Home> Business
Advertisement

Big Update: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ ಯೋಜನೆಯ ಮೇಲೆ ಎಷ್ಟು ಬಡ್ಡಿ? ಇಲ್ಲಿದೆ ಪಟ್ಟಿ

Small Savings Scheme Interest Rate Hiked: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ. ಈ ಹೊಸ ಬಡ್ಡಿ ದರಗಳು ನಾಳೆಯಿಂದ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿವೆ.
 

Big Update: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ ಯೋಜನೆಯ ಮೇಲೆ ಎಷ್ಟು ಬಡ್ಡಿ? ಇಲ್ಲಿದೆ ಪಟ್ಟಿ

Small Savings Scheme Interest Rate Hiked: ನೀವು ಕೂಡ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಈ ಭಾರಿ ಸಂತಸದ ಸುದ್ದಿ ಕೇವಲ ನಿಮಗಾಗಿ. ಹೌದು, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರ ಹೆಚ್ಚಿಸಿದೆ. ಈ ಹೊಸ ಬಡ್ಡಿ ದರಗಳು ನಾಳೆಯಿಂದ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿವೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ, ಏಪ್ರಿಲ್-ಜೂನ್ 2023 ತ್ರೈಮಾಸಿಕಕ್ಕೆ ಸರ್ಕಾರವು ಸಣ್ಣ ಉಳಿತಾಯದ ಬಡ್ಡಿದರಗಳನ್ನು 70 bps ವರೆಗೆ (ಬೇಸಿಸ್ ಪಾಯಿಂಟ್‌ಗಳು) ಹೆಚ್ಚಿಸಿದೆ. ಇದರ ಪ್ರಯೋಜನಗಳನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ ಪತ್ರದಂತಹ ಯೋಜನೆಗಳಿಗೆ ಸಿಗಲಿದೆ.

ಯಾವ ಯೋಜನೆಗಳ ಮೇಲೆ ಎಷ್ಟು ಬಡ್ಡಿ ಹೆಚ್ಚಾಗಿದೆ?

1. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ.8 ರಿಂದ ಶೇ. 8.2ಕ್ಕೆ ಹೆಚ್ಚಿಸಲಾಗಿದೆ.

2. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮೇಲಿನ ಬಡ್ಡಿ ದರವನ್ನು ಶೇ.7 ರಿಂದ ಶೇ.7.7 ಕ್ಕೆ ಹೆಚ್ಚಿಸಲಾಗಿದೆ.

3. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ.7.6 ರಿಂದ ಶೇ.8 ಕ್ಕೆ ಹೆಚ್ಚಿಸಲಾಗಿದೆ.

4. ಕಿಸಾನ್ ವಿಕಾಸ್ ಪತ್ರದಲ್ಲಿ ಶೇ. 7.2 (120 ತಿಂಗಳು) ರಿಂದ ಶೇ.7.5 (115 ತಿಂಗಳು) ಕ್ಕೆ ಹೆಚ್ಚಿಸಲಾಗಿದೆ.

fallbacks

ಇದನ್ನೂ ಓದಿ-8th Pay Commission ಕುರಿತು ಬಿಗ್ ಅಪ್ಡೇಟ್, ಶೇ.44 ರಷ್ಟು ಹೆಚ್ಚಾಗಲಿದೆ ವೇತನ!

PPF ನಲ್ಲಿ ಮತ್ತೆ ನಿರಾಸೆ
ಆದಾಗ್ಯೂ, ನಿವೃತ್ತಿ ಯೋಜನೆಗಳಲ್ಲಿ  ಜನಪ್ರಿಯ ಯೋಜನೆಯಾದ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಬಡ್ಡಿದರಗಳಲ್ಲಿ ಸರ್ಕಾರವು ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದು ಸತತ 12ನೇ ತ್ರೈಮಾಸಿಕವಾಗಿದ್ದು, ಪಿಪಿಎಫ್‌ನ ಬಡ್ಡಿ ದರಗಳು ಬದಲಾಗಿಲ್ಲ. ಪ್ರಸ್ತುತ ಸರ್ಕಾರವು ಈ ಯೋಜನೆಯಲ್ಲಿ ನಿಮಗೆ 7.1% ಬಡ್ಡಿದರವನ್ನು ನೀಡುತ್ತಿದೆ.

ಇದನ್ನೂ ಓದಿ-New Rules From April 1: ಏಪ್ರಿಲ್ 1 ರಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಹರಿಸದೆ ಹೋದರೆ ಹಾನಿ ತಪ್ಪದು!

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಸರ್ಕಾರವು ಪ್ರತಿ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಷ್ಕರಿಸುತ್ತದೆ. ಈ ಯೋಜನೆಗಳ ಮೇಲಿನ ಬಡ್ಡಿ ದರವು ಇದೇ ರೀತಿಯ ಮೆಚ್ಯೂರಿಟಿ ಹೊಂದಿರುವ ಸರ್ಕಾರಿ ಬಾಂಡ್‌ಗಳಲ್ಲಿ ಸರ್ಕಾರವು ಎಷ್ಟು ಲಾಭ ಗಳಿಸಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಶ್ಯಾಮಲಾ ಗೋಪಿನಾಥ್ ಸಮಿತಿಯು ಸರ್ಕಾರಕ್ಕೆ ಬಾಂಡ್ ಇಳುವರಿಗಿಂತ 25 ರಿಂದ 100 ಬಿಪಿಎಸ್ ಹೆಚ್ಚಿಗೆ ಶಿಫಾರಸು ಮಾಡಿತ್ತು. ಹಿಂದಿನ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ಆದರೆ, ಆಗ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಿರಲಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More