Home> Business
Advertisement

ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ಓಡುತ್ತದೆ ಈ ಹೈ-ಸ್ಪೀಡ್ ಸ್ಟೈಲಿಶ್ ಸ್ಕೂಟರ್, ಕೇವಲ 1,999 ರೂ.ಗೆ ತಕ್ಷಣ ಬುಕ್ ಮಾಡಿ

ಈ ಸ್ಕೂಟರ್  ಒಂದೇ ಚಾರ್ಜ್‌ನಲ್ಲಿ 150 ಕಿಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ. ಬ್ಯಾಟರಿಯನ್ನು ಸರಿಯಾಗಿ ಬಳಸಿದರೆ, ಒಮ್ಮೆ ಚಾರ್ಜ್‌ ಮಾಡಿದರೆ 200 ಕಿಮೀವರೆಗೆ  ಓಡಬಹುದು ಎನ್ನಲಾಗಿದೆ. 

ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ಓಡುತ್ತದೆ ಈ ಹೈ-ಸ್ಪೀಡ್ ಸ್ಟೈಲಿಶ್ ಸ್ಕೂಟರ್, ಕೇವಲ 1,999 ರೂ.ಗೆ ತಕ್ಷಣ ಬುಕ್ ಮಾಡಿ

ನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric scooter) ಪ್ರಾಬಲ್ಯ ಹೊಂದಿದ್ದು, ಪ್ರತಿದಿನ ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇದೆ. ಈ ಪಟ್ಟಿಗೆ ಇದೀಗ ಇತ್ತೀಚಿನ ಬ್ರ್ಯಾಂಡ್ ಒಕಾಯಾ ಎಲೆಕ್ಟ್ರಿಕ್ ಸ್ಕೂಟರ್ (Okaya electric scooter) ಕೂಡಾ ಸೇರಿದೆ. ಈ ಸ್ಕೂಟರ್ ಅನ್ನು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ EV ಎಕ್ಸ್‌ಪೋ 2021 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದ್ರ್ ಹೆಸರು ಫಾಸ್ಟ್ (Faast).  ಇದರ ಎಕ್ಸ್ ಶೋ ರೂಂ ಬೆಲೆ  90,000 ರೂ. ಆಗಿದ್ದು ಕೇವಲ ರೂ 1,999 ಟೋಕನ್ ಮೊತ್ತ ಪಾವತಿಸುವ ಮೂಲಕ ಈ ಹೈ ಸ್ಪೀಡ್ ಸ್ಕೂಟರನ್ನು ಬುಕ್ ಮಾಡಬಹುದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಕಾಯಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಮತ್ತು ಡೀಲರ್‌ಶಿಪ್‌ಗಳ ಮೂಲಕ ಬುಕ್ ಮಾಡಬಹುದು.

4.4 kWh ಲಿಥಿಯಂ-ಫಾಸ್ಫೇಟ್ ಬ್ಯಾಟರಿ ಪ್ಯಾಕ್ :

ಒಕಾಯಾ ಫಾಸ್ಟ್ (okaya faast scooter) ಕನೆಕ್ಟೆಡ್ ಎಲೆಕ್ಟ್ರಿಕ್ ಸ್ಕೂಟರ್ 4.4 kWh ಲಿಥಿಯಂ-ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ.  ಈ ಸ್ಕೂಟರ್  ಒಂದೇ ಚಾರ್ಜ್‌ನಲ್ಲಿ 150 ಕಿಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ. ಬ್ಯಾಟರಿಯನ್ನು ಸರಿಯಾಗಿ ಬಳಸಿದರೆ, ಒಮ್ಮೆ ಚಾರ್ಜ್‌ ಮಾಡಿದರೆ 200 ಕಿಮೀವರೆಗೆ  ಓಡಬಹುದು ಎನ್ನಲಾಗಿದೆ. ಒಕಾಯಾ ಫಾಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಎಲ್‌ಇಡಿ ದೀಪಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಕಾಂಬಿ ಬ್ರೇಕಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ (okaya faast scooter features) ಬರುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 60-70 ಕಿಮೀ ನಡುವೆ ಇರಲಿದೆ. 

ಇದನ್ನೂ ಓದಿ :  Budget 2022-23ಕ್ಕೆ ನೀವೂ ಸಲಹೆಗಳನ್ನು ನೀಡಬಹುದು, ಜನವರಿ 7ರವರೆಗೆ ನಿಮ್ಮ ಬಳಿ ಇದೆ ಈ ಅವಕಾಶ

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಫೆರಾಟೊದ ಝಲಕ್ ಕೂಡಾ ಪ್ರದರ್ಶಿಸಲಾಯಿತು : 
ಒಕಾಯಾ ಎಲೆಕ್ಟ್ರಿಕ್, EV ಎಕ್ಸ್‌ಪೋ 2021 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವುದರ ಜೊತೆಗೆ, ಮುಂಬರುವ ದಿನಗಳಲ್ಲಿ ಲಾಂಚ್ ಮಾಡಲಿರುವ ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಫೆರಾಟೊವನ್ನು ಒಂದು ಝಲಕ್ ಅನ್ನು ಕೂಡಾ  ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ (electric motor cycle) ಅನ್ನು 2022 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಇ-ಮೋಟಾರ್‌ಸೈಕಲ್ ಅನ್ನು 2 kW ಮೋಟಾರ್ ಮತ್ತು 3 kW ಬ್ಯಾಟರಿಯೊಂದಿಗೆ 90 ಕಿಮೀ / ಗಂ ವೇಗದಲ್ಲಿ ಓಡಿಸಬಹುದಾಗಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನು 100 ಕಿ.ಮೀ ವರೆಗೆ ಓಡಿಸಬಹುದು. ಕಂಪನಿಯು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಬ್ರ್ಯಾಂಡ್ ಆಗುವ ಗುರಿಯನ್ನು ಹೊಂದಿದೆ. ಈ ಸ್ಟಾರ್ಟ್‌ಅಪ್ 6 ತಿಂಗಳಲ್ಲಿ ದೇಶಾದ್ಯಂತ 225 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಸೃಷ್ಟಿಸಿದೆ.

ಇದನ್ನೂ ಓದಿ :  Paytm user: ಪೇಟಿಎಂ ಬಳಕೆದಾರರೇ ಎಚ್ಚರ ಈ ಒಂದು ಸಂದೇಶ ನಿಮ್ಮ ಹಣವನ್ನು ಕದಿಯಬಹುದು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More