Home> Business
Advertisement

CNG Price Hike: ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಸಿಎನ್‌ಜಿ ಮತ್ತಷ್ಟು ದುಬಾರಿ..!

ಈಗಾಗಲೇ ಅಗತ್ಯ ವಸ್ತುಗಳು, ಪೆಟ್ರೋಲ್-ಡಿಸೇಲ್, LPG ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನರು ಪರದಾಡುವಂತಾಗಿದೆ.

CNG Price Hike: ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಸಿಎನ್‌ಜಿ ಮತ್ತಷ್ಟು ದುಬಾರಿ..!

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ಸಿಎನ್‌ಜಿ ಬೆಲೆ(CNG Price Hike)ಯನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಹೊಸ ದರಗಳು ಶನಿವಾರ(ನವೆಂಬರ್ 4) ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿದ್ದು, ಇದರ ಪ್ರಕಾರ ರಾಷ್ಟ್ರೀಯ ರಾಜಧಾನಿಯಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 1 ರೂ. ಹೆಚ್ಚಳವಾಗಲಿದೆ. ಇದಲ್ಲದೇ ರಾಜಸ್ಥಾನ, ಹರಿಯಾಣದಲ್ಲೂ ಹೊಸ ದರಗಳು ಅನ್ವಯವಾಗಲಿದೆ.

ದೆಹಲಿಯಲ್ಲಿ CNG ಮತ್ತಷ್ಟು ದುಬಾರಿ

ಸರ್ಕಾರಿ ಕಂಪನಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಾಮಾನ್ಯ ಜನರಿಗೆ ದೊಡ್ಡ ಹೊಡೆತ ನೀಡಿದೆ. ಶುಕ್ರವಾರ ದೆಹಲಿ, ಹರಿಯಾಣ ಮತ್ತು ರಾಜಸ್ಥಾನ(Haryana & Rajasthan)ದಲ್ಲಿ ಐಜಿಎಲ್ ಸಿಎನ್‌ಜಿ ಬೆಲೆಗಳನ್ನು ಪರಿಷ್ಕರಿಸಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾದ ನಂತರ ಈಗ ಸಿಎನ್‌ಜಿ ಬೆಲೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್!: ಈ ಪ್ರಿಪೇಯ್ಡ್ ಯೋಜನೆ ಮೇಲೆ 20% ಕ್ಯಾಶ್‌ಬ್ಯಾಕ್

2 ತಿಂಗಳ ಅವಧಿಯಲ್ಲಿ 4ನೇ ಬಾರಿ ಬೆಲೆ ಏರಿಕೆ

ಶನಿವಾರದಿಂದ ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 53.04 ರೂ. ದರ(CNG Price News)ದಲ್ಲಿ ಲಭ್ಯವಿದ್ದರೆ, ಗುರುಗ್ರಾಮ್‌ನಲ್ಲಿ ಇದರ ಬೆಲೆ ಕೆಜಿಗೆ 60.4 ರೂ. ಇದೆ. ಇದೇ ರೀತಿ ರಾಜಸ್ಥಾನದ ಅಜ್ಮೀರ್, ಪಾಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 67.31 ರೂ. ತಲುಪಿದೆ.

ಈ ಹಿಂದೆ ನವೆಂಬರ್ 14 ರಂದು ಐಜಿಎಲ್ ಸಿಎನ್‌ಜಿ ಬೆಲೆಗಳನ್ನು ಹೆಚ್ಚಿಸಿತ್ತು. ನಂತರ ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 2.28 ರೂ. ಮತ್ತು ಉತ್ತರಪ್ರದೇಶದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ(Price Hike) ಪ್ರತಿ ಕೆಜಿಗೆ 2.56 ರೂ.ನಷ್ಟು ಹೆಚ್ಚಿಸಲಾಗಿತ್ತು. ಅಕ್ಟೋಬರ್ 1 ರ ನಂತರ 4ನೇ ಬಾರಿಗೆ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಗೆ ಬಂಪರ್ ದರ

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ಈ ನಿರ್ಧಾರದ ನಂತರ ಇತರ ಕಂಪನಿಗಳು ಕೂಡ ಸಿಎನ್‌ಜಿ ಬೆಲೆಯನ್ನು ಹೆಚ್ಚಿಸಬಹುದು. ಈಗಾಗಲೇ ಅಗತ್ಯವಸ್ತುಗಳು, ಪೆಟ್ರೋಲ್-ಡಿಸೇಲ್, LPG ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನರು ಪರದಾಡುವಂತಾಗಿದೆ. ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More