Home> Business
Advertisement

ಬ್ಯಾಂಕ್ ನಲ್ಲಿ Locker ಹೊಂದಿಲ್ಲವೇ? ಈಗಲೇ ಅಪ್ಲೈ ಮಾಡಿ, ಕಾರಣ ಇಲ್ಲಿದೆ

How to open Locker in Bank: ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಹೊಂದಿಲ್ಲ ಎಂದಾದಲ್ಲಿ ಅದಕ್ಕಾಗಿ ಇಂದೇ ಅಪ್ಲೈ ಮಾಡಿ. ಏಕೆಂದರೆ Locker  Facility ಕುರಿತು ಶೀಘ್ರದಲ್ಲಿಯೇ ಮಹತ್ವದ ನಿರ್ಣಯವೊಂದು ಹೊರಬೀಳುವ ಸಾಧ್ಯತೆ ಇದೆ.

ಬ್ಯಾಂಕ್ ನಲ್ಲಿ Locker ಹೊಂದಿಲ್ಲವೇ? ಈಗಲೇ ಅಪ್ಲೈ ಮಾಡಿ, ಕಾರಣ ಇಲ್ಲಿದೆ

ನವದೆಹಲಿ: How to open Locker in Bank -  ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಹೊಂದಿಲ್ಲ ಎಂದಾದಲ್ಲಿ ಅದಕ್ಕಾಗಿ ಇಂದೇ ಅಪ್ಲೈ ಮಾಡಿ. ಏಕೆಂದರೆ Locker  Facility ಕುರಿತು ಶೀಘ್ರದಲ್ಲಿಯೇ ಮಹತ್ವದ ನಿರ್ಣಯವೊಂದು ಹೊರಬೀಳುವ ಸಾಧ್ಯತೆ ಇದೆ. 6 ತಿಂಗಳಲ್ಲಿ ಬ್ಯಾಂಕುಗಳಲ್ಲಿನ ಲಾಕರ್ ಸೌಲಭ್ಯ ನಿರ್ವಹಣೆಯಲ್ಲಿ ನಿಯಂತ್ರಣವನ್ನು ತರಲು ಸುಪ್ರೀಂ ಕೋರ್ಟ್ ರಿಸರ್ವ್ ಬ್ಯಾಂಕ್‌ಗೆ (RBI)ನಿರ್ದೇಶನ ನೀಡಿದೆ. ಲಾಕರ್ ಕಾರ್ಯಾಚರಣೆಯ ಬಗ್ಗೆ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ದೂರವಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಎಂ.ಶಂತನಗೌಡರ್ ಮತ್ತು ನ್ಯಾಯಮೂರ್ತಿ ವಿನೀತ್ ಸರನ್ ಅವರ ನ್ಯಾಯಪೀಠವು ಜಾಗತೀಕರಣದೊಂದಿಗೆ ಬ್ಯಾಂಕ್ ಸಂಸ್ಥೆಗಳು ಸಾಮಾನ್ಯ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದ್ದಾರೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಆರ್ಥಿಕ ವಹಿವಾಟು ಹಲವು ಪಟ್ಟು ಹೆಚ್ಚಾಗಿರುವುದೇ ಇದಕ್ಕೆ ಕಾರಣ.

How to open Locker in Bank - ನಾವು ಕ್ರಮೇಣ ಹಣವಿಲ್ಲದ ಆರ್ಥಿಕತೆಯತ್ತ ಸಾಗುತ್ತಿದ್ದೇವೆ ಹಾಗೂ ಜನರು ತಮ್ಮ ಮನೆಗಳಲ್ಲಿ ಸಂಪತ್ತನ್ನು (ನಗದು, ಆಭರಣ ಇತ್ಯಾದಿ) ಇಡಲು ಹಿಂಜರಿಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. "ಆದ್ದರಿಂದ ಬ್ಯಾಂಕುಗಳು ಒದಗಿಸುವ ಲಾಕರ್ ಒಂದು ಅತ್ಯಗತ್ಯ ಸೇವೆಯಾಗಿದೆ" ಎಂದು ನ್ಯಾಯಪೀಠ ಹೇಳಿದೆ. ಈ ಸೇವೆಯ ಲಾಭ ನಾಗರಿಕರು ಸೇರಿದಂತೆ ವಿದೇಶಿ ನಾಗರಿಕರು ಸಹ ಪಡೆಯಬಹುದು"ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವ ಲಾಕರ್ (Bank Locker) ಗಳು ಒಂದು ಉತ್ತಮ ಆಯ್ಕೆಯಾದರೂ ಕೂಡ ಅದನ್ನು ಹಾಳುಗೆಡವಲು ಜನರು ವಂಚನೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಜನರು ತಾಂತ್ರಿಕವಾಗಿ ಜ್ಞಾನ ಹೊಂದಿಲ್ಲದಿದ್ದರೆ ಅಂತಹ ಲಾಕರ್ ಅನ್ನು ನಿರ್ವಹಿಸುವುದು ಸಹ ಅವರಿಗೆ ಕಷ್ಟವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ-PF Latest Update - PF ಕಡಿತಕ್ಕಾಗಿ ಕೇಂದ್ರ ಸರ್ಕಾರದಿಂದ Salary Ceiling ಬದಲಾವಣೆ ಸಾಧ್ಯತೆ

How to open Locker in Bank - ಗ್ರಾಹಕರು ತಮ್ಮ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಬ್ಯಾಂಕ್ ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕುಗಳು ಈ ವಿಷಯದಲ್ಲಿ ಹಿಂದೆ ಸರಿಯುವುದು ಸಾಧ್ಯವಿಲ್ಲ ಮತ್ತು ಲಾಕರ್‌ ಮೇಲೆ ತಮ್ಮ ನಿಯಂತ್ರಣ ಇಲ್ಲ ಎಂದು ಹೇಳುವುದು ಕೂಡ ಸರಿಯಲ್ಲ. ಬ್ಯಾಂಕುಗಳ ಈ ರೀತಿಯ ಕ್ರಮವು ಗ್ರಾಹಕ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಉಲ್ಲಂಘನೆ ಮಾತ್ರವಲ್ಲದೆ, ಹೂಡಿಕೆದಾರರ ವಿಶ್ವಾಸವನ್ನು ಮತ್ತು ಉದಯೋನ್ಮುಖ ಆರ್ಥಿಕತೆಯಾಗಿ ನಮ್ಮ ವಿಶ್ವಾಸಾರ್ಹತೆಯನ್ನು ಹಾನಿಗೊಳಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ- SBI Alert : ಇದು ಭಾರೀ `ಮೋಸದ ಜಾಲ', ಬಿಟ್ಟು ಬಿಡಿ ದುರಾಸೆಯ ಫಟಾಫಟ್ ಸಾಲ..!

ಆದ್ದರಿಂದ, ಆರ್‌ಬಿಐ ಇದಕ್ಕಾಗಿ ಸಮಗ್ರ ಮಾರ್ಗಸೂಚಿಯನ್ನು ಜಾರಿಗೆ ತರುವುದು ಮುಖ್ಯ, ಇದಕ್ಕಾಗಿ ಬ್ಯಾಂಕುಗಳು ಲಾಕರ್ ವಿಷಯದಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗ್ರಾಹಕರ ಮೇಲೆ ಏಕಪಕ್ಷೀಯ ಮತ್ತು ವ್ಯರ್ಥ ಪರಿಸ್ಥಿತಿಗಳನ್ನು ಹೇರುವ ಸ್ವಾತಂತ್ರ್ಯ ಬ್ಯಾಂಕುಗಳಿಗೆ ಇರಬಾರದು. ಇದನ್ನು ಗಮನದಲ್ಲಿಟ್ಟುಕೊಂಡು, ಈ ಆದೇಶದ 6 ತಿಂಗಳೊಳಗೆ ಸಮಗ್ರ ಮಾರ್ಗಸೂಚಿಗಳನ್ನುಜಾರಿಗೆ ತರಬೇಕು ಎಂದು ನ್ಯಾಯಪೀಠ ಹೇಳಿದೆ. ಈ ಸಂದರ್ಭದಲ್ಲಿ ಸೂಕ್ತ ನಿಯಮಗಳನ್ನು(Bank Locker Rules) ಮಾಡಲು ನಾವು ಆರ್‌ಬಿಐಗೆ ನಾವು ಸೂಚಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಕೋಲ್ಕತ್ತಾದ ಅಮಿತಾಬ್ ದಾಸ್‌ಗುಪ್ತಾ ಅವರ ಮನವಿಯ ಮೇರೆಗೆ ನ್ಯಾಯಾಲಯದ ಈ ವಿಚಾರಣೆ ನಡೆಸಿ ತೀರ್ಮಾನಕ್ಕೆ ಬಂದಿದೆ.

ಇದನ್ನೂ ಓದಿ-Investment In Digital Gold - ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಈ ಪೇಚು ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More