Home> Business
Advertisement

Bumper Offer! LPG ಬುಕಿಂಗ್ ಮೇಲೆ ಪಡೆಯಿರಿ 2700 ರೂಪಾಯಿಗಳ ಲಾಭ ..!

Paytm ಮೂಲಕ LPG ಸಿಲಿಂಡರ್ ಅನ್ನು ಬುಕ್ ಮಾಡಿದರೆ, 2,700 ರೂಪಾಯಿಗಳ ಲಾಭವಾಗಲಿದೆ.  ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ ಮೇಲೆ ಪೇಟಿಎಂ ಕ್ಯಾಶ್‌ಬ್ಯಾಕ್ ಮತ್ತು ಹಲವು ಬಹುಮಾನಗಳನ್ನು ಘೋಷಿಸಿದೆ. 

Bumper Offer! LPG ಬುಕಿಂಗ್ ಮೇಲೆ ಪಡೆಯಿರಿ 2700 ರೂಪಾಯಿಗಳ ಲಾಭ ..!

ನವದೆಹಲಿ :  LPG Booking Offer : ಎಲ್‌ಪಿಜಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಕಡಿಮೆ ದರಕ್ಕೆ ಎಲ್‌ಪಿಜಿ  ಸಿಲಿಂಡರ್ ಸಿಕ್ಕಿದರೆ ಅದೇ ಲಾಭ. ಹೌದು ಈಗ ಹೀಗೆ ಮಾಡಿದರೆ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಇದಕ್ಕಾಗಿ ಗ್ಯಾಸ್ ಬುಕ್ (LPG Booking) ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯಿರಿ . 

Paytm ನಿಂದ LPG ಬುಕ್ ಮಾಡಿದರೆ ಸಿಗಲಿದೆ ಕ್ಯಾಶ್ ಬ್ಯಾಕ್ : 

ನೀವು Paytm ಮೂಲಕ LPG ಸಿಲಿಂಡರ್ ಅನ್ನು ಬುಕ್ ಮಾಡಿದರೆ, 2,700 ರೂಪಾಯಿಗಳ ಲಾಭವಾಗಲಿದೆ.  ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ ಮೇಲೆ ಪೇಟಿಎಂ ಕ್ಯಾಶ್‌ಬ್ಯಾಕ್ (Paytm cashback) ಮತ್ತು ಹಲವು ಬಹುಮಾನಗಳನ್ನು ಘೋಷಿಸಿದೆ. Paytm 3 Pay 2700 Cashback Offer ಹೆಸರಿನ ಯೋಜನೆಯನ್ನು ಆರಂಭಿಸಿದೆ. ಹೊಸ ಬಳಕೆದಾರರು ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಸತತ ಮೂರು ತಿಂಗಳ ಮೊದಲ ಬುಕಿಂಗ್‌ನಲ್ಲಿ ರೂ. 900 ವರೆಗೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. 

ಇದನ್ನೂ ಓದಿ : SBI ಚಿನ್ನದ ಸಾಲದ ಮೇಲೆ ಭರ್ಜರಿ ಆಫರ್ : YONO SBI ಮೂಲಕ ಪಡೆಯುವುದು ಹೇಗೆ? 

ಈ ಆಫರ್‌ನ ಕ್ಯಾಶ್‌ಬ್ಯಾಕ್ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು (LPG Cylinder) ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಪ್ರತಿ ತಿಂಗಳು ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿದಾಗ, ಮೊದಲ ಬುಕಿಂಗ್‌ ಮೇಲೆ  900 ರೂ.  ವರೆಗೆ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಕ್ಯಾಶ್‌ಬ್ಯಾಕ್ ಮೂರು ತಿಂಗಳವರೆಗೆ ಲಭ್ಯವಿರುತ್ತದೆ. 

ಈ ಆಫರ್ ಕೂಡಾ ಸಿಗಲಿದೆ : 
ಇದಲ್ಲದೇ, Paytm ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಪ್ರತಿ ಬುಕಿಂಗ್‌ ಮೇಲೆ ಬಹುಮಾನ  ಮತ್ತು 5000 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ನೀಡುತ್ತದೆ. ಇವುಗಳನ್ನು ಟಾಪ್ ಬ್ರಾಂಡ್ ಗಳ ಉತ್ತಮ ಡೀಲ್‌ಗಳು ಮತ್ತು ವೋಚರ್‌ಗಳಿಗಾಗಿ ರಿಡೀಮ್ ಮಾಡಬಹುದು. 

Paytm 3 Pay 2700 Cashback Offer ಮೂಲಕ ಇಂಡೇನ್, ಎಚ್‌ಪಿ ಗ್ಯಾಸ್ (HP gas) ಮತ್ತು ಭಾರತ್ ಗ್ಯಾಸ್ ಸಿಲಿಂಡರ್‌ಗಳ ಬುಕಿಂಗ್‌ ಮಾಡಬಹುದು. 'Paytm Now Pay After' ಕಾರ್ಯಕ್ರಮದಲ್ಲಿ ಜನಪ್ರಿಯವಾಗಿರುವ 'Paytm Postpaid' ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಗ್ರಾಹಕರು ಸಿಲಿಂಡರ್ ಬುಕಿಂಗ್ ಮಾಡಿದ ಮುಂದಿನ ತಿಂಗಳು ಪೇಮೆಂಟ್  ಮಾಡಲು ಅವಕಾಶವಿದೆ.

ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ ಆಗಸ್ಟ್ 6 ಮತ್ತು 7 ಕ್ಕೆ ಸ್ಥಗಿತಗೊಳ್ಳಲಿವೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ..! ವಹಿವಾಟಿಗೂ ಮುನ್ನ ತಿಳಿದುಕೊಳ್ಳಿ ಸಮಯ

ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?:
-ಮೊದಲು ಪೇಟಿಎಂ (Paytm) ಆಪ್ ಡೌನ್‌ಲೋಡ್ ಮಾಡಿ
-ಅದರ ನಂತರ ಸಿಲಿಂಡರ್ ಬುಕಿಂಗ್‌ಗೆ ಹೋಗಿ.
-ನಂತರ ನಿಮ್ಮ ಗ್ಯಾಸ್ ಏಜೆನ್ಸಿಯನ್ನು ಆಯ್ಕೆ ಮಾಡಿ.
- ಇದರಲ್ಲಿ, ನೀವು ಮೂರು ಆಯ್ಕೆಗಳಿರುತ್ತವೆ.  ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು HP ಗ್ಯಾಸ್.
-ಇದರ ನಂತರ ನಿಮ್ಮ ನೋಂದಾಯಿತ ಸಂಖ್ಯೆ ಅಥವಾ LPG ID ಅಥವಾ ಗ್ರಾಹಕರ ಸಂಖ್ಯೆಯನ್ನು ನಮೂದಿಸಿ.
ಈ ಮಾಹಿತಿಯನ್ನು ಭರ್ತಿ ಮಾಡಿದ ನಂತರ,Proceed  ಬಟನ್ ಒತ್ತುವ ಮೂಲಕ ಪೇಮೆಂಟ್  ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More