Home> Business
Advertisement

Black Friday: ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ, 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

Share Market Update: ಸತತ ಎರಡನೇ ಶುಕ್ರವಾರವಾದ ಇಂದು ಸೆನ್ಸೆಕ್ಸ್ ಸೂಚ್ಯಂಕ 1000 ಅಂಕಗಳಿಗಿಂತ ಹೆಚ್ಚು ಅಂಕಗಳಿಂದ ಕುಸಿದಿದೆ. ನಿಫ್ಟಿ ಕೂಡ 300 ಅಂಕಗಳಷ್ಟು ಕುಸಿದು ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ.
 

Black Friday: ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ, 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

Stock Market Closing On 23rd September 2022: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಆರ್ ಬಿಐ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯ ಹಿನ್ನೆಲೆ ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತದೊಂದಿಗೆ ತನ್ನ ವಾರದ ವಹಿವಾಟು ಅಂತ್ಯಗೊಳಿಸಿದೆ. ಸೆನ್ಸೆಕ್ಸ್ ಸೂಚ್ಯಂಕ 1,000 ಅಂಕಗಳಿಗಿಂತಲೂ ಹೆಚ್ಚು ಅಂಕಗಳಿಂದ ಕುಸಿತ ಕಂಡಿದ್ದು, ಸತತ ಎರಡನೇ ಶುಕ್ರವಾರವಾದ ಇಂದು ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಯಾಗಿದೆ. ಇಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 1020 ಅಂಕಗಳ ಕುಸಿತದೊಂದಿಗೆ 58,140 ಅಂಕಗಳಿಗೆ ಮತ್ತು ರಾಷ್ಟ್ರೀಯ ಶೇರುಪೇಟೆಯ ನಿಫ್ಟಿ 302 ಅಂಕಗಳ ಕುಸಿತದೊಂದಿಗೆ 17,327 ಅಂಕಗಳಿಗೆ ತಲುಪಿವೆ.

ಮಾರುಕಟ್ಟೆಯಲ್ಲಿ ಎಲ್ಲ ವಲಯಗಳ ಷೇರುಗಳಲ್ಲಿ ಈ ಕುಸಿತದ ಪ್ರಭಾವ ಗಮನಿಸಲಾಗಿದೆ. ಬ್ಯಾಂಕ್ ನಿಫ್ಟಿ 1,090 ಅಂಕಗಳ ಕುಸಿತದೊಂದಿಗೆ ಮುಕ್ತಾಯ ಕಂಡರೆ, ಐಟಿ, ಆಟೋ, ಎನರ್ಜಿ, ಮೆಟಲ್ಸ್, ಫಾರ್ಮಾ, ಎಫ್‌ಎಂಸಿಜಿ ವಲಯದ ಷೇರುಗಳಲ್ಲಿ ಪ್ರಾಫಿಟ್ ಬುಕ್ಕಿಂಗ್ ಕಂಡುಬಂದಿದೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಸಹ ಈ ಕುಸಿತದಿಂದ ವಂಚಿತವಾಗಿ ಉಳಿದಿಲ್ಲ. ನಿಫ್ಟಿಯ 50 ಷೇರುಗಳ ಪೈಕಿ 6 ಷೇರುಗಳು ಮಾತ್ರ ಗ್ರೀನ್ ಮಾರ್ಕ್‌ನಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ಉಳಿದ 44 ಷೇರುಗಳು ಕುಸಿತ ಕಂಡರೆ, ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ ಕೇವಲ 3 ಷೇರುಗಳು ಮಾತ್ರ ಹಸಿರು ನಿಶಾನೆಯಲ್ಲಿ ವಹಿವಾಟು ನಡೆಸಲು ಯಶಸ್ವಿಯಾಗಿವೆ, ಉಳಿದ 27 ಷೇರುಗಳು ಕೆಂಪು ನಿಶಾನೆಯಲ್ಲಿ ಮುಕ್ತಾಯ ಕಂಡಿವೆ.

ಶುಕ್ರವಾರ, ಬಿಎಸ್‌ಇಯಲ್ಲಿ 3,590 ಷೇರುಗಳು ವಹಿವಾಟಿಗೆ ಒಳಪಟ್ಟಿದ್ದು, ಇವುಗಳ ಪೈಕಿ ಕೇವಲ 936 ಷೇರುಗಳ ಬೆಲೆಯೆಲ್ಲಿ ಮಾತ್ರ ಏರಿಕೆ ಗಮನಿಸಲಾಗಿದ್ದು ಮತ್ತು 2529 ಷೇರುಗಳು ಇಳಿಕೆಯೊಂದಿಗೆ ಅಂತ್ಯ ಕಂಡಿವೆ. 115 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಗಮನಿಸಲಾಗಿಲ್ಲ ಎನ್ನಲಾಗಿದೆ. ಇಂದಿನ ವಹಿವಾಟಿನಲ್ಲಿ 214 ಶೇರುಗಳು ಅಪ್ಪರ್ ಸರ್ಕ್ಯೂಟ್‌ನೊಂದಿಗೆ ಮತ್ತು 223 ಶೇರುಗಳು ಲೋವರ್ ಸರ್ಕ್ಯೂಟ್‌ನಲ್ಲಿ ವಹಿವಾಟನ್ನು ಮುಗಿಸಿವೆ.

ಇದನ್ನೂ ಓದಿ-ಹೆಚ್ಚಿನ ಲಾಭ ಪಡೆಯಲು ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಏರಿಕೆ ಕಂಡ ಷೇರುಗಳು ಯಾವುವು?
ಇಂದಿನ ವಹಿವಾಟಿನಲ್ಲಿ ಏರಿಕೆ ಕಂಡ ಷೇರುಗಳನ್ನು ಗಮನಿಸಿದರೆ, ದಿವಿಸ್ ಲ್ಯಾಬ್ ಶೇ.1.56, ಸನ್ ಫಾರ್ಮಾ ಶೇ.1.22, ಸಿಪ್ಲಾ ಶೇ.0.71, ಟಾಟಾ ಸ್ಟೀಲ್ ಶೇ.0.68, ಐಟಿಸಿ ಶೇ.0.36, ಒಎನ್‌ಜಿಸಿ ಶೇ.0.27 ರಷ್ಟು ಗಳಿಕೆಯೊಂದಿಗೆ ತನ್ನ ದಿನದಾಂತ್ಯವನ್ನು ಕಂಡಿವೆ.

ಇದನ್ನೂ ಓದಿ-Bank Accounts : ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್‌ ಖಾತೆಗಳನ್ನು ಹೊಂದಿರಬಹುದು?

ಕುಸಿದ ಷೇರುಗಳು ಯಾವುದು?
ಕುಸಿತ ಕಂಡ ಷೇರುಗಳ ಕುರಿತು ಹೇಳುವುದಾದರೆ, ಪವರ್ ಗ್ರಿಡ್ ಶೇ.7.97, ಅಪೊಲೊ ಆಸ್ಪತ್ರೆ ಶೇ.4.10, ಹಿಂಡಾಲ್ಕೊ ಶೇ.3.62, ಅದಾನಿ ಪೋರ್ಟ್ಸ್ ಶೇ.3.54, ಎಸ್‌ಬಿಐ ಶೇ.3.01, ಮಹೀಂದ್ರಾ ಶೇ.3.01, ಬಜಾಜ್ ಫೈನಾನ್ಸ್ ಶೇ.2.79, ಎನ್‌ಟಿಪಿಸಿ 2.76 ಕುಸಿತದೊಂದಿಗೆ ದಿನದಾಂತ್ಯದ ವಹಿವಾಟನ್ನು ಮುಗಿಸಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More