Home> Business
Advertisement

ಕೇವಲ 342 ರೂ. ಪಾವತಿಸಿದರೆ SBI ಗ್ರಾಹಕರಿಗೆ ಸಿಗಲಿದೆ 4 ಲಕ್ಷ ರೂ.ಗಳ ಬಂಪರ್ ಲಾಭ

  ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಅತ್ಯಂತ ಕಡಿಮೆ ಹಣದಲ್ಲಿ ವಿಮಾ ಸೌಲಭ್ಯವನ್ನು ನೀಡುತ್ತಿದೆ.  ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ , ಇದು 4 ಲಕ್ಷದವರೆಗೆ ವಿಮಾ ರಕ್ಷಣೆ ನೀಡುತ್ತದೆ. ಇದಕ್ಕಾಗಿ ಕೇವಲ 342 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

 ಕೇವಲ 342 ರೂ. ಪಾವತಿಸಿದರೆ SBI ಗ್ರಾಹಕರಿಗೆ ಸಿಗಲಿದೆ 4 ಲಕ್ಷ ರೂ.ಗಳ ಬಂಪರ್ ಲಾಭ

ನವದೆಹಲಿ : ಕರೋನಾ (Coronavirus)ಬಹಳಷ್ಟು ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಕರೋನಾ ನಂತರ ಅನೇಕ ಜನರಿಗೆ ವಿಮೆಯ ಅಗತ್ಯದ ಬಗ್ಗೆ ತಿಳುವಳಿಕೆಯೂ  ಮೂಡಿದೆ.  ಈ ಹಿನ್ನೆಲೆಯಲ್ಲಿ ಪ್ರತಿ ವರ್ಗದ ಜನರಿಗೆ ವಿಮೆ ಲಭ್ಯವಾಗುವಂತೆ ಮಾಡಲು ಸರ್ಕಾರವೂ ಸತತ ಪ್ರಯತ್ನ ನಡೆಸುತ್ತಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಅತ್ಯಂತ ಕಡಿಮೆ ಹಣದಲ್ಲಿ ವಿಮಾ ಸೌಲಭ್ಯವನ್ನು ನೀಡುತ್ತಿದೆ.  ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಇದು 4 ಲಕ್ಷದವರೆಗೆ ವಿಮಾ ರಕ್ಷಣೆ ನೀಡುತ್ತದೆ. ಇದಕ್ಕಾಗಿ ಕೇವಲ 342 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

 ಸಿಗಲಿದೆ  4 ಲಕ್ಷ ರೂ.ಗಳ ಬಂಪರ್ ಲಾಭ  :

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಎರಡು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಆಟೋ ಡೆಬಿಟ್ (Auto Debit) ಸೌಲಭ್ಯದ ಮೂಲಕ ಉಳಿತಾಯ ಬ್ಯಾಂಕ್ ಖಾತೆದಾರರಿಂದ ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ. ವ್ಯಕ್ತಿಯು ಕೇವಲ ಒಂದು ಉಳಿತಾಯ ಬ್ಯಾಂಕ್ ಖಾತೆಯ (Saving Bank Account) ಮೂಲಕ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ : 16-03-2022 Today Gold Price:ಸತತವಾಗಿ ಮೂರನೇ ದಿನವು ಇಳಿಕೆ ಕಂಡ ಚಿನ್ನ.. ಮತ್ತೆ ಕುಗ್ಗಿದ ಬೆಳ್ಳಿ ದರ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY):
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (PMSBY), ಅಪಘಾತದಲ್ಲಿ ವಿಮಾದಾರರು ಮರಣಹೊಂದಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ, 2 ಲಕ್ಷ  ರೂ. ಪರಿಹಾರ ಸಿಗುತ್ತದೆ. ವಿಮಾದಾರನು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲನಾದರೆ, ಅವನು  1 ಲಕ್ಷ ರೂಪಾಯಿಯ ರಕ್ಷಣೆಯನ್ನು ಪಡೆಯುತ್ತಾನೆ. ಇದರಲ್ಲಿ 18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿಯು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೂಡ ಕೇವಲ 12 ರೂ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY):
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ (PMJJBY), ವಿಮಾದಾರನ ಮರಣದ ನಂತರ ನಾಮಿನಿಯು 2 ಲಕ್ಷ ರೂಪಾಯಿಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. . 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಗೆ ಕೇವಲ 330 ರೂ. ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಇವೆರಡೂ ಟರ್ಮ್ ಇನ್ಶೂರೆನ್ಸ್ (Term insurance) ಪಾಲಿಸಿಗಳಾಗಿವೆ. 

ಇದನ್ನೂ ಓದಿ : Petrol-Diesel Price Hike: ಪೆಟ್ರೋಲ್ , ಡಿಸೇಲ್ ಬೆಲೆಯಲ್ಲಿ ಭಾರೀ ಏರಿಕೆ ..! ಕಾರಣ ಹೇಳಿದ ಇಂಡಿಯನ್ ಆಯಿಲ್

ಜೂನ್ 1 ರಿಂದ ಮೇ 31 ರವರೆಗೆ ವಿಮಾ ರಕ್ಷಣೆ :
ಈ ವಿಮಾ ರಕ್ಷಣೆಯು ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ.  ಇದಕ್ಕಾಗಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಖಾತೆಯನ್ನು ಮುಚ್ಚುವುದರಿಂದ ಅಥವಾ ಪ್ರೀಮಿಯಂ ಕಡಿತದ ಸಮಯದಲ್ಲಿ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದೆ ಹೋದರೆ ವಿಮೆ ರದ್ದಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More