Home> Business
Advertisement

Ola S1 Pro, Ather 450X ಮತ್ತು Hero Vida V1ಗಳಲ್ಲಿ ಯಾವುದು ಅಗ್ಗದ ಎಲೆಕ್ಟ್ರಿಕ್ ಸ್ಕೂಟ ರ್ ?

Electric Scooters:ಈ ಮೂರು ಹೀರೋ ವಿಡಾ ವಿ1, ಓಲಾ ಎಸ್ 1 ಪ್ರೊ ಮತ್ತು ಅಥರ್ 450 ಎಕ್ಸ್ ಬೆಲೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.  ಈ ಮೂಲಕ ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಯಾವುದು ಅಗ್ಗದ ಸ್ಕೂಟರ್ ಎನ್ನುವುದು ತಿಳಿಯುತ್ತದೆ. 

Ola S1 Pro, Ather 450X ಮತ್ತು Hero Vida V1ಗಳಲ್ಲಿ ಯಾವುದು ಅಗ್ಗದ ಎಲೆಕ್ಟ್ರಿಕ್ ಸ್ಕೂಟ ರ್ ?

Electric Scooters: Hero MotoCorp ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಅದುವೇ  Hero Vida V1. ಇದನ್ನು ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.  V1 Plus ಮತ್ತು V1 Pro. ಇದು Ola S1 Pro ಮತ್ತು Ather 450X ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ. ಈ ಮೂರು ಹೀರೋ ವಿಡಾ ವಿ1, ಓಲಾ ಎಸ್ 1 ಪ್ರೊ ಮತ್ತು ಅಥರ್ 450 ಎಕ್ಸ್ ಬೆಲೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.  ಈ ಮೂಲಕ ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಯಾವುದು ಅಗ್ಗದ ಸ್ಕೂಟರ್ ಎನ್ನುವುದು ತಿಳಿಯುತ್ತದೆ. 

 ಹಿರೋ ವಿಡಾ   (Hero Vida) :
Hero Vida V1 Plus  ಬೇಸ್ ವೆರಿಯೇಂಟ್ ಆಗಿದೆ. ಇದರಲ್ಲಿ Hero Vida V1 Pro ಟಾಪ್ ರೂಪಾಂತರವಾಗಿದೆ. ಮೂಲ ರೂಪಾಂತರ V1 ಪ್ಲಸ್ ಬೆಲೆ 1,45,000 ಮತ್ತು Vida V1 Pro ಬೆಲೆ 1,59,000 ರೂ. ಆಗಿದೆ.  ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 165 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೀರೋ ಕಂಪನಿ ಹೇಳಿಕೊಂಡಿದೆ. ಇದರ ಬುಕಿಂಗ್ ಅಕ್ಟೋಬರ್ 10 ರಂದು ಪ್ರಾರಂಭವಾಗಿದೆ. 

ಇದನ್ನೂ ಓದಿ : ಈ ಕಾರುಗಳ ಬೆಲೆ ಕೇವಲ 2 ಲಕ್ಷ ರೂಪಾಯಿ .! ಅತಿ ಕಡಿಮೆ ವೆಚ್ಚ ಮಾಡಿ ಕಾರಿನ ಮಾಲೀಕರಾಗುವ ಅವಕಾಶ

ಓಲಾ ಎಸ್ 1 ಪ್ರೊ (Ola S1 Pro) : 
Ola S1 Pro ಬಹು ಚರ್ಚೆಗೆ ಒಳಪಟ್ಟ ಸ್ಕೂಟರ್ ಇದಾಗಿದೆ. ಕೆಲವೊಂದು ನ್ಯೂನತೆಗಳಿದ್ದರೂ ಇದು ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇದು ಕೂಡಾ ಒಂದಾಗಿದೆ. Ola S1 Pro ಬೆಲೆ 1.40 ಲಕ್ಷ ರೂ. ಈ ಬೆಲೆಯನ್ನು  Vida V1 Plus ಜೊತೆಗೆ ಹೊಂದಿಸಿ ನೋಡಿದರೆ ಸ್ವಲ್ಪ ಅಗ್ಗವಾಗಿ ಕಾಣುತ್ತದೆ.   Vida V1 Pro ಗಿಂತ ಓಲಾ ಎಸ್ 1 ಪ್ರೊ  19,000 ರೂ ಅಗ್ಗವಾಗಿದೆ.

ಅಥರ್ 450X (Ather 450X) :
ಅಥರ್ 450X ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಉತ್ತಮ ಮನ್ನಣೆಯನ್ನು ಗಳಿಸಿದೆ. ಇದು ತನ್ನ ಸ್ಪೋರ್ಟಿ ಲುಕ್  ಮತ್ತು ಕಾರ್ಯಕ್ಷಮತೆಯಿಂದಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಅದರ ನವೀಕರಿಸಿದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಗಿದೆ. Ather 450X ಬೆಲೆ 1.55 ಲಕ್ಷ ರೂ.  ಈ ಮೂಲಕ  ಇದು Vida V1 Plus ಮತ್ತು Vida V1 Pro ನಡುವೆ ಇರುತ್ತದೆ.

ಇದನ್ನೂ ಓದಿ : Uniparts India IPO: ತಡಮಾಡದೆ ರೂ.14,425ನ್ನು ಇಲ್ಲಿ ಹೂಡಿಕೆ ಮಾಡಿ: ಬಹುದೊಡ್ಡ ಮೊತ್ತದಲ್ಲಿ ಹಣ ಗಳಿಸಿ

 ಹಿರೋ ವಿಡಾ, ಓಲಾ ಎಸ್ 1ಪ್ರೊ ಮತ್ತು ಅಥರ್ 450X ಬೆಲೆಗಳು :
 ಹಿರೋ ವಿಡಾ    ವಿ೧  ಪ್ಲಸ್ - ರೂ 1,45,000
 ಹಿರೋ ವಿಡಾ    ವಿ೧  ಪ್ಲಸ್ ಪ್ರೊ - ರೂ 1,59,000
ಓಲಾ ಎಸ್ 1 ಪ್ರೊ - ರೂ 1,39,999
ಅಥರ್ 450X  - ರೂ 1,55,657
ಮೇಲೆ ತಿಳಿಸಿರುವ ದರ ಎಕ್ಸ್ ಶೋ ರೂಂ ಬೆಲೆಯಾಗಿದೆ . 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More