Home> Business
Advertisement

LPG Cylinder Booking: ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ಬಂಪರ್ ಕ್ಯಾಶ್‌ಬ್ಯಾಕ್ ಲಭ್ಯ, ಈ ರೀತಿ ಪ್ರಯೋಜನ ಪಡೆಯಿರಿ

LPG Cylinder Booking: ನೀವು ಪಾಕೆಟ್ಸ್ ಆಪ್ ಮೂಲಕ ಗ್ಯಾಸ್ ಬುಕ್ಕಿಂಗ್ ಸೇರಿದಂತೆ  ರೂ. 200 ಅಥವಾ ಅದಕ್ಕಿಂತ ಹೆಚ್ಚಿನ ಯಾವುದೇ ರೀತಿಯ ಬಿಲ್ ಪಾವತಿಯನ್ನು ಮಾಡಿದರೆ, ನೀವು ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.

LPG Cylinder Booking: ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ಬಂಪರ್ ಕ್ಯಾಶ್‌ಬ್ಯಾಕ್ ಲಭ್ಯ, ಈ ರೀತಿ ಪ್ರಯೋಜನ ಪಡೆಯಿರಿ

LPG Cylinder Booking: ಏರುತ್ತಿರುವ ಹಣದುಬ್ಬರವು ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು ಗಗನಕ್ಕೇರುತ್ತಿರುವ ಅಡುಗೆ ಅನಿಲ ದರವು ಜನರಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ. ಈ ಮಧ್ಯೆ, ನಾವು ನಿಮಗಾಗಿ ಉತ್ತಮ ಕೊಡುಗೆಯನ್ನು ತಂದಿದ್ದೇವೆ. ಇದರ ಅಡಿಯಲ್ಲಿ, ನೀವು 14.2 ಕೆಜಿ ಗ್ಯಾಸ್ ಸಿಲಿಂಡರ್ ಮೇಲೆ ಸ್ಥಿರ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. 

ವಾಸ್ತವವಾಗಿ, ಡಿಜಿಟಲ್ ಪಾವತಿ (Digital Payments) ಸೌಲಭ್ಯವನ್ನು ಒದಗಿಸುವ ಪಾಕೆಟ್ಸ್ ಆ್ಯಪ್ (Pockets App) ಮೂಲಕ ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಳನ್ನು ಬುಕಿಂಗ್ ಮಾಡಿದರೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಅಪ್ಲಿಕೇಶನ್ ಐಸಿಐಸಿಐ ಬ್ಯಾಂಕ್‌ನಿಂದ ಚಾಲಿತವಾಗಿದೆ. ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ  ಕ್ಯಾಶ್‌ಬ್ಯಾಕ್ ಅನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ...

ಇದನ್ನೂ ಓದಿ- ಫ್ಲೈಟ್ ಬುಕ್ಕಿಂಗ್ ಮೇಲೆ ಭಾರೀ ರಿಯಾಯಿತಿ, ಅಗ್ಗದ ದರದಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ ತಿಳಿಯಿರಿ

ಒಂದು ತಿಂಗಳಲ್ಲಿ 3 ಬಿಲ್ ಪಾವತಿಗಳ ಮೇಲೆ ಕ್ಯಾಶ್ ಬ್ಯಾಕ್ :
ವಾಸ್ತವವಾಗಿ, ನೀವು ಪಾಕೆಟ್ಸ್ ಅಪ್ಲಿಕೇಶನ್ (Pockets App) ಮೂಲಕ ರೂ 200 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿಯನ್ನು ಮಾಡಿದರೆ, ನಂತರ ನೀವು 10 ಪ್ರತಿಶತದವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಆಫರ್ ಅನ್ನು ಪಡೆಯಲು ಗ್ರಾಹಕರು ಯಾವುದೇ ಪ್ರೋಮೋಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಆದರೆ ಈ ಆಫರ್ ತಿಂಗಳ 3 ಬಿಲ್ ಪಾವತಿಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. 

ಕಂಪನಿಯ ನಿಯಮಗಳ ಪ್ರಕಾರ, ಒಂದು ಗಂಟೆಯಲ್ಲಿ ಕೇವಲ 50 ಬಳಕೆದಾರರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಉತ್ತಮ ಅಂಶವೆಂದರೆ ನೀವು ಒಂದು ಗಂಟೆಯಲ್ಲಿ 1 ಬಹುಮಾನ/ಕ್ಯಾಶ್‌ಬ್ಯಾಕ್ ಮತ್ತು ಒಂದು ತಿಂಗಳಲ್ಲಿ 3 ಬಹುಮಾನಗಳು/ಕ್ಯಾಶ್‌ಬ್ಯಾಕ್ ಅನ್ನು ಬಿಲ್ ಪಾವತಿಯ ಮೇಲೆ ಗೆಲ್ಲಬಹುದು.

ಇದನ್ನೂ ಓದಿ- Ottobike: ಒಂದು ಬಾರಿ ಫುಲ್ ಚಾರ್ಜ್ನಲ್ಲಿ 230 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್ ಬೈಕ್

ಗ್ಯಾಸ್ ಸಿಲಿಂಡರ್ ಬುಕಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?
1. ಈ ಪ್ರಯೋಜನವನ್ನು ಪಡೆಯಲು, ನೀವು ನಿಮ್ಮ ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.
2. ಈಗ ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳ ವಿಭಾಗದಲ್ಲಿ ಪೇ ಬಿಲ್‌ಗಳ ಮೇಲೆ ಕ್ಲಿಕ್ ಮಾಡಿ.
3. ಇದಾದ ನಂತರ Choose Billers ನಲ್ಲಿ More ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ LPG ಆಯ್ಕೆಯು ನಿಮ್ಮ ಮುಂದೆ ಬರುತ್ತದೆ.
5. ಈಗ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಈಗ ನಿಮ್ಮ ಬುಕಿಂಗ್ ಮೊತ್ತವನ್ನು ಸಿಸ್ಟಮ್ ಮೂಲಕ ತಿಳಿಸಲಾಗುತ್ತದೆ.
7. ಇದರ ನಂತರ ನೀವು ಬುಕಿಂಗ್ ಮೊತ್ತವನ್ನು ಪಾವತಿಸಬೇಕು.
8. ವಹಿವಾಟಿನ ನಂತರ, 10% ದರದಲ್ಲಿ, ನೀವು ಗರಿಷ್ಠ ರೂ. 50 ಕ್ಯಾಶ್‌ಬ್ಯಾಕ್‌ನೊಂದಿಗೆ ಬಹುಮಾನಗಳನ್ನು ಪಡೆಯುತ್ತೀರಿ. ಕ್ಯಾಶ್‌ಬ್ಯಾಕ್ ಮೊತ್ತವು ನಿಮ್ಮ ಪಾಕೆಟ್ಸ್ ವಾಲೆಟ್ ಅನ್ನು ತೆರೆದ ತಕ್ಷಣ ಅದನ್ನು ಕ್ರೆಡಿಟ್ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More