Home> Business
Advertisement

7th Pay Commission: DAಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ

7th Pay Commission: ವಿತ್ತ ಸಚಿವಾಲಯ (Ministry Of Finance) ಹಾಗೂ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್ (Department Of Personnel And Training) ಅಧಿಕಾರಿಗಳೊಂದಿಗಿನ ನ್ಯಾಷನಲ್ ಕೌನ್ಸಿಲ್ ಆಫ್ JCM (National Council Of JCM) ಯ ಸಭೆ ಮುಂದೂಡಲಾಗಿದೆ. DAಗೆ ಸಂಬಂಧಿಸಿದ ಈ ಸಭೆ ಮೇ ತಿಂಗಳ ಕೊನೆಯವಾರದಲ್ಲಿ ನಡೆಯಬೇಕಿತ್ತು. ಆದರೆ, ಈ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆಸಲಾಗಿಲ್ಲ.

7th Pay Commission: DAಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ

ನವದೆಹಲಿ: 7th Pay Commission - ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರು ದೀರ್ಘಕಾಲದಿಂದ ತುಟ್ಟಿಭತ್ಯೆಗಾಗಿ ಕಾಯುತ್ತಿದ್ದಾರೆ. ಆದರೆ, ಹೆಚ್ಚಾಗುವ DA (Dearness Allowance) ಪಡೆಯಲು ಸರ್ಕಾರಿ ನೌಕರರು ಇನ್ನಷ್ಟು ಕಾಯಬೇಕಾಗಲಿದೆ ಎನ್ನಲಾಗಿದೆ. ಏಕೆಂದರೆ, ವಿತ್ತ ಸಚಿವಾಲಯ (Ministry Of Finance) ಹಾಗೂ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್ ಅಧಿಕಾರಿಗಳೊಂದಿಗಿನ ನ್ಯಾಷನಲ್ ಕೌನ್ಸಿಲ್ ಆಫ್ JCMಯ ಸಭೆ ಮುಂದೂಡಲಾಗಿದೆ. DAಗೆ ಸಂಬಂಧಿಸಿದ ಈ ಸಭೆ ಮೇ ತಿಂಗಳ ಕೊನೆಯವಾರದಲ್ಲಿ ನಡೆಯಬೇಕಿತ್ತು. ಆದರೆ, ಈ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆಸಲಾಗಿಲ್ಲ.

ಈ ಕುರಿತು ಮಾಹಿತಿ ನೀಡಿರುವ ನ್ಯಾಷನಲ್ ಕೌನ್ಸಿಲ್ ಆಫ್ JCM, ಮೇ ತಿಂಗಳಿನಲ್ಲಿ ನಡೆಯಬೇಕ್ಕಿದ್ದ ಸಭೆ ಈ ತಿಂಗಳು ನಡೆಯಲಿದೆ ಎಂದಿದೆ. ಏಕೆಂದರೆ ದೆಹಲಿಯಲ್ಲಿ ಕೊವಿಡ್-19 ಕಾರಣ ವಿಧಿಸಲಾಗಿರುವ ನಿರ್ಬಂಧನೆಗಳ ಕಾರಣ ಈ ಸಭೆ ನಡೆಸಲಾಗಿಲ್ಲ ಎಂದಿದೆ. ಕೊರೊನಾ ಕಾರಣ ಸರ್ಕಾರಿ ನೌಕರರಿಗೆ DA ಸಿಗುವಲ್ಲಿ ವಿಳಂಬವಾಗುತ್ತಿದೆ. ಕಳೆದ ವರ್ಷದ ಆರಂಭದಿಂದ ಈ ವರ್ಷದ ಜೂನ್‌ವರೆಗೆ ಮೂರು ಕಂತುಗಳ DA ಅನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.

ಇದನ್ನೂ ಓದಿ-Must Read For Government Employees: ಸರ್ಕಾರಿ ನೌಕರರಿಗೊಂದು ಮಹತ್ವದ ಮಾಹಿತಿ, ರಿಟೈರ್ಮೆಂಟ್ ಬಳಿಕ ಸ್ವಇಚ್ಛೆಯಿಂದ ಈ ಕೆಲಸ ಮಾಡುವಂತಿಲ್ಲ

ಎರಡನೇ ಅಥವಾ ಮೂರನೇ ವಾರದಲ್ಲಿ ಈ ಸಭೆ ನಡೆಯಲಿದೆ
ಈ ಕುರಿತು ಹೇಳಿಕೆ ನೀಡಿರುವ JCM ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ, ಈ ಸಭೆ ಈ ತಿಂಗಳ ಎರಡನೇ ಅಥವಾ ಮೂರನೆಯ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಇದರಲ್ಲಾಗುತ್ತಿರುವ ವಿಳಂಬವನ್ನು ನೌಕರರು ನಕಾರಾತ್ಮಕ ಭಾವಿಸಬಾರದು. ಏಕೆಂದರೆ ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ಈ ಕುರಿತು ಉತ್ತಮ ಸಂಕೇತಗಳು ಸಿಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- ನೌಕರರ ಡಬ್ಬಲ್ ಧಮಾಕ.! ವೇತನ ಏರಿಕೆಗೆ ಕೂಡಿ ಬಂತು ಕಾಲ.! 30 ರೊಳಗೆ ಈ ಕೆಲಸ ಮುಗಿಸಿ..!

ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸ್ತುತ ಶೇ.17ರ ದರದಲ್ಲಿ DA ಪಾವತಿಸಲಾಗುತ್ತಿದೆ. ಇದು ಶೇ 11 ರಷ್ಟು ಹೆಚ್ಚಾಗಿ ಶೇ. 28ಕ್ಕೆ ತಲುಪುವ ನಿರೀಕ್ಷೆ ಇದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಜಬರ್ದಸ್ತ್ ಏರಿಕೆಯಾಗಲಿದೆ.  ಇನ್ನೊಂದೆಡೆ , ನೌಕರರು ಎರಡು ವರ್ಷಗಳ ಡಿಎಯ ಲಾಭವನ್ನು ಏಕಕಾಲಕ್ಕೆ ಪಡೆಯಲಿದ್ದಾರೆ. ಏಕೆಂದರೆ 2020 ರ ಜನವರಿಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಲಾಗಿದೆ, ನಂತರ ದ್ವಿತೀಯಾರ್ಧದಲ್ಲಿ ಅಂದರೆ ಜೂನ್‌ನಲ್ಲಿ ಶೇ. 3 ರಷ್ಟು ಹೆಚ್ಚಳವಾಗಿದೆ. ಜನವರಿ 2021 ರಲ್ಲಿ ತುಟ್ಟಿಭತ್ಯೆಯನ್ನು ಮತ್ತೊಮ್ಮೆ ಶೇ. 4 ರಷ್ಟು  ಹೆಚ್ಚಾಗಿದೆ, ಅಂದರೆ ಕಳೆದ ವರ್ಷದ ಜನವರಿಯಿಂದ ಈ ವರ್ಷದ ಜೂನ್ ವರೆಗೆ ತುಟ್ಟಿಭತ್ಯೆ ಶೇ.11 ರಷ್ಟು ಹೆಚ್ಚಳವಾಗಿ ಶೇ.28ಕ್ಕೆ ತಲುಪಿರುವುದು ಗಮನಾರ್ಹ.

ಇದನ್ನೂ ಓದಿ- Banking Alert : ನಿಮ್ಮ ಖಾತೆಗೆ ನಿಮ್ಮದಲ್ಲದ ದೊಡ್ಡ ಮೊತ್ತದ ಹಣ ಕ್ರೆಡಿಟ್ ಆದರೆ ಏನು ಮಾಡಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More