Home> Business
Advertisement

Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್‌ಗಳಿವು

Affordable Bikes: ಭಾರತೀಯ ಗ್ರಾಹಕರು ಹೆಚ್ಚಾಗಿ ಮಧ್ಯಮ ವರ್ಗದವರು  ಕೈಗೆಟುಕುವ ಬೆಲೆಯ ಬೈಕ್‌ಗಳನ್ನು ಇಷ್ಟಪಡುತ್ತೇವೆ. ಅದು ಬೆಲೆ ವಿಷಯದಲ್ಲಿ ಮಾತ್ರವಲ್ಲ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಎಲ್ಲರ ನೆಚ್ಚಿನ ಬೈಕ್ ಆಗಿರುತ್ತದೆ. ಗ್ರಾಹಕರ ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕರು ಸಹ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.

Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್‌ಗಳಿವು

Affordable Bikes: ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ಈ ಸಮಯದಲ್ಲಿ ಅಗ್ಗದ ಮತ್ತು ಕೈಗೆಟುಕುವ ಮೋಟಾರ್‌ಸೈಕಲ್‌ಗಳು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿ ಹೊರಹೊಮ್ಮಿವೆ. ಅವು ಮೈಲೇಜ್‌ನ ವಿಷಯದಲ್ಲಿಯೂ ಸಹ ಎಲ್ಲರನ್ನು ಆಕರ್ಷಿಸುತ್ತವೆ. ಎಲೆಕ್ಟ್ರಿಕ್ ವಾಹನಗಳ ಖರೀದಿಯು ದೂರದ ವಿಷಯವೆಂದು ತೋರುತ್ತದೆಯಾದರೂ, ಈ ಮೋಟಾರ್‌ಸೈಕಲ್‌ಗಳು ಪ್ರಸ್ತುತ ಕಡಿಮೆ ಪೆಟ್ರೋಲ್ ನಲ್ಲಿ ಅಧಿಕ ಮೈಲೇಜ್ ನೀಡುವ ಬೈಕ್‌ಗಳಾಗಿದ್ದು, ಇವು ಮಧ್ಯಮ ವರ್ಗದ ಕುಟುಂಬಗಳ ಆದ್ಯತೆಯಾಗಿದೆ. ಈ ಸುದ್ದಿಯಲ್ಲಿ 50,000-60,000 ರೂ.ವರೆಗಿನ ಬೆಲೆಯಲ್ಲಿ ಲಭ್ಯವಾಗುವ ಉತ್ತಮ ಮೈಲೇಜ್ ನೀಡುವ ಬೈಕ್‌ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಅದ್ಭುತ ವೈಶಿಷ್ಟ್ಯಗಳೊಂದಿಗೆ ಉತ್ತಮ ಮೈಲೇಜ್ ನೀಡುವ ಬಜೆಟ್  ಬೈಕ್‌ಗಳಿವು:

ಬಜಾಜ್ CT 100:
ಬಜಾಜ್ CT 100 (Bajaj CT 100) ಬೈಕ್ CT 100 ಕಂಪನಿಯ ಅಗ್ಗದ ಬೈಕ್ ಆಗಿದ್ದು, ಇದನ್ನು ಎಲೆಕ್ಟ್ರಿಕ್ ಸ್ಟಾರ್ಟ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ. 52,510 ಆಗಿದ್ದು, ಇದರ ಉನ್ನತ ಮಾದರಿಗೆ ರೂ. 60,941 ದವರೆಗೆ ಬೆಲೆ ನಿಗದಿಗೊಳಿಸಲಾಗಿದೆ. 50,000 ರೂ. ಒಳಗಿನ ಅತ್ಯುತ್ತಮ ಬಜೆಟ್ ಬೈಕ್‌ಗಳಲ್ಲಿ ಈ ಬೈಕ್ ಅನ್ನು ಸೇರಿಸಲಾಗಿದೆ ಮತ್ತು ಇದಕ್ಕೆ 102 ಸಿಸಿ ಎಂಜಿನ್ ನೀಡಲಾಗಿದ್ದು, ಒಂದು ಲೀಟರ್ ಪೆಟ್ರೋಲ್ ನಲ್ಲಿ ಈ ಬೈಕ್ 90 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Petrol Price : ರಷ್ಯಾ ಆಫರ್ ನಂತರ ಭಾರತದಲ್ಲಿ ಪೆಟ್ರೋಲ್ ದರ ಇಳಿಕೆ?

ಟಿವಿಎಸ್ ಸ್ಪೋರ್ಟ್:
ಟಿವಿಎಸ್ ಸ್ಪೋರ್ಟ್ (TVS Sport) ಕೆಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗುವ ಸೊಗಸಾದ ಬೈಕ್ ಆಗಿದೆ. ಇದು 7.8 PS ಪವರ್ ಮತ್ತು 7.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ 99.7 cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬೈಕಿನ ಮುಂಭಾಗದ ಭಾಗವು ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಅವಳಿ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಈ ಬೈಕ್ ಅನ್ನು 1 ಲೀಟರ್ ಪೆಟ್ರೋಲ್ ನಲ್ಲಿ 75 ಕಿ.ಮೀ.ವರೆಗೆ ಕ್ರಮಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಮುಂಬೈನಲ್ಲಿ ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 57,967 ರಿಂದ ಪ್ರಾರಂಭವಾಗುತ್ತದೆ ಮತ್ತು ರೂ. 63,176 ವರೆಗೂ ಇದೆ.

ಹೀರೋ HF ಡಿಲಕ್ಸ್ :
ಹೀರೋ HF ಡಿಲಕ್ಸ್ (Hero HF Deluxe)  ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ  ತುಂಬಾ ಬೇಡಿಕೆಯ ಬೈಕ್ ಆಗಿದೆ. ಇದನ್ನು 5 ವೆರಿಯಂಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಬೈಕು 97.2 cc ಎಂಜಿನ್‌ಗೆ ಜೋಡಿಸಲ್ಪಟ್ಟಿದ್ದು ಅದು 8.36 PS ಪವರ್ ಮತ್ತು 8.05 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, 5-ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಹೆಡ್‌ಲೈಟ್ ಆನ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಬೈಕ್  1 ಲೀಟರ್ ಪೆಟ್ರೋಲ್ ನಲ್ಲಿ 82.9 ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಮುಂಬೈನಲ್ಲಿ  ಬೈಕ್‌ನ ಎಕ್ಸ್ ಶೋ ರೂಂ ಬೆಲೆ 52,040 ರೂ.ಗಳಿಂದ ಆರಂಭವಾಗಿ 62,903 ರೂ. ವರೆಗೆ ಇರಲಿದೆ. 

ಇದನ್ನೂ ಓದಿ- Income tax Financial Year: ಮಾರ್ಚ್ 31 ರೊಳಗೆ ಈ ತುರ್ತು ಕೆಲಸ ಪೂರ್ಣಗೊಳಿಸಿ, ಇಲ್ದಿದ್ರೆ ಭಾರೀ ನಷ್ಟ

ಬಜಾಜ್ ಪ್ಲಾಟಿನಾ 100:
ಬಜಾಜ್ ಪ್ಲಾಟಿನಾ 100 (Bajaj Platina 100) ಸಹ 2005 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಅತ್ಯಂತ ಕೈಗೆಟುಕುವ ಬೈಕ್‌ಗಳಲ್ಲಿ ಒಂದಾಗಿದೆ ಮತ್ತು ಕಂಪನಿಯು ಈ ಬೈಕ್‌ನ 5 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಬೈಕು ಕಿಕ್-ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್-ಸ್ಟಾರ್ಟ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ. 52,861 ಆಗಿದ್ದು, ಇದರ ಉನ್ನತ ಮಾದರಿಗೆ ರೂ. 63,541 ವರೆಗೆ ಪಾವತಿಸಬೇಕಾಗುತ್ತದೆ. ಬೈಕ್ ನೊಂದಿಗೆ 102 ಸಿಸಿ ಎಂಜಿನ್ ನೀಡಲಾಗಿದ್ದು, 1 ಲೀಟರ್ ಪೆಟ್ರೋಲ್ ನಲ್ಲಿ 90 ಕಿ.ಮೀ ವರೆಗೆ ಬೈಕ್ ಚಲಾಯಿಸಬಹುದು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More