Home> Business
Advertisement

ಬ್ಯಾಂಕ್ ಲಾಕರ್‌ನಲ್ಲಿ ಈ ವಸ್ತುಗಳನ್ನು ಇಡುವಂತಿಲ್ಲ ! ಒಂದು ವೇಳೆ ಇಟ್ಟರೆ ಬ್ಯಾಂಕ್ ಜವಾಬ್ದಾರಿಯಲ್ಲ


ಇತ್ತೀಚೆಗೆ, ಲಾಕರ್‌ಗಳ ಕುರಿತು ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಗ್ರಾಹಕರಿಗೆ ಸೂಚಿಸಿದೆ. ಡಿಸೆಂಬರ್ 31, 2023 ರೊಳಗೆ ಗ್ರಾಹಕರಿಂದ ಈ ಒಪ್ಪಂದಕ್ಕೆ ಸಹಿ ಪಡೆಯಬೇಕು. 
 

ಬ್ಯಾಂಕ್ ಲಾಕರ್‌ನಲ್ಲಿ ಈ ವಸ್ತುಗಳನ್ನು ಇಡುವಂತಿಲ್ಲ ! ಒಂದು ವೇಳೆ ಇಟ್ಟರೆ ಬ್ಯಾಂಕ್ ಜವಾಬ್ದಾರಿಯಲ್ಲ

ಬೆಂಗಳೂರು : ಸಾಮಾನ್ಯವಾಗಿ ಜನರು ತಮ್ಮ ಆಭರಣಗಳು, ಆಸ್ತಿ ಪತ್ರ, ಪ್ರಮುಖ ದಾಖಲೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಗರಿಷ್ಠ ಭದ್ರತೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಹೀಗೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಗ್ರಾಹಕರ ಈ ನಂಬಿಕೆಗೆ ವಿರುದ್ಧವಾದ ಘಟನೆಗಳು  ನಡೆದು ಬಿಡುತ್ತವೆ. ಇತ್ತೀಚೆಗಷ್ಟೇ ಉದಯಪುರದಲ್ಲಿ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿದ್ದ ನೋಟುಗಳಿಗೆ ಗೆದ್ದಲು ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. 

ಹೆಚ್ಚಿನ ಸಾರ್ವಜನಿಕರು, ಕಂಪನಿಗಳು, ಪಾಲುದಾರಿಕೆ ಸಂಸ್ಥೆಗಳು, ಸೀಮಿತ ಕಂಪನಿಗಳು, ಸೊಸೈಟಿಗಳು ಮತ್ತು ಕ್ಲಬ್‌ಗಳು ಬ್ಯಾಂಕ್ ಲಾಕರ್‌ನ ಸೇವೆಯನ್ನು ನೀಡುತ್ತವೆ. ಗ್ರಾಹಕರು ಸಾಮಾನ್ಯವಾಗಿ ಚಿನ್ನ-ವಜ್ರದ ಆಭರಣಗಳು, ಹಣ, ಪ್ರಮುಖ ದಾಖಲೆಗಳು ಇತ್ಯಾದಿಗಳನ್ನು ಲಾಕರ್‌ಗಳಲ್ಲಿ ಇಡುತ್ತಾರೆ. ಇತ್ತೀಚೆಗೆ, ಲಾಕರ್‌ಗಳ ಕುರಿತು ಆರ್‌ಬಿಐ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಗ್ರಾಹಕರಿಗೆ ಸೂಚಿಸಿದೆ. ಡಿಸೆಂಬರ್ 31, 2023 ರೊಳಗೆ ಗ್ರಾಹಕರಿಂದ ಈ ಒಪ್ಪಂದಕ್ಕೆ ಸಹಿ ಪಡೆಯಬೇಕು. 

ಇದನ್ನೂ ಓದಿ : ಸರ್ಕಾರಿ ನೌಕರರ ಎರಡು ಭತ್ಯೆಗಳಲ್ಲಿ ಹೆಚ್ಚಳ ! ಹಾಗಿದ್ದರೆ ಎಷ್ಟು ಹೆಚ್ಚಳವಾಗುವುದು ವೇತನ ?

ಈ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವಂತಿಲ್ಲ : 
ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ಲಾಕರ್‌ನ ಪರಿಷ್ಕೃತ ನಿಯಮಗಳ ಪ್ರಕಾರ ಮಾನ್ಯ ಉದ್ದೇಶಗಳಿಗಾಗಿ ಮಾತ್ರ ಬ್ಯಾಂಕ್ ಲಾಕರ್ ಅನ್ನು ಬಳಸಬಹುದು. ಉದಾಹರಣೆಗೆ, ಗ್ರಾಹಕರು ಆಭರಣಗಳು, ದಾಖಲೆಗಳು ಇತ್ಯಾದಿಗಳನ್ನು ಇಲ್ಲಿ ಇಡಬಹುದು. ಆದರೆ ನಗದು ಮತ್ತು ಕರೆನ್ಸಿ ನೋಟುಗಳನ್ನು ಇಡಲು ಲಾಕರ್ ಬಳಸುವಂತಿಲ್ಲ. PNB ಯ ಪರಿಷ್ಕೃತ ಲಾಕರ್ ಒಪ್ಪಂದದ ಪ್ರಕಾರ, ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಮಾದಕ ದ್ರವ್ಯಗಳು ಅಥವಾ ನಿಷೇಧಿತ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವಂತಿಲ್ಲ. 

ಬ್ಯಾಂಕ್ ಅಥವಾ ಅದರ ಗ್ರಾಹಕರಿಗೆ ಅಪಾಯವನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಲಾಕರ್‌ನಲ್ಲಿ ಇಡಳು ಅವಕಾಶವಿಲ್ಲ. "ರಾಸಾಯನಿಕಗಳು, ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಮಾದಕ ದ್ರವ್ಯಗಳು ಮತ್ತು ಇತರ ಅಪಾಯಕಾರಿ, ಅಕ್ರಮ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದನ್ನು ಅನುಮತಿಸುವುದಿಲ್ಲ. ಇದನ್ನು PNB ಲಾಕರ್ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ : Royal Enfield 350 ಪ್ರಿಯರಿಗೆ ಹಬ್ಬದ ಉಡುಗೊರೆ ನೀಡಿದೆ ಕಂಪನಿ!

ಬ್ಯಾಂಕ್ ಲಾಕರ್‌ನಲ್ಲಿ ವಸ್ತುಗಳನ್ನು ಸಂಗ್ರಹಿಸುವುದು ಹೇಗೆ? : 
ಕಾಗದ ಮತ್ತು ಇತರ ವಸ್ತುಗಳನ್ನು ತೇವಾಂಶದಿಂದ ರಕ್ಷಿಸಲು ಗಾಳಿಯಾಡದ ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಕು. ಪೇಪರ್ ಡಾಕ್ಯುಮೆಂಟ್‌ಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಲ್ಯಾಮಿನೇಟ್ ಮಾಡಬಹುದು. ಆಭರಣಗಳನ್ನು ಲಾಕರ್‌ಗೆ ಹೊಂದುವ ಗಾತ್ರದ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಇರಿಸಬಹುದು. 

ಲಾಕರ್‌ನಲ್ಲಿ ಯಾವ ವಸ್ತುಗಳನ್ನು ಇಡಬಹುದು? :
ಬ್ಯಾಂಕ್ ಲಾಕರ್‌ಗಳು ದಾಖಲೆಗಳು, ಆಭರಣಗಳು, ಜನನ ಅಥವಾ ಮದುವೆ ಪ್ರಮಾಣಪತ್ರಗಳು, ಉಳಿತಾಯ ಬಾಂಡ್‌ಗಳು, ವಿಮಾ ಪಾಲಿಸಿಗಳು, ಗೌಪ್ಯ ಮತ್ತು ವೈಯಕ್ತಿಕ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಬಹುದು .

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್ ಲಾಭ, 56,900 ಬೇಸಿಕ್ ಸ್ಯಾಲರಿ ಇರುವವರ ಡಿಎ 3,14,088 ರೂ.ಗಳಿಗೆ ತಲುಪಲಿದೆ!

ಸರಕುಗಳ ಜವಾಬ್ದಾರಿಯನ್ನು ಬ್ಯಾಂಕುಗಳು ಯಾವಾಗ ತೆಗೆದುಕೊಳ್ಳುತ್ತವೆ? :
ಬ್ಯಾಂಕ್ ಉದ್ಯೋಗಿಗಳ ನಿರ್ಲಕ್ಷ್ಯ, ಕರ್ತವ್ಯ ಲೋಪ ಅಥವಾ ಮೋಸದ ಕೃತ್ಯಗಳಿಂದ ಲಾಕರ್ ನಲ್ಲಿ ಇಟ್ಟಿದ್ದ ವಸ್ತುಗಳು ನಷ್ಟವಾದರೆ, ಬ್ಯಾಂಕ್ ಲಾಕರ್ ಬಾಡಿಗೆಯ ನೂರು ಪಟ್ಟು ಬಾಧ್ಯತೆಯನ್ನು ಬ್ಯಾಂಕ್ ತೋರುತ್ತದೆ. ಉದಾಹರಣೆಗೆ ಲಾಕರ್ ಬಾಡಿಗೆ 2,000 ರೂಪಾಯಿ ಆಗಿದ್ದರೆ, ಬ್ಯಾಂಕ್ 2,00,000 ವನ್ನು ಪಾವತಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More