Home> Business
Advertisement

EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ

EPFO Alert!ನಿಮ್ಮ ಮೊಬೈಲ್ ಸಂಖ್ಯೆಗೂ ಕೂಡ EPFOಗೆ ಸಂಬಂಧಿಸಿದ ಹಲವು ಸಂದೇಶಗಳು ಬರುತ್ತವೆಯೇ? ನೀವು ಆ ಸಂದೇಶಗಳಲ್ಲಿ ಒಂದರೆ ಮೇಲೆ ಕ್ಲಿಕ್ಕಿಸಿದಾಗ ನಿಮ್ಮ EPFO Accountನಲ್ಲಿನ ಹಣ ಖಾಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಖಾತೆಗೆ ಸಂಬಂಧಿಸಿದಂತೆ EPFO ಜಾರಿಗೊಳಿಸಿರುವ ಈ ಸಲಹೆಯನ್ನು ಒಪ್ಪಿಕೊಳ್ಳುವುದು ನಿಮ್ಮ ಪಾಲಿಗೆ ಅನಿವಾರ್ಯವಾಗಿದೆ.

EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ

EPFO Alert! ನೌಕರಿ ಮಾಡುವ ಒಂದು ವಿಶೇಷ ಲಾಭ ಎಂದರೆ, ಇಲ್ಲಿ ನಿಮ್ಮ ಪ್ರತಿ ತಿಂಗಳ ವೇತನದಲ್ಲಿ PF ಹಣ ಕಡಿತಗೊಳ್ಳುತ್ತದೆ. ಇದು ಮುಂದೆ ಹೋಗಿ ನಿಮ್ಮ ವೃದ್ಧ್ಯಾಪ್ಯದಲ್ಲಿ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ. ಈ PF ಹಣ ನಿವೃತ್ತಿಯ ಬಳಿಕ ನಿಮ್ಮ ಸಹಾಯಯಕ್ಕೆ ಬರುತ್ತದೆ ಮತ್ತು ನೀವು ಯಾವುದೇ ಚಿಂತೆ ಇಲ್ಲದೆ ನಿಮ್ಮ ನಿವೃತ್ತಿಯ ಜೀವನವನ್ನು ಪ್ಲಾನಿಂಗ್ ಮಾಡಬಹುದು. ಆದರೆ, ಪ್ರಸ್ತುತ ಎಲ್ಲಾ ಸಂಗತಿಗಳು ಡಿಜಿಟಲ್ ಗೆ ಮಾರ್ಪಡುತ್ತಿವೆ. ಹೀಗಾಗಿ ನಿಮ್ಮ ಆರ್ಥಿಕ ಡಿಜಿಟಲ್ ವ್ಯವಹಾರಗಳ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದೆ.

ಎಚ್ಚರಿಕೆಯ ಸಂದೇಶ ರವಾನಿಸಿದ EPFO

ಹಲವು ಬಾರಿ ಗ್ರಾಹಕರಿಗೆ ಕಾಲ್, SMS, ಅಥವಾ ಇ-ಮೇಲ್ ಗಳ ಮೂಲಕ ಸಂದೇಶಗಳು ಬರುತ್ತಿದ್ದು ಮತ್ತು ಈ ಸಂದೇಶಗಳು EPFO ವತಿಯಿಂದ ಬಂದಿದೆ ಎಂಬ ಪ್ರಕರಣಗಳು ದಾಖಲಾಗುತ್ತವೆ. ಇಂತಹ ಫ್ರಾಡ್ ಸಂದೇಶ, ಕರೆ ಹಾಗೂ ಇ-ಮೇಲ್ ಗಳ ಕುರಿತು EPFO ಟ್ವೀಟ್ ಮಾಡಿದ್ದು, ಗ್ರಾಹಕರಿಗೆ ಸೈಬರ್ ಕಳ್ಳರಿಂದ ಎಚ್ಚರಿಕೆವಹಿಸುವಂತೆ ಕೋರಲಾಗಿದೆ.

ಈ ಟ್ವೀಟ್ ನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ 'ತನ್ನ ಸದಸ್ಯರಿಗೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಸಂಘಟನೆ ಎಂದಿಗೂ ಕೇಳಿಕೊಳ್ಳುವುದಿಲ್ಲ' ಎಂದು ಹೇಳಲಾಗಿದೆ. 'ಹೀಗಾಗಿ ಗ್ರಾಹಕರು ವಂಚಕರಿಂದ ಎಚ್ಚರಿಕೆ ವಹಿಸಬೇಕು' ಎಂದು ಹೇಳಲಾಗಿದೆ.

ಇದನ್ನೂ ಓದಿ-EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ? ಇಲ್ಲಿದೆ ವಿವರ

UAN ಹಾಗೂ PAN ಸಂಖ್ಯೆಗಳಂತಹ ಮಾಹಿತಿ ಹಂಚಿಕೊಳ್ಳಬಾರದು
ಇದಲ್ಲದೇ, 'ಇಪಿಎಫ್‌ಒ ಸಂಸ್ಥೆಯು ನಿಮ್ಮ ವೈಯಕ್ತಿಕ ವಿವರಗಳಾದ ಆಧಾರ್, ಯುಎಎನ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ಎಂದಿಗೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಇಪಿಎಫ್‌ಒ ಎಂದಿಗೂ ಅಂತಹ ಮಾಹಿತಿಯನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ತೆಗೆದುಕೊಳ್ಳುವುದಿಲ್ಲ ಮತ್ತು ಯಾರಿಗೂ ಕೂಡ ಬ್ಯಾಂಕಿನಲ್ಲಿ ಹಣ ಜಮಾ ಮಾಡಲು ಕೇಳುವುದಿಲ್ಲ' ಎನ್ನಲಾಗಿದೆ.

ಇದನ್ನೂ ಓದಿ-EPFO New Rule : ತುರ್ತು ಸಮಯದಲ್ಲಿ ನೀವು 1 ಗಂಟೆಯಲ್ಲಿ PF ಖಾತೆಯಿಂದ ₹1 ಲಕ್ಷ ಹಿಂಪಡೆಯಬಹುದು : ಸಂಪೂರ್ಣ ಮಾಹಿತಿ ಇಲ್ಲಿದೆ

ಹೀಗಾಗಿ ಗ್ರಾಹಕರು ನಕಲಿ ಒಳ ಕರೆಗಳನ್ನು ಸ್ವೀಕರಿಸುವುದನ್ನು ತಪ್ಪಿಸಬೇಕು. ಏಕೆಂದರೆ ನಕಲಿ ಕರೆಗಳನ್ನು ಸ್ವೀಕರಿಸುವ ಮೂಲಕ ಅಥವಾ ಮಾತನಾಡುವ ಮೂಲಕ ವಂಚಕರ ಬಲೆಗೆ ಬೀಳುವ ಸಾದ್ಯತೆ ಇದೆ ಮತ್ತು ಇದು ನಿಮ್ಮ ಶೂನ್ಯ PF ಖಾತೆಗೆ ಕಾರಣವಾಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ನಿರ್ಲಕ್ಷ ಧೋರಣೆ ಅನುಸರಿಸಿದರೆ, ಸೈಬರ್ ವಂಚನೆಯಿಂದ ನಿಮ್ಮನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ.

ಇದನ್ನೂ ಓದಿ-New PF Tax Rules: ನಿಮ್ಮ ಪ್ರಾವಿಡೆಂಟ್ ಫಂಡ್ ನಲ್ಲಿ ಎರಡು ಖಾತೆಗಳು, 9D ನಿಯಮದಿಂದ ನಿಮಗಾಗುವ ಬದಲಾವಣೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More