ಗಾಯಿಸಿದೆ. ಇತ್ತೀಚೆಗಷ್ಟೇ ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಭವಿಷ್ಯ ನಿಧಿ ಸಂಘಟನೆ '2020-21ನೇ ಹಣಕಾಸು ವರ್ಷಕ್ಕೆ 22.55 ಕೋಟಿ ಖಾತೆಗಳಲ್ಲಿ ಶೇ.8.50  ಬಡ್ಡಿಯನ್ನು ಠೇವಣಿ ಮಾಡಲಾಗಿದೆ' ಎಂದು ಹೇಳಿದೆ. ನೀವು ಸಹ ಪಿಎಫ್ ಖಾತೆದಾರರಾಗಿದ್ದರೆ, ಈ ಕೆಳಗೆ ಸೂಚಿಸಲಾಗಿರುವ ಯಾವುದೇ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.

1. ಮಿಸ್ಡ್ ಕಾಲ್‌ನಿಂದ ಬ್ಯಾಲೆನ್ಸ್ ತಿಳಿಯಿರಿ (Check PF Balance)
ನಿಮ್ಮ ಪಿಎಫ್ ಹಣವನ್ನು ಪರಿಶೀಲಿಸಲು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ (Missed call) ನೀಡಬೇಕು. ಇದರ ನಂತರ, ನೀವು ಇಪಿಎಫ್‌ಒ ಸಂದೇಶದ ಮೂಲಕ ಪಿಎಫ್‌ನ ವಿವರಗಳನ್ನು ಪಡೆಯಬಹುದು. ಇಲ್ಲಿಯೂ ನಿಮ್ಮ ಯುಎಎನ್ (UAN) ಪ್ಯಾನ್ (PAN Card) ಮತ್ತು ಆಧಾರ್ ಲಿಂಕ್ ಆಗಿರುವುದು ಅವಶ್ಯಕ.

2. ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ (PF Account Balance)
1. ಆನ್‌ಲೈನ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಲು, EPFO ​​ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. epfindia.gov.in ನಲ್ಲಿ ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ.
2. ಇ-ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿದಾಗ, passbook.epfindia.gov.in ಹೊಸ ಪುಟ ಬರುತ್ತದೆ.
3. ಈಗ ಇಲ್ಲಿ ಬಳಕೆದಾರ ಹೆಸರು (UAN ಸಂಖ್ಯೆ), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಭರ್ತಿ  ಮಾಡಿ 
4 . ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಹೊಸ ಪುಟತೆರೆಯುತ್ತದೆ. ಇಲ್ಲಿ ಸದಸ್ಯರ ID ಅನ್ನು ಆಯ್ಕೆ ಮಾಡಬೇಕಾಗುತ್ತದೆ.
5. ಇ-ಪಾಸ್‌ಬುಕ್‌ನಲ್ಲಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ (EPF Ballance) ಅನ್ನು ಕಾಣಬಹುದು.

ಇದನ್ನೂ ಓದಿ-Income tax savings : ನಿಮಗೆ 10 ಲಕ್ಷ ಸಂಬಳ ಇದ್ರೂ ನೀವು ತೆರಿಗೆ ಪಾವತಿಸಬೇಕಿಲ್ಲ ; ಹೇಗೆ? ಇಲ್ಲಿದೆ

3. ನೀವು UMANG ಆಪ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸಬಹುದು (PF Account)
1. ಇದಕ್ಕಾಗಿ, ನಿಮ್ಮ UMANG ಅಪ್ಲಿಕೇಶನ್ (Unified Mobile Application for New-age Governance)  ತೆರೆಯಿರಿ ಮತ್ತು EPFO ​​ಮೇಲೆ ಕ್ಲಿಕ್ ಮಾಡಿ.
2. ಈಗ ಇನ್ನೊಂದು ಪುಟದಲ್ಲಿ, employee-centric services ಮೇಲೆ ಕ್ಲಿಕ್ ಮಾಡಿ.
3. ಇಲ್ಲಿ ವ್ಯೂ ಪಾಸ್ ಬುಕ್  ಅನ್ನು ಕ್ಲಿಕ್ ಮಾಡಿ. ಇದರೊಂದಿಗೆ, ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ (OTP) ಸಂಖ್ಯೆಯನ್ನು ಭರ್ತಿ ಮಾಡಿ.
4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಇದರ ನಂತರ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಜನವರಿಯ ಸಂಬಳದಲ್ಲಿ ಸಿಗಲಿದೆ ₹4500 ಹೆಚ್ಚುವರಿ : ಹೇಗೆ ಇಲ್ಲಿದೆ ನೋಡಿ

4. SMS ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ
ನಿಮ್ಮ UAN ಸಂಖ್ಯೆಯನ್ನು EPFO ​​ನಲ್ಲಿ ನೋಂದಾಯಿಸಿದ್ದರೆ, ನೀವು ಸಂದೇಶದ ಮೂಲಕ ನಿಮ್ಮ PF ಬ್ಯಾಲೆನ್ಸ್ ಕುರಿತು ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ EPFOHO ಅನ್ನು 7738299899 ಗೆ ಕಳುಹಿಸಬೇಕು. ಇದರ ನಂತರ ನೀವು ಸಂದೇಶದ ಮೂಲಕ ಪಿಎಫ್ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ-Budget 2022 : PPF ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬಜೆಟ್‌ನಲ್ಲಿ ಹಣಕಾಸು ಸಚಿವರಿಂದ ಸಿಗಲಿದೆ ಈ ಬಿಗ್ ನ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More