Home> Business
Advertisement

Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಈ ತಿಂಗಳು 5 ದಿನ ಬ್ಯಾಂಕ್ ಗಳು ಬಂದ್ 

ಸೆಪ್ಟೆಂಬರ್ ಆರಂಭದಲ್ಲಿ, ಈ ಒಟ್ಟು 13 ದಿನ ಬ್ಯಾಂಕ್ ರಜಾದಿನಗಳು ಇರುತ್ತವೆ ಎಂದು ನಾವು ಈ ಹಿಂದೆ ತಿಳಿಸಿದ್ದೆವು, ಅದರಲ್ಲಿ 8 ದಿನಗಳು ಕಳೆದಿವೆ.

Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಈ ತಿಂಗಳು 5 ದಿನ ಬ್ಯಾಂಕ್ ಗಳು ಬಂದ್ 

Bank Holidays In September 2022 : ಸೆಪ್ಟೆಂಬರ್ ಅರ್ಧ ತಿಂಗಳು ಕಳೆದು, ಅರ್ಧ ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸ ಉಳಿದಿದ್ದರೆ, ಅದನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ ಸೆಪ್ಟೆಂಬರ್‌ನ ಅರ್ಧ ತಿಂಗಳಲ್ಲಿ ಐದು ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅಂದರೆ ಉಳಿದ 15 ದಿನದಲ್ಲಿ 9 ದಿನ ಮಾತ್ರ ಬ್ಯಾಂಕ್ ಗಳ ಕೆಲಸ ನಡೆಯಲಿದೆ. ಸೆಪ್ಟೆಂಬರ್ ಆರಂಭದಲ್ಲಿ, ಈ ಒಟ್ಟು 13 ದಿನ ಬ್ಯಾಂಕ್ ರಜಾದಿನಗಳು ಇರುತ್ತವೆ ಎಂದು ನಾವು ಈ ಹಿಂದೆ ತಿಳಿಸಿದ್ದೆವು, ಅದರಲ್ಲಿ 8 ದಿನಗಳು ಕಳೆದಿವೆ.

ಬ್ಯಾಂಕ್ ರಜಾ ದಿನಗಳ ಪಟ್ಟಿ 

 
ನಿಮ್ಮದು ಮುಂದಿನ ದಿನಗಳಲ್ಲಿ ಯಾವುದಾದರು ಮಹತ್ವದ ಕೆಲಸಗಳಿಗೆ ಬ್ಯಾಂಕ್ ಗೆ ಹೋಗಬೇಕಾದರೆ ರಜಾ ದಿನಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ಕ್ಯಾಲೆಂಡರ್ ವರ್ಷಕ್ಕೆ ನೀಡಲಾಗುತ್ತದೆ. ಅನೇಕ ರಜಾದಿನಗಳು ರಾಷ್ಟ್ರೀಯ ಮಟ್ಟದಲ್ಲಿವೆ, ಇದರಲ್ಲಿ ಬ್ಯಾಂಕಿನ ಕೆಲಸವು ದೇಶಾದ್ಯಂತ ಬಂದ್ ಇರುತ್ತವೆ. ಇದಲ್ಲದೆ, ಕೆಲವು ಸ್ಥಳೀಯ ರಜಾದಿನಗಳು ಇವೆ, ಇದರಲ್ಲಿ ನಿರ್ದಿಷ್ಟ ಪ್ರದೇಶದ ಬ್ಯಾಂಕುಗಳು ಬಂದ್ ಇರುತ್ತವೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಕೇವಲ ₹50 ಹೂಡಿಕೆ ಮಾಡಿ 35 ಲಕ್ಷದವರೆಗೆ ಲಾಭ ಸಿಗಲಿದೆ!

ಸೆಪ್ಟೆಂಬರ್ 15 ರ ನಂತರದ ಬ್ಯಾಂಕ್ ರಜೆಗಳ ಪಟ್ಟಿ

18ನೇ ಸೆಪ್ಟೆಂಬರ್ - ಭಾನುವಾರ ರಜೆ
ಸೆಪ್ಟೆಂಬರ್ 21 - ಶ್ರೀ ನಾರಾಯಣ ಗುರು ಸಮಾಧಿ ದಿವಸ್
24 ಸೆಪ್ಟೆಂಬರ್ - ನಾಲ್ಕನೇ ಶನಿವಾರ
25 ಸೆಪ್ಟೆಂಬರ್- ಭಾನುವಾರ ರಜೆ
26 ಸೆಪ್ಟೆಂಬರ್- ನವರಾತ್ರಿ ಶುರು

ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ 21 ರಂದು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕ್ ರಜೆ ಇರುತ್ತದೆ. ಈ ದಿನ ಶ್ರೀ ನಾರಾಯಣ ಗುರು ಸಮಾಧಿ ದಿನದ ಪ್ರಯುಕ್ತ ಬ್ಯಾಂಕ್ ರಜೆ ಇರುತ್ತದೆ. ಸೆಪ್ಟೆಂಬರ್ 26 ರಂದು, ನವರಾತ್ರಿ ಸ್ಥಾಪನೆಯ ಕಾರಣ, ಮಣಿಪುರದ ಜೈಪುರ ಮತ್ತು ಇಂಫಾಲ್ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಇದಲ್ಲದೇ ಸೆಪ್ಟೆಂಬರ್ 24 ನಾಲ್ಕನೇ ಶನಿವಾರದಂದು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕೆಲಸಗಳು ನಡೆಯುವುದಿಲ್ಲ.

ಇದನ್ನೂ ಓದಿ : PM Kisan ರೈತರಿಗೆ ಸಿಹಿ ಸುದ್ದಿ : ಈ ನಂಬರ್​ಗೆ ಕರೆ ಮಾಡಿ, ಖಾತೆಗೆ ಹಣ ಯಾವಾಗ ಬರುತ್ತೆ ತಿಳಿಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More