Home> Business
Advertisement

Cooking Oil Price: ಶೀಘ್ರದಲ್ಲೇ ಅಗ್ಗವಾಗಲಿದೆ ಅಡುಗೆ ಎಣ್ಣೆ ದರ, ಸಂಗ್ರಹಣೆಗೂ ಕಡಿವಾಣ

Cooking Oil Price: ಮುಂಬರುವ ಹಬ್ಬಗಳಿಗೆ ಮುನ್ನ, ಖಾದ್ಯ ತೈಲದ ಬೆಲೆಗಳು ಗಣನೀಯವಾಗಿ ಕುಸಿಯಲಿವೆ. ಇದಕ್ಕಾಗಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು ವಿಶೇಷ ಸಿದ್ಧತೆಗಳನ್ನು ಮಾಡಿದೆ.
 

Cooking Oil Price: ಶೀಘ್ರದಲ್ಲೇ ಅಗ್ಗವಾಗಲಿದೆ ಅಡುಗೆ ಎಣ್ಣೆ ದರ, ಸಂಗ್ರಹಣೆಗೂ ಕಡಿವಾಣ

Cooking Oil Price:  ಕಳೆದ ಒಂದು ವರ್ಷದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಂತರ, ಅಡುಗೆ ಎಣ್ಣೆ ದರಗಳು ಗಗನಕ್ಕೇರಿರುವುದು ಜನಸಾಮಾನ್ಯರ ಜೇಬಿನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಆದರೆ ಈಗ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು (Ministry of Consumer Affairs, Food and Public Distribution) ಹಬ್ಬಗಳ ಸಮಯದಲ್ಲಿ ಖಾದ್ಯ ತೈಲದ ಬೆಲೆಯನ್ನು ನಿಯಂತ್ರಿಸಲು ಮುಂದಾಗಿದೆ. ಶುಕ್ರವಾರ (ಸೆ.10) ಆಹಾರ ಕಾರ್ಯದರ್ಶಿ, ರಾಜ್ಯಗಳ ಪ್ರತಿನಿಧಿಗಳನ್ನು ಮತ್ತು ತೈಲ ಉದ್ಯಮಕ್ಕೆ ಸಂಬಂಧಿಸಿದ ಜನರನ್ನು ಭೇಟಿ ಮಾಡಿದ ನಂತರ, ಖಾದ್ಯ ತೈಲದ ಬೆಲೆಗಳು ಅಕ್ಟೋಬರ್‌ನಿಂದ ಇಳಿಕೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. 

ಉತ್ತಮ ಬೆಳೆ ಇಳುವರಿಗಾಗಿ ಆಶಿಸುತ್ತೇವೆ:

ಈ ವರ್ಷ ಮಧ್ಯಪ್ರದೇಶ (Madhya Pradesh) ಮತ್ತು ಮಹಾರಾಷ್ಟ್ರದಲ್ಲಿ (Maharashtra) ಮಳೆಯಾಗಿದ್ದರೂ, ಸೋಯಾಬೀನ್ ಉತ್ಪಾದನೆ ಉತ್ತಮವಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ. ರಾಜ್ಯಗಳ ವರದಿಗಳ ಪ್ರಕಾರ, ಈ ಉತ್ಪಾದನೆಯು ಕಳೆದ ವರ್ಷಕ್ಕಿಂತ ಹೆಚ್ಚಿರುತ್ತದೆ. ಇದರೊಂದಿಗೆ, ತಾಳೆ ಮತ್ತು ಸೋಯಾಬೀನ್ ಎಣ್ಣೆಯ ಬೆಲೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ, ಇದರಿಂದಾಗಿ ದೇಶದಲ್ಲಿ ಅಡುಗೆ ಎಣ್ಣೆ ಬೆಲೆಗಳು ಶೀಘ್ರದಲ್ಲೇ ಕಡಿಮೆ ಆಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ- Arecanut: ಕರ್ನಾಟಕದ ಪ್ರಮುಖ ಮಾರ್ಕೆಟ್‌ಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ತಿಳಿದುಕೊಳ್ಳಿ…

ಸಂಗ್ರಹಣೆಯ ಬಗ್ಗೆ ಸರ್ಕಾರದ ನಿಲುವು ಕಠಿಣವಾಗಿದೆ:
ಖಾದ್ಯ ತೈಲಗಳ (Cooking Oil) ಆಮದು (Import) ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದರೂ ಆಮದು ಬೆಲೆಯಲ್ಲಿ ಇಳಿಕೆ ಆಗಿಲ್ಲ ಎಂದು ಸರ್ಕಾರ ಹೇಳುತ್ತದೆ ಮತ್ತು ಸಂಗ್ರಹಣೆಯೂ ಕೂಡ ಇದಕ್ಕೆ ಒಂದು ಕಾರಣವಾಗಿರಬಹುದು. ಆದ್ದರಿಂದ, ಕಾಳಧನ ನಿಗ್ರಹಿಸಲು , ವ್ಯಾಪಾರಿಗಳು, ಸಂಸ್ಕರಣಾ ಘಟಕಗಳು ಅಗತ್ಯ ವಸ್ತುಗಳ ಕಾಯಿದೆ ( ಇಎಸ್ಎ ) ಅಡಿಯಲ್ಲಿ ತಮ್ಮ ಸ್ಟಾಕ್ ಅನ್ನು ಬಹಿರಂಗಪಡಿಸಬೇಕು. ರಾಜ್ಯ ಸರ್ಕಾರಗಳು ಈ ಕೆಲಸವನ್ನು ಮಾಡುತ್ತವೆ ಮತ್ತು ಅಗತ್ಯ ಸರಕುಗಳ ಕಾಯಿದೆಯ ಅಡಿಯಲ್ಲಿ ಅವರಿಗೆ ಈ ಹಕ್ಕನ್ನು ನೀಡಲಾಗಿದೆ. 

ಇದನ್ನೂ ಓದಿ- Aadhaar Card: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು, ಹೇಗೆ ಗೊತ್ತಾ?

ಸರ್ಕಾರದ ಪೋರ್ಟಲ್ :
ದ್ವಿದಳ ಧಾನ್ಯಗಳಂತೆ, ಸರ್ಕಾರವು ಶೀಘ್ರದಲ್ಲೇ ಅಸ್ತಿತ್ವದಲ್ಲಿರುವ ಖಾದ್ಯ ತೈಲ ಮತ್ತು ಎಣ್ಣೆಬೀಜಗಳ ದಾಸ್ತಾನುಗಳನ್ನು ಸಾರ್ವಜನಿಕವಾಗಿಸಲು ಒಂದು ಪೋರ್ಟಲ್ ಅನ್ನು ತರಲಿದೆ. ಇದು ಮುಂದಿನ ವಾರ ಕಾರ್ಯಾರಂಭ ಮಾಡಲಿದೆ. ಈ ಪೋರ್ಟಲ್ ಮೂಲಕ ವ್ಯಾಪಾರಿಗಳು ತಮ್ಮ ಸ್ಟಾಕ್ ಬಹಿರಂಗಪಡಿಸುವಿಕೆಯನ್ನು ನೀಡಬಹುದು, ಇದನ್ನು ರಾಜ್ಯ ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More