Home> Business
Advertisement

TATA ಒಡೆತನಕ್ಕೆ ಸೇರಲಿದೆ Bisleri: ಭಾವನಾತ್ಮಕ ಪತ್ರ ಬರೆದ ಅಧ್ಯಕ್ಷರು ಹೇಳಿದ್ದೇನು?

TATA to acquires Bisleri: ಬಿಸ್ಲೇರಿಯನ್ನು 1984 ರಲ್ಲಿ ಜಯಂತಿಲಾಲ್ ಚೌಹಾಣ್ ಅವರು ಪ್ರಾರಂಭಿಸಿದರು. ಪ್ರಸ್ತುತ, ಕಂಪನಿಯ ಅಧ್ಯಕ್ಷ ರಮೇಶ್ ಜೆ ಚೌಹಾಣ್ ಅವರಿಗೆ 82 ವರ್ಷ ವಯಸ್ಸಾಗಿದೆ. ಬಿಸ್ಲೇರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉತ್ತರಾಧಿಕಾರಿ ಇಲ್ಲ. ಇನ್ನು ಅವರ ಮಗಳು ಜಯಂತಿಗೆ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ.

TATA ಒಡೆತನಕ್ಕೆ ಸೇರಲಿದೆ Bisleri: ಭಾವನಾತ್ಮಕ ಪತ್ರ ಬರೆದ ಅಧ್ಯಕ್ಷರು ಹೇಳಿದ್ದೇನು?

TATA to acquires Bisleri: ಕಳೆದ 30 ವರ್ಷಗಳಿಂದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾ, ಕೋಕಾಕೋಲಾದಂತಹ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಿರುವ ಬಿಸ್ಲೇರಿಯನ್ನು ಇದೀಗ ಟಾಟಾ ಗ್ರೂಪ್ ಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಬಿಸ್ಲೆರಿ ಇಂಟರ್‌ನ್ಯಾಶನಲ್ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ನಡುವಿನ ಈ ಒಪ್ಪಂದವು 6000 ರಿಂದ 7000 ಕೋಟಿಗಳ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಒಪ್ಪಂದದ ಬಗ್ಗೆ ಕಳೆದ ಎರಡು ವರ್ಷಗಳಿಂದ ಎರಡು ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದೆ.

ಇದನ್ನೂ ಓದಿ: Gold Price Today : ಇಳಿಕೆಯಾಗುತ್ತಲೇ ಇದೆ ಬಂಗಾರದ ಬೆಲೆ.! ಇಂದಿನ ಬೆಲೆ ಎಷ್ಟು ಗೊತ್ತಾ ?

ಬಿಸ್ಲೇರಿಯನ್ನು 1984 ರಲ್ಲಿ ಜಯಂತಿಲಾಲ್ ಚೌಹಾಣ್ ಅವರು ಪ್ರಾರಂಭಿಸಿದರು. ಪ್ರಸ್ತುತ, ಕಂಪನಿಯ ಅಧ್ಯಕ್ಷ ರಮೇಶ್ ಜೆ ಚೌಹಾಣ್ ಅವರಿಗೆ 82 ವರ್ಷ ವಯಸ್ಸಾಗಿದೆ. ಬಿಸ್ಲೇರಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉತ್ತರಾಧಿಕಾರಿ ಇಲ್ಲ. ಇನ್ನು ಅವರ ಮಗಳು ಜಯಂತಿಗೆ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಲಾಗುತ್ತಿದೆ.

ಬಿಸ್ಲೇರಿ ದೇಶದ ಅತಿದೊಡ್ಡ ಪ್ಯಾಕೇಜ್ಡ್ ವಾಟರ್ ಕಂಪನಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಾಟಾ ಗ್ರೂಪ್ ಇದನ್ನು ಇನ್ನಷ್ಟು ವಿಸ್ತರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬಿಸ್ಲೇರಿಯ ಅಧ್ಯಕ್ಷರು ಭಾವನಾತ್ಮಕವಾಗಿ ನುಡಿದಿದ್ದಾರೆ. “ಆದರೆ ಬಿಸ್ಲೇರಿ ಮಾರಾಟದ ನಿರ್ಧಾರ ನನ್ನನ್ನು ಕಾಡುತ್ತಿದೆ. ನಾನು ಟಾಟಾ ಅವರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಇಷ್ಟಪಡುತ್ತೇನೆ. ಅದಕ್ಕಾಗಿಯೇ ನಾನು ಅದನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ. ಇದಲ್ಲದೆ, ಅನೇಕ ಗುಂಪುಗಳು ಇದನ್ನು ಖರೀದಿಸಲು ಸಿದ್ಧವಾಗಿವೆ” ಎಂದು ರಮೇಶ್ ಜೆ ಚೌಹಾಣ್ ಹೇಳಿದರು.

ಟಾಟಾ ಗ್ರಾಹಕ ಉತ್ಪನ್ನಗಳು ಮತ್ತು ಬಿಸ್ಲೇರಿ ನಡುವಿನ ಒಪ್ಪಂದದ ಪ್ರಕಾರ, ಪ್ರಸ್ತುತ ಬಿಸ್ಲೇರಿಯ ಆಡಳಿತವು ಎರಡು ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಟಾಟಾ ಕಸ್ಟಮರ್ ಸಿಇಒ ಸುನಿಲ್ ಡಿಸೋಜಾ ಅವರೊಂದಿಗೆ ಹಲವು ಸುತ್ತಿನ ಮಾತುಕತೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚೌಹಾಣ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ 13 ನೇ ಕಂತಿನ ವರ್ಗಾವಣೆಗೂ ಮುನ್ನ ರೈತರಿಗೆ ಸಿಹಿ ಸುದ್ದಿ.! 14 ಕೋಟಿ ರೈತರ ಸಿಗಲಿದೆ ಲಾಭ

“ಕಂಪನಿಯನ್ನು ಮಾರಾಟ ಮಾಡಿದ ನಂತರ ಬಂದ ಹಣವನ್ನು ನಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ಇನ್ನೂ ಯೋಚಿಸಿಲ್ಲ. ಬಹಳ ದಿನಗಳಿಂದ ಕಷ್ಟಪಟ್ಟು ಇದನ್ನು ಸಿದ್ಧಪಡಿಸಲಾಗಿದೆ.  ನಾನು ಕಂಪನಿಯ ಜೊತೆಗೆ ಉದ್ಯೋಗಿಗಳನ್ನು ನೋಡಿಕೊಳ್ಳುವ ಉತ್ತಮರನ್ನು ಹುಡುಕುತ್ತಿದ್ದೆ” ಎಂದು ಹೇಳಿದ್ದಾರೆ ರಮೇಶ್ ಜೆ ಚೌಹಾಣ್.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More